ಆ್ಯಪ್ನಗರ

Mysore Dasara 2022 - ಯುವ ದಸರಾಗೆ ಕಿಚ್ಚ ಸುದೀಪ್‌ ಮೆರುಗು

Mysore Dasara 2022 - ​​ಎರಡು ವರ್ಷಗಳ ಬಳಿಕ ಯುವ ದಸರಾ ನಡೆಯುತ್ತಿದ್ದು, ಸೆ.27ರಂದು ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಉದ್ಘಾಟಿಸಲಿದ್ದು, ನಟ ಸುದೀಪ್‌ ಭಾಗವಹಿಸುವ ಮೂಲಕ ತಾರಾ ಮೆರುಗು ನೀಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿ ಆರ್‌.ಚೇತನ್‌ ಮಾಹಿತಿ ನೀಡಿದರು.

Vijaya Karnataka Web 23 Sep 2022, 11:38 am
ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಗಳಲ್ಲಿ ಒಂದಾದ ಯುವ ಜನತೆಯ ನೆಚ್ಚಿನ ಕಾರ್ಯ ಕ್ರಮ ಯುವ ದಸರಾ ಚಾಲನೆಗೆ ನಟ ಕಿಚ್ಚ ಸುದೀಪ್‌ ಆಗಮಿಸಲಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮ ಸೆ.27 ರಿಂದ ಅ.3ರವರೆಗೆ 7 ದಿನ ಕಾಲ ನಡೆಯಲಿದ್ದು, ಸ್ಥಳೀಯ ಕಲಾವಿದರೊಂದಿಗೆ ಸ್ಯಾಂಡಲ್‌ವುಡ್‌, ಬಾಲಿವುಡ್‌ ಗಾಯಕರೊಂದಿಗೆ ತಾರೆಯರು ನೃತ್ಯ ಮತ್ತು ಗಾಯನದ ಮೂಲಕ ಮೋಡಿ ಮಾಡಲಿದ್ದಾರೆ.
Vijaya Karnataka Web yuva-dasara-fb
ಯುವ ದಸರಾ (ಸಾಂದರ್ಭಿಕ ಚಿತ್ರ)


ಎರಡು ವರ್ಷಗಳ ಬಳಿಕ ಯುವ ದಸರಾ ನಡೆಯುತ್ತಿದ್ದು, ಸೆ.27ರಂದು ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಉದ್ಘಾಟಿಸಲಿದ್ದು, ನಟ ಸುದೀಪ್‌ ಭಾಗವಹಿಸುವ ಮೂಲಕ ತಾರಾ ಮೆರುಗು ನೀಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿ ಆರ್‌.ಚೇತನ್‌ ಮಾಹಿತಿ ನೀಡಿದರು.

Mysuru Dasara | ಮೈಸೂರು ನಗರಕ್ಕೆ ಬೆಳಕು, ರಿಂಗ್‌ ರಸ್ತೆ ಕತ್ತಲು
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ನಟ ಸುದೀಪ್‌ ಅವರಿಗೆ ಯಾವುದೇ ಸಂಭಾವನೆ ನೀಡುತ್ತಿಲ್ಲ. ಉಳಿದ ಕಲಾವಿದರಿಗೆ ಸಂಭಾವನೆ ನೀಡಲಾಗುತ್ತಿದ್ದು, ದಸರಾ ಬಳಿಕ ಯಾವ್ಯಾವ ಕಲಾವಿದರಿಗೆ ಎಷ್ಟು ಸಂಭಾವನೆ ನೀಡಲಾಗಿದೆ ಎಂದು ತಿಳಿಸಲಾಗುವುದು ಎಂದರು.

ಯುವ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಂದು ದಿನ ಪೂರ್ತಿಯನ್ನು 'ಅಪ್ಪು ನಮನ' ಕಾರ್ಯಕ್ರಮಕ್ಕೆ ಮೀಸಲಿಡಲಾಗುವುದು. ಮತ್ತೊಂದು ದಿನವನ್ನು ಮಹಿಳಾ ಕಲಾವಿದರ ನಾನಾ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ ಎಂದರು. ಮುಡಾ ಕಾರ್ಯದರ್ಶಿ ವೆಂಕಟರಾಜು, ಕಲಾವಿದ ಡಾ.ನಿಂಗರಾಜು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ