ಆ್ಯಪ್ನಗರ

ದಸರಾ ವೇಳೆ ಡಿಸಿಯಿಂದ ಶಿಷ್ಟಾಚಾರ ಉಲ್ಲಂಘನೆ: ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್‌ ಆರೋಪ

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಸಾರಾ ಮಹೇಶ್‌ ಅವರ ವಾಗ್ದಾಳಿ ಮುಂದುವರೆದಿದೆ. ಈ ಹಿಂದೆ ಕನ್ನಡಿಗ ಡಿಸಿಯನ್ನು ವರ್ಗಾವಣೆ ಮಾಡಿ ಸಿಂಧೂರಿ ಅವರನ್ನು ಮೈಸೂರಿಗೆ ನಿಯೋಜಿಸಿದ್ದಕ್ಕೆ ಗರಂ ಆಗಿದ್ದ ಶಾಸಕರು ಈಗ ದಸರಾ ವೇಳೆ ಡಿಸಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Vijaya Karnataka Web 4 Nov 2020, 7:18 pm
ಮೈಸೂರು: ವಿಶ್ವವಿಖ್ಯಾತ ಜಂಬೂ ಸವಾರಿ ದಿನದಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್‌ ಆರೋಪಿಸಿದ್ದಾರೆ. ಜಂಬೂ ಸವಾರಿ ದಿನದಂದು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಮಹಾರಾಜರಿಗೆ ಅವಕಾಶ ನೀಡದೆ ತಾವೇ ಮುಂದೆ ಬಂದು ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಸಾ.ರಾ.ಮಹೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web ರೋಹಿಣಿ ಸಿಂಧೂರಿ, ಸಾರಾ ಮಹೇಶ್‌
ಸಂಗ್ರಹ ಚಿತ್ರ


ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕ ಸಾ.ರಾ.ಮಹೇಶ್, ನಿಯಮದ ಪ್ರಕಾರ ಮೊದಲು ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು, ಮೇಯರ್‌ ಮತ್ತು ರಾಜ ವಂಶಸ್ಥರು ನಂತರದಲ್ಲಿ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ನಿಲ್ಲಬೇಕು. ಆದರೆ, ಜಿಲ್ಲಾಧಿಕಾರಿ ರೊಹಿಣಿ ಸಿಂಧೂರಿ ರಾಜವಂಶ್ಥರಿಗೆ ಸ್ಥಳಾವಕಾಶ ನೀಡದೆ ಅವರನ್ನೆ ಕೊನೆಯಲ್ಲಿ ನಿಲ್ಲುವಂತೆ ಮಾಡಿದ್ದರು ಎಂದರು.

ಜಿಲ್ಲಾಧಿಕಾರಿಗಳ ಈ ನಡೆ ಶಿಷ್ಟಾಚಾರ ಹಾಗೂ ಸಂಪ್ರದಾಯದ ಉಲ್ಲಂಘನೆ ಆಗಿದೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಶಾಸಕರು ಗಂಭೀರ ಆರೋಪ ಮಾಡಿದ್ದಾರೆ. ವಾಲ್ಮೀಕಿ ಜಯಂತಿಯಂದು ಜಿಲ್ಲಾಡಳಿತದ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಿಯಮ. ಆದರೆ, ರೋಹಿಣಿ ಸಿಂಧೂರಿಯವರು ವಾಲ್ಮೀಕಿ ಜಯಂತಿಯಂದು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಇದು ಮಹಾಪುರುಷ ವಾಲ್ಮೀಕಿ ಅವರ ಕುರಿತು ಡಿಸಿ ತೋರಿರುವ ದಿವ್ಯ ನಿರ್ಲಕ್ಷ್ಯ ಎಂದರು.

ಮೈಸೂರು ಏರ್‌ಪೋರ್ಟ್‌ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ..! ಅಕ್ಟೋಬರ್‌ನಲ್ಲಿ 6,000+ ಮಂದಿ ಸಂಚಾರ

ಇತರ ಕಿರಿಯ ಅಧಿಕಾರಿಗಳಿಗೆ ಮಾದರಿಯಾಗಬೇಕಿದ್ದ ಜಿಲ್ಲಾಧಿಕಾರಿಗಳ ನಡೆ ಈ ರೀತಿ ಇರಬಾರದು. ರೋಹಿಣಿ ಸಿಂಧೂರಿ ಅವರಿಗೆ ನಾಡಿನ ಶಿಷ್ಟಾಚಾರ, ಸಂಪ್ರದಾಯ ಹಾಗೂ ಪರಂಪರೆಗಳ ಕುರಿತಾಗಿ ಸೂಕ್ತ ತಿಳುವಳಿಕೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಸಾ.ರಾ. ಮಹೇಶ್ ಮನವಿ ಮಾಡಿದ್ದಾರೆ.

ಮೈಸೂರು: ಕೊರೊನಾ ಸೋಂಕಿತ ಹಿರಿಯರ ಮೇಲೆ ಹೆಚ್ಚು ನಿಗಾ ಇರಲಿ | ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ