ಆ್ಯಪ್ನಗರ

ಮೈಸೂರಿನಿಂದ ಕೊಡಗಿಗೆ ಅವಶ್ಯಕ ಆಹಾರ ಸಾಮಾಗ್ರಿ

ಪ್ರವಾಹಕ್ಕೆ ಸಿಲುಕಿರುವ ಕೊಡಗು ಜಿಲ್ಲೆಗೆ ಮೈಸೂರು ಜಿಲ್ಲೆಯಿಂದ ಅವಶ್ಯಕ ಸಾಮಗ್ರಿಗಳನ್ನು ರವಾನೆ ಮಾಡಲಾಗುತ್ತಿದೆ. ಶನಿವಾರ 6000 ಲೀ.ನಷ್ಟು ಬಾಟಲ್ ನೀರು, 20,000 ಲೀ.ನಷ್ಟು ಕ್ಯಾನ್ ನೀರು ರವಾನಿಸಲಾಗಿದ್ದು, ಮತ್ತೆ 10,000 ಲೀ. ನೀರು ರವಾನಿಸಲಾಗಿದೆ.

Vijaya Karnataka Web 18 Aug 2018, 4:46 pm
ಮೈಸೂರು: ಪ್ರವಾಹಕ್ಕೆ ಸಿಲುಕಿರುವ ಕೊಡಗು ಜಿಲ್ಲೆಗೆ ಮೈಸೂರು ಜಿಲ್ಲೆಯಿಂದ ಅವಶ್ಯಕ ಸಾಮಗ್ರಿಗಳನ್ನು ರವಾನೆ ಮಾಡಲಾಗುತ್ತಿದೆ. ಶನಿವಾರ 6000 ಲೀ.ನಷ್ಟು ಬಾಟಲ್ ನೀರು, 20,000 ಲೀ.ನಷ್ಟು ಕ್ಯಾನ್ ನೀರು ರವಾನಿಸಲಾಗಿದ್ದು, ಮತ್ತೆ 10,000 ಲೀ. ನೀರು ರವಾನಿಸಲಾಗಿದೆ.
Vijaya Karnataka Web coorg flood2


ಅದರ ಜತೆಗೆ 200 ಜಮಖಾನೆ, 40 ಕಾರ್ಪೆಟ್, 1000 ಹೊದಿಕೆ/ಕಂಬಳಿ, 1000 ಬೆಡ್ ಸ್ಪ್ರೆಡ್, 500 ಟವಲ್, 500 ನ್ಯಾಪ್ ಕಿನ್ಸ್ , 100 ಮೀಟರ್‌ನ 50 ಬಂಡಲ್ ರೋಪ್, 120 ಟಾರ್ಚ್, 1900 ಪೌಂಡ್ಸ್ ಬ್ರೆಡ್, 12000 ಲೀ. ಸೀಮೆ ಎಣ್ಣೆ, ದಾನಿಗಳು ನೀಡಿದ್ದ ಇತರ ಸಾಮಾಗ್ರಿ ಸಹಿತ 3 ಟ್ರಕ್‌ನಷ್ಟು ಸಾಮಗ್ರಿಗಳನ್ನು ಮತ್ತು 9 ವೈದ್ಯರ ತಂಡಗಳನ್ನು ಮಡಿಕೇರಿಗೆ ಕಳುಹಿಸಿಕೊಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.

ಮಂಡ್ಯದ ಶಂಕರನಗರದ ನಿವೃತ್ತ ಅರಣ್ಯಾಧಿಕಾರಿ ಎಂ.ಎಚ್.ಶಿವಲಿಂಗೇಗೌಡ ಕೊಡಗು ಜಿಲ್ಲೆಯ ಜನರಿಗೆ 1000 ಲೀಟರ್ ಪ್ಯಾಕೇಜ್ಡ್ ನೀರು ಕಳಿಹಿಸಿಕೊಟ್ಟಿದ್ದಾರೆ.

ಹಾಸನ ಹಾಲು ಒಕ್ಕೂಟದಿಂದ 3 ವಾಹನಗಳಲ್ಲಿ ಕೊಡಗಿಗೆ 26,000 ಲೀ. ಹಾಲು, 3000 ಪ್ಯಾಕ್ ಬಿಸ್ಕತ್‌ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ರಾಮನಾಥ ಪುರಕ್ಕೆ 3000 ಲೀ. ಹಾಲು 1000 ಪ್ಯಾಕ್ ಬಿಸ್ಕತ್ತು ರವಾನೆಯಾಗಲಿದೆ.

ಜತೆಗೆ ದಾನಿಗಳಿಂದ ಸಂಗ್ರಹಿಸಿದ ಪರಿಹಾರ ಸಾಮಗ್ರಿಗಳನ್ನು ಪ್ರಾಥಮಿಕವಾಗಿ ಕೊಡಗು ಜಿಲ್ಲೆಗೆ ಕಳುಹಿಸಿಕೊಡಲಾಗುವುದು. ಕೊಡಗಿಗೆ ಕೆಲವು ವಸ್ತುಗಳು ತಕ್ಷಣಕ್ಕೆ ಅಗತ್ಯವಿಲ್ಲದಿದ್ದಲ್ಲಿ ಕೇರಳದ ವಯನಾಡ್ ಜಿಲ್ಲೆಗೆ ಕಳುಹಿಸಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿಗಳಾದ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ