ಆ್ಯಪ್ನಗರ

ಸುತ್ತೂರು ಮಠಕ್ಕೆ ಸಚಿವ ಸೋಮಣ್ಣ ಭೇಟಿ

ನೆರೆಪೀಡಿತ ಪ್ರದೇಶಗಳಲ್ಲಿ ಪರಿಶೀಲನಾ ಕಾರ್ಯ ಪ್ರಗತಿ ತಿಳಿಯಲು ಪ್ರತಿಯೊಂದು ಜಿಲ್ಲೆಗಳಿಗೆ ನೂತನ ಸಚಿವರಾದವರನ್ನು ಮುಖ್ಯಮಂತ್ರಿಗಳು ನೇಮಿಸಿದ್ದಾರೆ. ಅದರಂತೆ ನಾನು ಚಾಮರಾಜನಗರ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ನಾಳೆ ಭೇಟಿ ನೀಡಲಿದ್ದೇನೆ ಎಂದು ನೂತನ ಸಚಿವ ವಿ. ಸೋಮಣ್ಣ ಹೇಳಿದರು.

Vijaya Karnataka 22 Aug 2019, 5:00 am
ಮೈಸೂರು: ನೆರೆಪೀಡಿತ ಪ್ರದೇಶಗಳಲ್ಲಿ ಪರಿಶೀಲನಾ ಕಾರ್ಯ ಪ್ರಗತಿ ತಿಳಿಯಲು ಪ್ರತಿಯೊಂದು ಜಿಲ್ಲೆಗಳಿಗೆ ನೂತನ ಸಚಿವರಾದವರನ್ನು ಮುಖ್ಯಮಂತ್ರಿಗಳು ನೇಮಿಸಿದ್ದಾರೆ. ಅದರಂತೆ ನಾನು ಚಾಮರಾಜನಗರ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ನಾಳೆ ಭೇಟಿ ನೀಡಲಿದ್ದೇನೆ ಎಂದು ನೂತನ ಸಚಿವ ವಿ. ಸೋಮಣ್ಣ ಹೇಳಿದರು.
Vijaya Karnataka Web minister somanna meets sutturu math
ಸುತ್ತೂರು ಮಠಕ್ಕೆ ಸಚಿವ ಸೋಮಣ್ಣ ಭೇಟಿ


ಮೈಸೂರಿನ ಸುತ್ತೂರು ಮಠಕ್ಕೆ ಬುಧವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.

ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ಮುನ್ನ ಮಠಾದೀಶರ ಆಶೀರ್ವಾದ ಪಡೆಯುವುದು ನಮ್ಮ ಸಂಪ್ರದಾಯ. ಹಾಗಾಗಿ ಸರಕಾರದ ಕೆಲಸ ಮಾಡಲು ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ನಂತರ ಮಾಡಿದರೆ ಮನಸಿಗೆ ಹರುಷ ಸಿಗಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯನ್ನು ಪರಿಶೀಲನೆ ನಡೆಸಲು ಇಂದಿನಿಂದಲೇ ಎಲ್ಲಾ ಭಾಗಗಳಲ್ಲಿ ಸಂಚರಿಸುವಂತೆ ಸಚಿವರಿಗೆ ತಿಳಿಸಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಸರ್ಕಾರ ಎಲ್ಲಾ ಸೌಲಭ್ಯ ನೀಡಲಿದೆ ಎಂದರು.

ಸಂಪುಟ ರಚನೆ ನಿಧಾನವಾಗಿದ್ದರಿಂದ ಮುಖ್ಯಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಅವರು ಅಧಿಕಾರಿಗಳಿಗೆ ನೀಡಿರುವ ಪ್ರಗತಿ ಕಾರ್ಯಗಳನ್ನು ಹೇಗೆ ನಿರ್ವಹಣೆ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ನಂತರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ನಿರಂಜನ್‌ ಕುರ್ಮಾ, ಹರ್ಷವರ್ಧನ, ಬಿ.ಜೆ.ಪಿ ಮುಖಂಡ ಪಿ.ರಾಜೀವ್‌ ಹಾಗೂ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ