ಆ್ಯಪ್ನಗರ

ದುಡ್ಡಿನಿಂದ ಚುನಾವಣೆ ನಡೆಸುತ್ತೇವೆ ಎಂಬುದನ್ನು ಸ್ವತಃ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ: ಪ್ರತಾಪ್‌ ಸಿಂಹ

ಜೆಡಿಎಸ್‌ ಶಾಸಕ ಜಿಟಿ ದೇವೇಗೌಡರ ಮೇಲೆ ಆರೋಪ ಮಾಡುವ ಮೂಲಕ ದುಡ್ಡು ಹಂಚಿ ಕಾಂಗ್ರೆಸ್‌ ಚುನಾವಣೆ ನಡೆಸುತ್ತದೆ ಎಂಬುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಟಾಂಗ್‌ ನೀಡಿದ್ದಾರೆ.

Vijaya Karnataka Web 2 Dec 2020, 7:15 pm
ಮೈಸೂರು:‌ ದುಡ್ಡು ಹಂಚಿ ಕಾಂಗ್ರೆಸ್‌ ಚುನಾವಣೆ ನಡೆಸುತ್ತದೆ ಎಂಬುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಟಾಂಗ್‌ ನೀಡಿದ್ದಾರೆ. ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು ದುಡ್ಡು ಪಡೆದು‌ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು.
Vijaya Karnataka Web pratap simha
ಪ್ರತಾಪ್‌ ಸಿಂಹ, ಸಂಸದ (ಸಂಗ್ರಹ ಚಿತ್ರ)


ಮೈಸೂರಿನಲ್ಲಿ ಬುಧವಾರ ಮಾತನಾಡಿದ ಅವರು, ಜಿಟಿ ದೇವೇಗೌಡರ ಮೇಲೆ ಆರೋಪ ಮಾಡುವ ಮೂಲಕ ದುಡ್ಡು ಹಂಚಿ ನಾವು ಚುನಾವಣೆ ಮಾಡುತ್ತೇವೆ ಎಂಬುದನ್ನು‌ ಸಿದ್ದರಾಮಯ್ಯ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಮೋದಿ ಅವರ ಹವಾ ಮುಂದೆ ಸಿದ್ಧರಾಮಯ್ಯ ಅವರ ಹಣದ ಆಟ ನಡೆದಿಲ್ಲ ಎಂದು ಲೇವಡಿ ಮಾಡಿದರು.

ಉಪ‌ ಚುನಾವಣೆಯಲ್ಲಿ ಬಿಜೆಪಿ ಮೇಲೆ ಹಣ ಹಂಚಿರುವ‌ ಆರೋಪ ಮಾಡುವ ಕಾಂಗ್ರೆಸ್‌ ನಾಯಕರು ಸಿದ್ದರಾಮಯ್ಯನವರ ಈ‌ ಹೇಳಿಕೆ ಬಗ್ಗೆ ಏನು ಹೇಳುತ್ತಾರೆ. ನನ್ನ ಎರಡು ಚುನಾವಣೆಯನ್ನೂ ಸಿದ್ದರಾಮಯ್ಯನವರು ದುಡ್ಡಿನ ಮೂಲಕವೇ ನಡೆಸಿದ್ದರು ಎಂಬುದು ಈಗ ಬಯಲಾಗಿದೆ ಎಂದು ಮಾಜಿ ಸಿಎಂಗೆ ಚಾಟಿ ಬೀಸಿದರು.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರ ಬ್ಯಾಟ್‌ ಬೀಸಿದ ಸಂಸದ ಪ್ರತಾಪ್‌ ಸಿಂಹ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕ ಜಿ.ಟಿ.ದೇವೇಗೌಡರ ಮೇಲೆ ನಮ್ಮಿಂದ ದುಡ್ಡು ಪಡೆದು ಬಿಜೆಪಿ ಪರ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದರು ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಮಂಗಳವಾರ ಪ್ರತಿಕ್ರಿಯಿಸಿದ್ದ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ಅವರ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದರು.

ಚುನಾವಣೆಯಲ್ಲಿ ಹಣ ಪಡೆದಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ: ಸಿದ್ದುಗೆ ಜಿಟಿಡಿ ಸವಾಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ