ಆ್ಯಪ್ನಗರ

KC Narayana Gowda: ರೌಡಿಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್: ಕೆಸಿ ನಾರಾಯಣಗೌಡ

KC Narayana Gowda on Congress - ರೌಡಿ ರಾಜಕೀಯದ ವಿಚಾರವಾಗಿ ಕಾಂಗ್ರೆಸ್‌ ವಿರುದ್ಧ ಸಚಿವ ಕೆಸಿ ನಾರಾಯಣಗೌಡ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಗೂಂಡಾಗಳನ್ನು ಹುಟ್ಟು ಹಾಕಿರುವುದೇ ಕಾಂಗ್ರೆಸ್‌. ಕಾಂಗ್ರೆಸ್‌ನಲ್ಲಿ ಎಷ್ಟು ಜನ ಗೂಂಡಾಗಳಿಲ್ಲ ಹೇಳಿ, ಅವರನ್ನು ಏಕೆ ಓಡಿಸಿಲ್ಲ ಎಂದು ಕಿಡಿಕಾರಿದ್ದಾರೆ.

Edited byಅವಿನಾಶ ವಗರನಾಳ | Vijaya Karnataka Web 12 Dec 2022, 4:27 pm

ಹೈಲೈಟ್ಸ್‌:


  • ರೌಡಿ ರಾಜಕೀಯದ ವಿಚಾರವಾಗಿ ಕಾಂಗ್ರೆಸ್‌ ವಿರುದ್ಧ ಕೆಸಿ ನಾರಾಯಣಗೌಡ ವಾಗ್ದಾಳಿ
  • ರೌಡಿಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್‌ ಎಂದು ಕೆಸಿ ನಾರಾಯಣಗೌಡ ಕಿಡಿ
  • ನಾವು ಹದಿನೇಳು ಮಂದಿ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಕಿಡಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web KC narayanagowda
ಕೆಸಿ ನಾರಾಯಣಗೌಡ, ಸಚಿವ (ಸಂಗ್ರಹ ಚಿತ್ರ)
ಮೈಸೂರು: ಗೂಂಡಾಗಳನ್ನು ಹುಟ್ಟು ಹಾಕಿದ್ದು ಯಾರು? ಗೂಂಡಾಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್‌. ಕಾಂಗ್ರೆಸ್‌ನಲ್ಲಿ ಎಷ್ಟು ಜನ ಗೂಂಡಾಗಳಿಲ್ಲ ಹೇಳಿ, ಅವರನ್ನು ಏಕೆ ಓಡಿಸಿಲ್ಲ ಎಂದು ಸಚಿವ ಕೆಸಿ ನಾರಾಯಣಗೌಡ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ ರೌಡಿಗಳ ಟೀಕೆಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಅಲ್ಲಿ ಟ್ರೈನಿಂಗ್ ಕೊಟ್ಟು ಯಾವಾಗಲೂ ಗುಂಡಾಗಳೇ ಆಗಿರ್ತಾರೆ ಅನ್ನೋದು ಸರಿಯಲ್ಲ. ಬಿಜೆಪಿ ಸೇರ್ಪಡೆ ಆಗುವವರನ್ನು ರೌಡಿ ಶೀಟರ್ ಎಂದು ಹೇಳುತ್ತಿದ್ದಾರೆ. ಅವರಿಗೆ ಹೊಟ್ಟೆ ಉರಿ, ಅಲ್ಲಿದ್ದವರು ಬಿಜೆಪಿ ಸೇರುತ್ತಿರುವುದನ್ನು ಸಹಿಸಿಕೊಳ್ಳಲಾಗದೇ ಈ ರೀತಿ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಸೇರ್ಪಡೆಗೆ ಮುಂದಾಗಿರುವವರು ಅವರ ಪಕ್ಷದಲ್ಲಿ ಇರುವವರೆಗೂ ರೌಡಿಶೀಟರ್‌ಗಳಾಗಿರಲಿಲ್ಲವೇ? ರೌಡಿ ಶೀಟರ್‌ಗಳಿಗೆ ಮನಿ ಫಂಡ್ ಮಾಡುತ್ತಿದ್ದವರು ಯಾರು? ಬಿಜೆಪಿಯಲ್ಲಿ ಇರುವವರು ಪುಣ್ಯಾತ್ಮರು, ವಿದ್ಯಾವಂತರು, ತ್ಯಾಗಿಗಳು. ಆರ್‌ಎಸ್‌ ಸ್ ಹಿನ್ನೆಲೆಯುಳ್ಳವರು. ಕುಡುಗೋಲು, ಮಚ್ಚು ಹಿಡಿದಿರುವವರು ಬಿಜೆಪಿಯಲ್ಲಿಲ್ಲ. ಕುಡುಗೋಲು, ಮಚ್ಚು ಹಿಡಿಯುವವರು ಯಾವ ಪಕ್ಷದಲ್ಲಿದ್ದಾರೆಂದು ಎಲ್ಲರಿಗೂ ಗೊತ್ತಿದೆ ಎಂದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತಗಳಿಸಿ ಅಧಿಕಾರಕ್ಕೆ ಬರಲಿದೆ. ಗುಜರಾತ್‌ನಂತೆ ಕರ್ನಾಟಕದಲ್ಲೂ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ನಾರಾಯಣಗೌಡ ಭವಿಷ್ಯ ನುಡಿದರು. ಹಿಮಾಚಲ ಪ್ರದೇಶದಲ್ಲಿ ಕೆಲವೊಂದು ಕಾರಣಗಳಿಂದ‌ ಸೋಲಾಗಿದೆ. ಸ್ಥಳೀಯ ಕಾರಣಗಳಿಂದ ಅಲ್ಲಿ ಬಿಜೆಪಿಗೆ ಸೋಲಾಗಿದೆ. ಮುಂಬರುವ ವಿಧಾಸಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲೂ ಜನಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಹೇಳಿದರು.

ಬಿಜೆಪಿಗೆ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ 60 ರೌಡಿಗಳು! ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಸಚ್ಚಿದಾನಂದ ಈಗಾಗಲೇ ಬಿಜೆಪಿ ಸೇರಿದ್ದಾರೆ. ಮುಂಬರುವ ದಿನಗಳಲ್ಲಿ ಮಂಡ್ಯ ಜಿಲ್ಲೆಯ ಮತ್ತಷ್ಟು ನಾಯಕರು ಬಿಜೆಪಿಗೆ ಸೇರಲಿದ್ದಾರೆ.
ಯಾವೆಲ್ಲಾ ನಾಯಕರು ಬಿಜೆಪಿ ಸೇರಲಿದ್ದಾರೆ ಎಂಬುದನ್ನು ಈಗ ಹೇಳುವುದಿಲ್ಲ ಎಂದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕರು ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆ ಆಗಲಿದ್ದಾರೆಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಅಲ್ಲಗಳೆದ ಸಚಿವ ಕೆಸಿ ನಾರಾಯಣಗೌಡ , ನಾವು ಹದಿನೇಳು ಮಂದಿ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಬಿಜೆಪಿ ಸೇರ್ಪಡೆ ಆದ ಬಳಿಕ ನಮ್ಮನ್ನು ಪಕ್ಷ ಚೆನ್ನಾಗಿ ನಡೆಸಿಕೊಂಡಿದೆ. ಸಚಿವ ಸ್ಥಾನ ಕೊಟ್ಟು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ನಾವು ಬಿಜೆಪಿ ತೊರೆಯುವುದಿಲ್ಲ. ಬಿಜೆಪಿಯಲ್ಲೇ ಮುಂದುವರೆಯುತ್ತೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಹೇಳಿದರು.

Salient Sunil :ಸರ್ಕಾರದ ಬೆಂಬಲವಿದೆ ಎಂದು ತಿಳಿದಿದ್ದೇ ತಡ ಭೂಗತಲೋಕ ಮತ್ತೆ ಆಕ್ಟಿವ್ ಆಗಿದೆ: ಕಾಂಗ್ರೆಸ್ ಆರೋಪ
ಕಾಂಗ್ರೆಸ್‌ VS ಬಿಜೆಪಿ ನಡುವೆ ರೌಡಿ ರಾಜಕೀಯ!
ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ರೌಡಿಶೀಟರ್‌ಗಳ ವಿಚಾರಕ್ಕಾಗಿ ಕಳೆದೊಂದು ತಿಂಗಳಿಂದ ವಾಕ್ಸಮರವೇ ನಡೆಯುತ್ತಿದೆ. ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದರಾದ ಪಿಸಿ ಮೋಹನ್‌ ಹಾಗೂ ತೇಜಸ್ವಿ ಸೂರ್ಯ ಅವರು ರೌಡಿಶೀಟರ್‌ ಸೈಲೆಂಟ್‌ ಸುನೀಲ್‌ನ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಕಾಂಗ್ರೆಸ್‌ ಕಿಡಿಕಾರಿತ್ತು. ಅದಾದ ಬಳಿಕ ಮಂಡ್ಯದ ನಾಗಮಂಗಲದಲ್ಲಿ ಫೈಟರ್‌ ರವಿ ಎನ್ನುವವರು ಬಿಜೆಪಿ ಸೇರಿದ್ದಕ್ಕೆ ಕೈ ನಾಯಕರು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರನ್ನೇ ಗುರಿಯಾಗಿಸಿಕೊಂಡು ಕೊತ್ವಾಲನ ಶಿಷ್ಯನ ಆ ದಿನಗಳನ್ನು ಮರೆತುಬಿಟ್ಟಿದ್ದಾರೆಯೇ ಎಂದು ಪ್ರಶ್ನಿಸಿತ್ತು.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ