ಆ್ಯಪ್ನಗರ

ನವರಾತ್ರಿಯ ದಿನಗಳಲ್ಲಿಇಲ್ಲಿಸಂಚಾರ ನಿರ್ಬಂಧ

ನಾಡಹಬ್ಬ ದಸರಾ ಮಹೋತ್ಸವದ ಬಂತೆಂದರೆ ಸಹಜವಾಗಿ ಮೈಸೂರು ನಗರದ ಹೃದಯ ಭಾಗದಲ್ಲಿವಾಹನ ದಟ್ಟಣೆ ಹೆಚ್ಚಾಗಲಿದೆ. 9 ದಿನ ನಡೆಯುವ ದಸರಾ ವೇಳೆ ನಗರದವರು ಮಾತ್ರವಲ್ಲ, ನೆರೆ ಜಿಲ್ಲೆ, ನೆರೆ ರಾಜ್ಯಗಳಿಂದ ಪ್ರವಾಸಿಗರ ದಂಡೇ ಸಾಂಸ್ಕೃತಿಕ ನಗರದತ್ತ ದೌಡಾಯಿಸಲಿದೆ. ಅಲ್ಲದೇ ಬಹುತೇಕ ಎಲ್ಲಾ ದಸರಾ ಕಾರ್ಯಕ್ರಮಗಳು ನಗರದ ಕೇಂದ್ರ ಭಾಗದಲ್ಲೇ ನಡೆಯುವುದರಿಂದ ಸಹಜವಾಗಿ ನಗರದಲ್ಲಿವಾಹನ ದಟ್ಟಣೆ ನಿರೀಕ್ಷೆ ಮೀರಿ ಅಧಿಕವಾಗಲಿದೆ. ಈ ಹಿನ್ನೆಲೆಯಲ್ಲಿನಗರ ಪೊಲೀಸರು, ಯಾವ ರಸ್ತೆಯಲ್ಲಿಏಕಮುಖ ಸಂಚಾರ, ಎಲ್ಲೆಲ್ಲಿವಾಹನ ಸಂಚಾರ ನಿರ್ಬಂಧ ಮಾಹಿತಿ ಇಲ್ಲಿನೀಡಲಾಗಿದೆ.

Vijaya Karnataka 26 Sep 2019, 5:00 am
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಬಂತೆಂದರೆ ಸಹಜವಾಗಿ ಮೈಸೂರು ನಗರದ ಹೃದಯ ಭಾಗದಲ್ಲಿವಾಹನ ದಟ್ಟಣೆ ಹೆಚ್ಚಾಗಲಿದೆ. 9 ದಿನ ನಡೆಯುವ ದಸರಾ ವೇಳೆ ನಗರದವರು ಮಾತ್ರವಲ್ಲ, ನೆರೆ ಜಿಲ್ಲೆ, ನೆರೆ ರಾಜ್ಯಗಳಿಂದ ಪ್ರವಾಸಿಗರ ದಂಡೇ ಸಾಂಸ್ಕೃತಿಕ ನಗರದತ್ತ ದೌಡಾಯಿಸಲಿದೆ. ಅಲ್ಲದೇ ಬಹುತೇಕ ಎಲ್ಲಾ ದಸರಾ ಕಾರ್ಯಕ್ರಮಗಳು ನಗರದ ಕೇಂದ್ರ ಭಾಗದಲ್ಲೇ ನಡೆಯುವುದರಿಂದ ಸಹಜವಾಗಿ ನಗರದಲ್ಲಿವಾಹನ ದಟ್ಟಣೆ ನಿರೀಕ್ಷೆ ಮೀರಿ ಅಧಿಕವಾಗಲಿದೆ. ಈ ಹಿನ್ನೆಲೆಯಲ್ಲಿನಗರ ಪೊಲೀಸರು, ಯಾವ ರಸ್ತೆಯಲ್ಲಿಏಕಮುಖ ಸಂಚಾರ, ಎಲ್ಲೆಲ್ಲಿವಾಹನ ಸಂಚಾರ ನಿರ್ಬಂಧ ಮಾಹಿತಿ ಇಲ್ಲಿನೀಡಲಾಗಿದೆ.
Vijaya Karnataka Web mysore dussehra 2019
ನವರಾತ್ರಿಯ ದಿನಗಳಲ್ಲಿಇಲ್ಲಿಸಂಚಾರ ನಿರ್ಬಂಧ


ದಸರಾ ವೇಳೆ ನಗರದಲ್ಲಿವಾಹನ ಸಂಚಾರ ಅಧಿಕಗೊಳ್ಳಲಿದ್ದು, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ವಾಹನ ನಿಲುಗಡೆಗೆ ಪಾರ್ಕಿಂಗ್‌ ಸ್ಥಳಗಳನ್ನು ಸಹ ಗುರುತಿಸಲಾಗಿದ್ದು, ಸಾರ್ವಜನಿಕರು ನಿಗದಿ ಪಡಿಸಿದ ಸ್ಥಳಗಳಲ್ಲಿಮಾತ್ರ ಪಾರ್ಕಿಂಗ್‌ ಮಾಡಬೇಕು.

- ಕೆ.ಟಿ.ಬಾಲಕೃಷ್ಣ, ನಗರ ಪೊಲೀಸ್‌ ಆಯುಕ್ತ.

ಏಕಮುಖ ವಾಹನ ಸಂಚಾರ ವ್ಯವಸ್ಥೆ

ಸೆ.28ರಿಂದ ಅ.8ರವರೆಗೆ ನಿತ್ಯ ಮಧ್ಯಾಹ್ನ 3ರಿಂದ ರಾತ್ರಿ 9.30ರವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿಏಕಮುಖ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ.

* ಅರಮನೆಯ ಸುತ್ತಲಿನ ರಸ್ತೆಗಳಲ್ಲಿ(ಅ.8ರಂದು ದಸರಾ ಮೆರವಣಿಗೆಯು ಪ್ರಾರಂಭವಾಗಿ ಆಯುರ್ವೇದಿಕ್‌ ವೃತ್ತ ದಾಟುವವರೆಗಿನ ಸಮಯವನ್ನು ಹೊರತುಪಡಿಸಿ)ಅರಮನೆಯ ಸುತ್ತಲಿನ ರಸ್ತೆಗಳಲ್ಲಿಜೆ.ಎಸ್‌.ಎಸ್‌.ವೃತ್ತ-ಕುಸ್ತಿ ಅಖಾಡ ಜಂಕ್ಷನ್‌-ಬಿ.ಎನ್‌.ರಸ್ತೆ-ಹಾರ್ಡಿಂಗ್‌ ವೃತ್ತ-ಹಳೆ ಪ್ರತಿಮೆ ವೃತ್ತ-ಎ.ವಿ.ರಸ್ತೆ-ಕೆ.ಆರ್‌. ವೃತ್ತ- ನ್ಯೂ ಎಸ್‌.ಆರ್‌.ರಸ್ತೆ- ಪಾಠಶಾಲಾ ವೃತ್ತ-ಚಾಮರಾಜ ರಸ್ತೆ- ಜೆ.ಎಸ್‌.ಎಸ್‌. ವೃತ್ತ. ಈ ರಸ್ತೆಗಳಲ್ಲಿಅರಮನೆಯನ್ನು ಮದ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿವಾಹನಗಳು ಸಂಚರಿಸಬೇಕು.(ಪಾಠಶಾಲಾ ವೃತ್ತದಿಂದ ಪೂರ್ವಕ್ಕೆ ಜೆಎಸ್‌ಎಸ್‌ ವೃತ್ತದವರೆಗಿನ ರಸ್ತೆ ಹೊರತುಪಡಿಸಿ).

* ನ್ಯೂ ಎಸ್‌.ಆರ್‌.ರಸ್ತೆ, ಕೆ.ಆರ್‌.ವೃತ್ತದಿಂದ ಆಯುರ್ವೇದಿಕ್‌ ವೃತ್ತ- ಪೂರ್ವಕ್ಕೆ ಇರ್ವಿನ್‌ ರಸ್ತೆ- ನೆಹರು ವೃತ್ತ-ಅಶೋಕ ರಸ್ತೆ- ಮಹಾವೀರ ವೃತ್ತ-ಹಳೇ ಪ್ರತಿಮೆ ವೃತ್ತ. ಈ ರಸ್ತೆಗಳ ಮಧ್ಯೆ ಇರುವ ಪ್ರದೇಶವನ್ನು ಮದ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ (ಕ್ಲಾಕ್‌ ವೈಸ್‌) ವಾಹನಗಳು ಸಂಚರಿಸುವಂತೆ ಹಾಗೂ ಈ ರಸ್ತೆಗಳಲ್ಲಿ ಗಡಿಯಾರದ ಮುಳ್ಳು ಸುತ್ತುವ ರುದ್ದ ದಿಕ್ಕಿನಲ್ಲಿ(ಆಂಟಿ ಕ್ಲಾಕ್‌ ವೈಸ್‌) ವಾಹನಗಳು ಸಂಚರಿಸದಂತೆ ನಿರ್ಬಂಧಿಸಲಾಗಿದೆ.

*ನೆಹರು ವೃತ್ತದಿಂದ ಬಿ.ಎನ್‌. ರಸ್ತೆ ಜಂಕ್ಷನ್‌ ವರೆಗೆ ಪಶ್ಚಿಮದಿಂದ ಪೂರ್ವಕ್ಕೆ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿ ಪೂರ್ವದಿಂದ ಪಶ್ಚಿಮಕ್ಕೆ ಎಲ್ಲಾಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

* ಬನುಮಯ್ಯ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ನಿಂದ ಬನುಮಯ್ಯ ಚೌಕದ ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ಮಾಡಿ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

*ತ್ಯಾಗರಾಜ ರಸ್ತೆಯಲ್ಲಿಎನ್‌. ಮಾಧುರಾವ್‌ ವೃತ್ತದಿಂದ ಚಾಮರಾಜ ಜೋಡಿ ರಸ್ತೆ ಜಂಕ್ಷನ್‌ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ಮಾಡಿ ಈ ಭಾಗದಲ್ಲಿಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

* ಕೆ.ಆರ್‌. ಬಿ ರಸ್ತೆಯಲ್ಲಿ ಕೌಟಿಲ್ಯ ವೃತ್ತದಿಂದ ಹುಣಸೂರು ರಸ್ತೆ ಆರ್ಚ್ ಗೇಟ್‌ ಜಂಕ್ಷನ್‌ ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ಮಾಡಿ ಈ ಭಾಗದಲ್ಲಿಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವ ರಸ್ತೆಗಳು:

*ಸೆ. 28 ರಿಂದ ಅ. 6 ರವರೆಗೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ

ಕೆಅರ್‌ಬಿ ರಸ್ತೆಯಲ್ಲಿಕೌಟಿಲ್ಯ ವೃತ್ತದಿಂದ ಏಕಲವ್ಯ ವೃತ್ತದವರೆಗೆ ಎಲ್ಲಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

* ಅ. 8 ರಮದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದಸರಾ ಮೆರವಣಿಗೆಯು ಸಾಗುವ ಮಾರ್ಗದಲ್ಲಿಬಲರಾಮ ದ್ವಾರ ಎ.ವಿ.ರಸ್ತೆ, ಕೆ.ಆರ್‌.ವೃತ್ತ, ಸಯ್ಯಾಜಿರಾವ್‌ ರಸ್ತೆ, ಅರ್ಯವೇದಿಕ್‌ ವೃತ್ತದವರೆಗೆ .

* ಅ. 8 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದಸರಾ ಮೆರವಣಿಗೆಯು ಸಾಗುವ ಮಾರ್ಗದಲ್ಲಿಅರ್ಯವೇದಿಕ್‌ ವೃತ್ತದಿಂದ ಹೈವೆ ಹೊಟೇಲ್‌ ವೃತ್ತದವರೆಗೆ.

* ಅ.8 ರಂದು ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದಸರಾ ಮೆರವಣಿಗೆಯು ಸಾಗುವ ಮಾರ್ಗದಲ್ಲಿನೆಲ್ಸನ್‌ ಮಂಡೇಲ ರಸ್ತೆಯಲ್ಲಿಹೈವೆ ಹೊಟೇಲ್‌ ವೃತ್ತದಿಂದ ಬನ್ನಿಮಂಟಪದ ಮುಖ್ಯದ್ವಾರದ ವರೆಗೆ.

* ಅ. 8 ರಂದು ಬನ್ನಿ ಮಂಟಪ ಕವಾಯತು ಮೈದಾನದ ಉತ್ತರ ಭಾಗದ ರಸ್ತೆಯಲ್ಲಿಬೆಂಗಳೂರು-ಮೈಸೂರು ರಸ್ತೆ ಜಂಕ್ಷನ್‌ನಿಂದ ಹನುಮಂತನಗರ ರಸ್ತೆ ಜಂಕ್ಷನ್‌ವರೆಗೆ.

* ಅ.8 ರಂದು ಬೆಳಗ್ಗೆ 6 ಗಂಟೆಯಿಂದ ಭಾರಿ ಮತ್ತು ಲಘು ಸರಕು ಸಾಗಣಿಕೆ ವಾಹನಗಳು ರಿಂಗ್‌ ರಸ್ತೆ ಜಂಕ್ಷನ್‌ಗಳಿಂದ ನಗರ ಪ್ರವೇಶಿಸದಂತೆ ಹಾಗೂ ರಿಂಗ್‌ ರಸ್ತೆ ಮೂಲಕವೇ ಆಗಮಿಸಿ ಹೊರ ಹೋಗುವಂತೆ ಸಂಚಾರದ ಮೇಲೆ ನಿರ್ಬಂಧ ವಿಧಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ