ಆ್ಯಪ್ನಗರ

ಚಾಮುಂಡಿಬೆಟ್ಟದಲ್ಲಿ ಮಧ್ಯವರ್ತಿಗಳ ನಡುವೆ ಮಾರಾಮಾರಿ: ವಿಡಿಯೋ ವೈರಲ್‌

ಮೈಸೂರಿನ ಚಾಮುಂಡಿ ಬೆಟ್ಟ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಪ್ರವಾಸಿಗರು ಸಂಖ್ಯೆ ಹೆಚ್ಚಾದಂತೆ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಾಗಿದೆ. ಈಗ ಮಧ್ಯವರ್ತಿಗಳೇ ಕಮೀಷನ್‌ಗಾಗಿ ಹೊಡೆದಾಡಿಕೊಂಡಿದ್ದಾರೆ.

Vijaya Karnataka Web 28 Oct 2019, 6:58 pm
ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬರುವ ಪ್ರವಾಸಿಗರನ್ನು ಸೆಳೆಯುವ ವಿಚಾರದಲ್ಲಿ ಮಧ್ಯವರ್ತಿಗಳ ನಡುವೆ ಮಾರಾಮಾರಿ ನಡೆದಿದೆ. ಸದ್ಯ ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Vijaya Karnataka Web ಚಾಮುಂಡಿ ಬೆಟ್ಟದಲ್ಲಿ ಬಡಿದಾಟ
ಚಾಮುಂಡಿ ಬೆಟ್ಟದಲ್ಲಿ ಬಡಿದಾಟ


ಬೇರೆ- ಬೇರೆ ಜಿಲ್ಲೆಗಳಿಂದ ಹಾಗೂ ರಾಜ್ಯಗಳಿಂದಲೇ ಬರುವ ಜನರನ್ನು ದೊಡ್ಡ- ದೊಡ್ಡ ಅಂಗಡಿಗೆ ಕರೆದೊಯ್ಯುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಗಲಾಟೆ ನಡೆದಿದೆ. ಕಮಿಷನ್ ಆಸೆಗಾಗಿ ಚಾಮುಂಡಿ ಬೆಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುವಲ್ಲಿ ಮಧ್ಯವರ್ತಿಗಳ ನಡುವೆ ಪೈಪೋಟಿ ಹಲವು ವರ್ಷಗಳಿಂದಲೇ ಇದೆ.

ಇದೇ ವಿಚಾರಕ್ಕಾಗಿ ಮಧ್ಯವರ್ತಿಗಳು ಮಾತಿನ ಚಕಮಕಿಗಿಳಿದಿದ್ದಾರೆ.ಈ ವೇಳೆ ಪರಸ್ಪರ ಹೊಡೆದಾಟಕ್ಕೆ ತಿರುಗಿದ್ದು, ಮಧ್ಯವರ್ತಿಗಳು ಸಾರ್ವಜನಿಕವಾಗಿ ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿದ್ದಾರೆ.

ಮದ್ಯವರ್ತಿಗಳ ಮಾರಾಮಾರಿ ದೃಶ್ಯ ಬೆಟ್ಟಕ್ಕೆ ಭೇಟಿ ನೀಡಿದ ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ. ಹೀಗೆ ಮಧ್ಯವರ್ತಿಗಳ ಗಲಾಟೆ ಕಂಡು ಸಾರ್ವಜನಿಕರು ಹಾಗೂ ಭಕ್ತರು ಬೆಚ್ಚಿಬಿದ್ದರು.

ಮಧ್ಯವರ್ತಿಗಳ ಹಾವಳಿ ಸಾರ್ವಜನಿಕರಿಗೆ ಆಗಾಗ್ಗೆ ಕಿರಿಕಿರಿ ತರುತ್ತಿದ್ದು, ಇಷ್ಟಾದರೂ ಪೊಲೀಸರು ಮಾತ್ರ ಮಧ್ಯವರ್ತಿಗಳ ವಿರುದ್ಧ ಸರಿಯಾದ ಕ್ರಮಕ್ಕೆ ಮುಂದಾಗದಿರುವ ಬಗ್ಗೆ ಸಾವರ್ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ