ಆ್ಯಪ್ನಗರ

ಟಿಪ್ಪು ಜಯಂತಿ, ಮಹಿಷಾಸುರ ದಸರಾಗೆ ತಡೆ ನೀಡಿ: ಸಿಎಂಗೆ ಪ್ರತಾಪ್ ಸಿಂಹ ಮನವಿ

ಈ ಬಾರಿ ಟಿಪ್ಪು ಜಯಂತಿಯನ್ನು ರಾಜ್ಯ ಸರಕಾರದ ವತಿಯಿಂದ ನಡೆಸಬಾರದು ಹಾಗೂ ಬುದ್ಧಿ ಜೀವಿಗಳು ನಡೆಸುತ್ತಿರುವ ಮಹಿಷಾಸುರ ದಸರಾವನ್ನು ನಡೆಯಲು ಬಿಡಬಾರದು ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ತಿಳಿಸಿದ್ದಾರೆ. ದಸರಾ ಉದ್ಘಾಟನೆ ವೇಳೆ ಸಿಎಂ ಕುಮಾರಸ್ವಾಮಿಗೆ ಪ್ರತಾಪ್‌ ಸಿಂಹ ಮನವಿ ಮಾಡಿದ್ದಾರೆ.

Vijaya Karnataka Web 10 Oct 2018, 2:27 pm
ಮೈಸೂರು: ''ಲಕ್ಷಾಂತರ ಜನರ ಭಾವನೆಯ ಪ್ರತೀಕವಾದ ದಸರಾ ಮಹೋತ್ಸವ ವಿರುದ್ಧವಾಗಿ ನಡೆದ ಆಚರಣೆಯನ್ನು ತಡೆಯುವಲ್ಲಿ ರಾಜ್ಯ ಸರಕಾರ ವಿಲವಾಗಿರುವುದು ಸರಿಯಲ್ಲ ’’ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
Vijaya Karnataka Web pratap simha


ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಬುಧವಾರ ನಡೆದ ದಸರಾ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ‘‘ನಾವು ರಾಕ್ಷಸನನ್ನು ಮರ್ದಿಸಿದ ಚಾಮುಂಡೇಶ್ವರಿಯ ದಸರಾ ಆಚರಿಸುತ್ತಿದ್ದರೆ, ಕೆಲವರು ಇದಕ್ಕೆ ವಿರುದ್ಧವಾಗಿ ಮಹಿಷಾ ದಸರ ಆಚರಿಸಿದ್ದಾರೆ. ಸರಕಾರ ಇದನ್ನು ತಡೆಯುವ ಬದಲಾಗಿ ಆಚರಣೆಗೆ ಅವಕಾಶ ನೀಡಿರುವುದು ಸರಿಯಲ್ಲ ’’ಎಂದರು.

‘‘ಯದುಕುಲ ಮುನ್ನಡೆಸುತ್ತಿರುವ ದಸರಾ ಮಹೋತ್ಸವ, ಹಿಂದೂ ಪರಂಪರೆಯ ಒಂದು ಅವಿಭಾಜ್ಯ ಅಂಗವಾಗಿದೆ. ಕೆಸಿ ರೆಡ್ಡಿಯಿಂದ ಎಚ್.ಡಿ. ಕುಮಾರಸ್ವಾಮಿ ಅವರ ವರೆಗಿನ ಮುಖ್ಯಮಂತ್ರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಯಧುಕುಲದ ರಾಜರನ್ನು ಇಂದಿಗೂ ಸ್ಮರಿಸುತ್ತೇವೆ. ರಾಜರು ಮಾಡಿದ ಅವಿಸ್ಮರಣೀಯ ಕೆಲಸಗಳೆ ಇದಕ್ಕೆ ಕಾರಣವಾಗಿದೆ. ಇಂತಹ ಇತಿಹಾಸ ಹೊಂದಿರುವ ಯಧುಕುಲದ ಅಧಿದೇವತೆ ಚಾಮುಂಡೇಶ್ವರಿಯನ್ನು ಎಲ್ಲರೂ ಪೂಜಿಸುತ್ತಿದ್ದೇವೆ. ಅದಕ್ಕೆ ವಿರುದ್ಧವಾಗಿ ಮಹಿಷ ದಸರಾ ಆಚರಿಸುವುದು ಸರಿಯಲ್ಲ ’’ ಎಂದರು.

‘‘ಯದುಕುಲ 1761 ರಿಂದ 1799 ರವರೆಗೆ 38 ವರ್ಷಗಳ ಕಾಲ ಕಗ್ಗತಲನ್ನು ಅನುಭವಿಸಿದೆ. ಇದಕ್ಕೆ ಕಾರಣರಾದವರ ಜಯಂತಿಯನ್ನು ಸರಕಾರ ಆಚರಿಸುತ್ತಿದೆ. ಈ ಜಯಂತಿಯನ್ನು ನಿಮ್ಮ ಕಾಲಘಟ್ಟದಲ್ಲಿ ಸ್ಥಗಿತಗೊಳಿಸಿ’’ ಎಂದು ಹೇಳುವ ಮೂಲಕ ಟಿಪ್ಪು ಜಯಂತಿಯನ್ನು ಬಂದ್ ಮಾಡಿ ಎಂದು ಪರೋಕ್ಷವಾಗಿ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ