ಆ್ಯಪ್ನಗರ

ಸಾಹಿತ್ಯ ಸಮ್ಮೇಳನದಲ್ಲಿ ಮೋದಿ ಜಾಕೆಟ್‌ ಹವಾ..!

ಜನಪ್ರಿಯ ಮೋದಿ ಜಾಕೆಟ್‌ಗಳ ಹವಾ 83ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಮುಂದುವರೆಯಿತು.

Vijaya Karnataka 26 Nov 2017, 10:27 pm

ಮೈಸೂರು: ಜನಪ್ರಿಯ ಮೋದಿ ಜಾಕೆಟ್‌ಗಳ ಹವಾ 83ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಮುಂದುವರೆಯಿತು.

Vijaya Karnataka Web modi jacket
ಸಾಹಿತ್ಯ ಸಮ್ಮೇಳನದಲ್ಲಿ ಮೋದಿ ಜಾಕೆಟ್‌ ಹವಾ..!


ಸಮ್ಮೇಳನ ನಡೆಯುತ್ತಿರುವ ಮಹಾರಾಜ ಕಾಲೇಜು ಮೈದಾನ ತುಂಬೆಲ್ಲ ಜಾಕೆಟ್‌ಗಳ ಖರೀದಿ ಜೋರಾಗಿತ್ತು. ಮಕ್ಕಳಿಂದ ಹಿಡಿದು ಇಳಿವಯಸ್ಸಿನವರೂ ಜಾಕೆಟ್‌ ಧರಿಸಿ ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದೇಶದಲ್ಲಿ ಎಲ್ಲೇ ಬೃಹತ್‌ ಕಾರ‍್ಯಕ್ರಮಗಳಾದರೂ ಅದನ್ನು ಗುರುತಿಸಿ ಜಾಕೆಟ್‌ ಮಾರಾಟ ಮಾಡುವ ಉತ್ತರ ಪ್ರದೇಶದ 30 ವ್ಯಾಪಾರಸ್ಥರ ತಂಡ ಸಾಹಿತ್ಯ ಸಮ್ಮೇಳನಕ್ಕೂ ಲಗ್ಗೆ ಇಟ್ಟು ಜನ, ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಸಮ್ಮೇಳನದಲ್ಲಿ ಮಾರಾಟವಾಗಿರುವ ಜಾಕೆಟ್‌ಗಳನ್ನು ಕೌಶಲ್ಯ ಭಾರತ ಯೋಜನೆಯಡಿ ತಯಾರು ಮಾಡಲಾಗಿದ್ದು, ಉತ್ತರ ಪ್ರದೇಶದ ಮಹಿಳೆಯರ ಕುಸುರಿ ಕೌಶಲ್ಯ ಈ ಜಾಕೆಟ್‌ಗಳಲ್ಲಿ ಎದ್ದು ಕಾಣುತ್ತಿದೆ. ಬಟ್ಟೆಯ ಗುಣಮಟ್ಟದ ಅನುಗುಣವಾಗಿ ಜಾಕೆಟ್‌ಗಳನ್ನು 150, 200, 250 ಹಾಗೂ 300 ರೂಪಾಯಿಗೆ ಮಾರಾಟ ಮಾಡಿದರು.

ಉ.ಪ್ರ.ದಲ್ಲಿ ಹಳೇ ಟ್ರೆಂಡ್‌: ಪ್ರಧಾನಿ ಮೋದಿ ಧರಿಸುತ್ತಿರುವ ಬಣ್ಣದ ಜಾಕೆಟ್‌ಗಳು ಈ ಹಿಂದಿನಿಂದಲೂ ಉತ್ತರ ಪ್ರದೇಶದಲ್ಲಿ ಟ್ರೆಂಡ್‌ ಆಗಿತ್ತು. ಪ್ರಧಾನಿ ಅವರು ಅಂಥ ಜಾಕೆಟ್‌ಗಳನ್ನೇ ಧರಿಸಿದ್ದರಿಂದ ಅದು ಮೋದಿ ಜಾಕೆಟ್‌ ಎಂದು ಖ್ಯಾತಿ ಪಡೆಯಿತು. ಇದರಿಂದ ನಮ್ಮ ವ್ಯಾಪಾರಕ್ಕೂ ಹೆಚ್ಚು ಲಾಭವಾಯಿತು ಎನ್ನುತ್ತಾರೆ ತಂಡದ ಸಂಯೋಜಕ ಬಾಚೂ ಸಿಂಗ್‌.

ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ನಾವು 30 ಜನ ಬಂದಿದ್ದೇವೆ. ಮೊದಲ ದಿನಕ್ಕಿಂತ ಇಂದು ಹೆಚ್ಚು ಜನರು ಖರೀದಿ ಮಾಡಿದರು. ಇವತ್ತು 200 ಜಾಕೆಟ್‌ ಮಾರಾಟವಾಗಿದೆ. ಉತ್ತರ ಭಾರತದಲ್ಲಿ ಹೆಚ್ಚು ಜನ ಇದೇ ಮಾದರಿ ಉಡುಗೆ ಧರಿಸುತ್ತಾರೆ. ಆದರೆ ದಕ್ಷಿಣ ಭಾಗದಲ್ಲಿ ಇದೀಗ ಟ್ರೆಂಡ್‌ ಸೃಷ್ಟಿಯಾಗುತ್ತಿದೆ. ಆದರೆ ಉತ್ಪನ್ನ ಸಿಗುತ್ತಿಲ್ಲ. ಹಾಗಾಗಿ ನಾವು ದಕ್ಷಿಣ ಭಾರತವನ್ನು ಗುರಿಯಾಗಿಸಿಕೊಂಡು ಇಲ್ಲಿಗೆ ಬರುತ್ತೇವೆ. ಇಲ್ಲಿನ ಜನರಿಂದಲೂ ನಮ್ಮ ನೀರಿಕ್ಷೆಗೆ ತಕ್ಕಂತೆ ಪ್ರತಿಕ್ರಿಯೆ ಸಿಗುತ್ತದೆ.

- ಸುಧೀರ್‌, ಮಾರಾಟಗಾರರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ