ಆ್ಯಪ್ನಗರ

ದಲಿತರಿಗೆ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿದ್ದರಾಮಯ್ಯ ಟ್ವಿಟ್‌ಗೆ ಶ್ರೀನಿವಾಸಪ್ರಸಾದ್‌ ಕಿಡಿ

ರಾಜ್ಯದ ದಲಿತ ಸಂಸದರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಇರುವುದರ ಬಗ್ಗೆ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ವಿ.ಶ್ರೀನಿವಾಸಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

Vijaya Karnataka 9 Jun 2019, 5:00 am
ಮೈಸೂರು: ರಾಜ್ಯದ ದಲಿತ ಸಂಸದರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಇರುವುದರ ಬಗ್ಗೆ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ವಿ.ಶ್ರೀನಿವಾಸಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web minister post at cabinet extend time srinivasprasad angry with siddu tweet
ದಲಿತರಿಗೆ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿದ್ದರಾಮಯ್ಯ ಟ್ವಿಟ್‌ಗೆ ಶ್ರೀನಿವಾಸಪ್ರಸಾದ್‌ ಕಿಡಿ


''ಸಿದ್ದರಾಮಯ್ಯನಿಗೆ ಪ್ರತಿ ಹಂತದಲ್ಲೂ ಮುಖಭಂಗವಾಗಿದೆ. ಅವನು ನಾಚಿಕೆಗೆಟ್ಟ ಮನುಷ್ಯ. ಮೈಸೂರು ಜಿಲ್ಲೆಯಲ್ಲಿ ಮುಖ ತೋರಿಸದಂತೆ ಆಗಿದೆ. ಅವನ ಮಾತಿಗೆ ಪ್ರತಿಕ್ರಿಯೆ ನೀಡಲ್ಲ'' ಎಂದರು.

ಮೈಸೂರಿನ ಜಯಲಕ್ಷ್ಮೇಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸಂಪುಟ ರಚನೆ ವೇಳೆ ದಲಿತರಿಗೆ ಅನ್ಯಾಯವಾಗಿಲ್ಲ. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡೋದು ನಮ್ಮ ಗುರಿ. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ದಲಿತರಿಗೆ ಅವಕಾಶ ಸಿಗಲಿದೆ'' ಎಂದು ಹೇಳಿದರು.

''ಬೆಂಗಳೂರಿನಲ್ಲಿ ನೂತನ ಸಂಸದರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಈಗಾಗಲೇ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರು ಮುಂದಿನ ಸಂಪುಟ ವಿಸ್ತರಣೆಯಲ್ಲಿ ದಲಿತ ಸಮುದಾಯಕ್ಕೆ ಸಚಿವ ಸ್ಥಾನ ಸಿಗಲಿದೆ'' ಎಂದಿದ್ದಾರೆ.

''ರಾಷ್ಟ್ರದಲ್ಲಿ ಈಗಾಗಲೇ 10 ಎಸ್ಸಿ, ಎಸ್ಟಿ ಸಂಸದರಿಗೆ ಸಚಿವ ಸ್ಥಾನ ನೀಡಿದ್ದಾರೆ. ಮುಂದೆ ರಾಜ್ಯದಲ್ಲೂ ದಲಿತರಿಗೆ ಅವಕಾಶ ಸಿಗಲಿದೆ. ಕಾದು ನೋಡೋಣ'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ