ಆ್ಯಪ್ನಗರ

ನಿಮ್ಮ ಕುಂಚದಲ್ಲಿ ಮೂಡಲಿ ಗಣೇಶ

ವಿದ್ಯಾರ್ಥಿಗಳಲ್ಲಿ ಚಿತ್ರಕಲೆ ಹವ್ಯಾಸವನ್ನು ಉತ್ತೇಜಿಸುವ ದೃಷ್ಟಿಯಿಂದ ಕಳೆದ ವರ್ಷದಂತೆ ವಿಜಯ ಕರ್ನಾಟಕ ಈ ವರ್ಷವೂ ಗಣೇಶ ಹಬ್ಬದ ಪ್ರಯುಕ್ತ ಚಿತ್ರ ಬಿಡಿಸಲು ಮಕ್ಕಳಿಗೆ ವೇದಿಕೆ ನೀಡಿದೆ.

Vijaya Karnataka 28 Aug 2019, 5:00 am
ಮೈಸೂರು: ವಿದ್ಯಾರ್ಥಿಗಳಲ್ಲಿ ಚಿತ್ರಕಲೆ ಹವ್ಯಾಸವನ್ನು ಉತ್ತೇಜಿಸುವ ದೃಷ್ಟಿಯಿಂದ ಕಳೆದ ವರ್ಷದಂತೆ ವಿಜಯ ಕರ್ನಾಟಕ ಈ ವರ್ಷವೂ ಗಣೇಶ ಹಬ್ಬದ ಪ್ರಯುಕ್ತ ಚಿತ್ರ ಬಿಡಿಸಲು ಮಕ್ಕಳಿಗೆ ವೇದಿಕೆ ನೀಡಿದೆ.
Vijaya Karnataka Web mudali ganesha in your brush
ನಿಮ್ಮ ಕುಂಚದಲ್ಲಿ ಮೂಡಲಿ ಗಣೇಶ


ಚಿತ್ರಕಲೆಯಲ್ಲಿ ಅನೇಕ ರೂಪವನ್ನು ತಾಳಿದ ದಾಖಲೆ ಗಣಪನಿಗಿದೆ. ಹಾಗಾಗಿ ವಿದ್ಯಾರ್ಥಿಗಳು ಈ ಬಾರಿಯೂ ಗಣೇಶನ ನಾನಾ ರೂಪಗಳನ್ನು ಕುಂಚದಲ್ಲಿ ಅನಾವರಣಗೊಳಿಸಲು ಅವಕಾಶ ಕಲ್ಪಿಸುತ್ತಿದೆ. ಮಕ್ಕಳು ತಮ್ಮ ಕಲ್ಪನೆಗೆ ತಕ್ಕಂತೆ ಸುಂದರವಾದ ಚಿತ್ರ ರಚಿಸಿ ಕಳುಹಿಸಿದರೆ ಅದರಲ್ಲಿ ಆಯ್ದ ಚಿತ್ರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಚಿತ್ರ ತಲುಪಿಸಲು ಆ.30 ಕೊನೆದಿನ.

ಆಕ್ರಿಲಿಕ್‌, ತೈಲವರ್ಣ ಪೇಂಟಿಂಗ್‌, ಕ್ಯಾನ್ವಾಸ್‌, ಜಲವರ್ಣ, ಚಾರ್‌ಕೋಲ್‌ ಇತ್ಯಾದಿಗಳನ್ನು ಬಳಸಿ ಗಣಪನ ಚಿತ್ರ ಬಿಡಿಸಬಹುದು. ಪೆನ್ಸಿಲ್‌ ಸ್ಕೆಚ್‌ಗಳಿಗೆ ಅವಕಾಶವಿಲ್ಲ. ಚಿತ್ರಗಳು ಎ 4 ಅಥವಾ ಎ 3 ಅಳತೆಯದ್ದಾಗಿರಲಿ. ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಜತೆಗೆ ಪಾಸ್‌ಪೋರ್ಟ್‌ ಸೈಜ್‌ ಫೋಟೋ ಇರಲಿ. ಕಳುಹಿಸಬೇಕಾದ ವಿಳಾಸ ನಂ.1, ಪ್ರಿನ್ಸ್‌ ಆಫ್‌ ವೇಲ್ಸ್‌ ರಸ್ತೆ, ಆರ್‌ಟಿಒ ಆಫೀಸ್‌ ಹಿಂಭಾಗ, ಚಾಮರಾಜಪುರಂ, ಮೈಸೂರು-570005.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ