ಆ್ಯಪ್ನಗರ

ಊರಿಗೆ ತಲುಪಿದ ಮೈಸೂರಿನ ಆಧುನಿಕ ಶ್ರವಣ ಕುಮಾರನಿಗೆ ಬಂಪರ್‌, ಕಾರು ಗಿಫ್ಟ್‌ ಕೊಟ್ಟ ಆನಂದ್‌ ಮಹೀಂದ್ರಾ!

ಜನವರಿ 19, 2018 ರಲ್ಲಿ 42 ವರ್ಷದ ಕೃಷ್ಣ ಕುಮಾರ್ ಅವರು ಮೈಸೂರಿನಿಂದ ಮಾತೃಸೇವಾ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದರು. ತಮ್ಮ ತಾಯಿ ಚೂಡಾರತ್ನ ಅವರ ಜೊತೆ ಸತತ 2 ವರ್ಷ, 9 ತಿಂಗಳ ಕಾಲ ಸ್ಕೂಟರ್‌ನಲ್ಲಿ 56,522 ಕಿ.ಮೀ. ಕ್ರಮಿಸಿ ಭಾರತ ಮಾತ್ರವಲ್ಲದೆ ನೇಪಾಳ, ಭೂತಾನ್‌, ಮಯನ್ಮಾರ್‌ ದೇಶಗಳಿಗೂ ಹೋಗಿ ದೇವರ ದರುಶನ ಅಲ್ಲಿನ ಸಂಸ್ಕೃತಿ ಬಗ್ಗೆ ತಿಳಿದುಕೊಂಡಿದ್ದಾರೆ. ಇದೀಗ ಊರಿಗೆ ತಲುಪಿದ ಅವರಿಗೆ ಬಂಪರ್‌ ಗಿಫ್ಟ್‌ವೊಂದು ಸಿಕ್ಕಿದೆ.

Vijaya Karnataka Web 19 Sep 2020, 1:28 pm
ಮೈಸೂರು: ತಾಯಿಯನ್ನು ಸ್ಕೂಟರ್‌ನಲ್ಲಿ ಕುಳ್ಳಿರಿಸಿ ದೇಶ-ವಿದೇಶ ತೀರ್ಥಯಾತ್ರೆ ಮಾಡಿಸಿದ್ದ ಆಧುನಿಕ ಶ್ರವಣ ಕುಮಾರ ಎಂದೇ ಖ್ಯಾತಿ ಪಡೆದ ಮೈಸೂರಿನ ಕೃಷ್ಣ ಕುಮಾರ್ ಎಂಬವರಿಗೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಕಾರೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಶನಿವಾರ ಕೃಷ್ಣ ಕುಮಾರ್‌ ಅವರಿಗೆ ಮಹೀಂದ್ರಾ ಕೆಯುವಿ-100 ಕಾರನ್ನು ಆನಂದ್‌ ಮಹೀಂದ್ರಾ ಅವರ ಸೂಚನೆ ಮೇರೆಗೆ ಮೈಸೂರಿನ ಮಹೀಂದ್ರಾ ಶೋ ರೂಂ ಉಡುಗೊರೆಯಾಗಿ ನೀಡಿದೆ. ಇನ್ನು ಕಾರು ಸಿಕ್ಕ ಖುಷಿಯಲ್ಲಿ ಮಗ ಹಾಗೂ ತಾಯಿ ಇದೇ ಕಾರಿನಲ್ಲಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.
Vijaya Karnataka Web mysore man who toured india with mother on scooter gets keys to new car from anand mahindra
ಊರಿಗೆ ತಲುಪಿದ ಮೈಸೂರಿನ ಆಧುನಿಕ ಶ್ರವಣ ಕುಮಾರನಿಗೆ ಬಂಪರ್‌, ಕಾರು ಗಿಫ್ಟ್‌ ಕೊಟ್ಟ ಆನಂದ್‌ ಮಹೀಂದ್ರಾ!


ಎರಡು ದಿನಗಳ ಹಿಂದೆ ಬಂದಿದ್ದರು!

ಜನವರಿ 19, 2018 ರಲ್ಲಿ 42 ವರ್ಷದ ಕೃಷ್ಣ ಕುಮಾರ್ ಅವರು ಮೈಸೂರಿನಿಂದ ಮಾತೃಸೇವಾ ಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದರು. ತಮ್ಮ ತಾಯಿ ಚೂಡಾರತ್ನ ಅವರ ಜೊತೆ ಸತತ 2 ವರ್ಷ, 9 ತಿಂಗಳ ಕಾಲ ಸ್ಕೂಟರ್‌ನಲ್ಲಿ 56,522 ಕಿ.ಮೀ. ಕ್ರಮಿಸಿ ಭಾರತ ಮಾತ್ರವಲ್ಲದೆ ನೇಪಾಳ, ಭೂತಾನ್‌, ಮಯನ್ಮಾರ್‌ ದೇಶಗಳಿಗೂ ಹೋಗಿ ದೇವರ ದರುಶನ ಅಲ್ಲಿನ ಸಂಸ್ಕೃತಿ ಬಗ್ಗೆ ತಿಳಿದುಕೊಂಡಿದ್ದಾರೆ. ಭಾರತದ ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ, ಮಿಜೋರಾಂ, ಮೇಘಾಲಯ, ತ್ರಿಪುರಾ, ಅರುಣಾಚಲ ಪ್ರದೇಶ ಹೀಗೆ ಎಲ್ಲಾ ರಾಜ್ಯಗಳ ದೇವಾಲಯಗಳಿಗೆ ತೆರಳಿದ್ದರು. ಈ ಪರ್ಯಾಟನೆ ಮುಗಿಸಿ ಸೆಪ್ಟೆಂಬರ್‌ 16 ರಂದು ಮಗ ಹಾಗೂ ತಾಯಿ ಮೈಸೂರಿನ ಮನೆಗೆ ವಾಪಾಸ್‌ ಆಗಿದ್ದರು.

ಅಮ್ಮನನ್ನು ಸ್ಕೂಟರ್‌ನಲ್ಲೇ ತೀರ್ಥಯಾತ್ರೆ ಮಾಡಿಸಿ 33 ತಿಂಗಳ ನಂತರ ಮೈಸೂರಿಗೆ ಮರಳಿದ ಕಲಿಯುಗದ ಶ್ರವಣಕುಮಾರ!

ಕಾರ್‌ ಆಫರ್‌ ಮಾಡಿದ್ದ ಆನಂದ್‌ ಮಹೀಂದ್ರಾ!

20 ವರ್ಷದ ಹಳೆ ಸ್ಕೂಟರ್‌ನಲ್ಲಿ ತೀರ್ಥಯಾತ್ರೆಯನ್ನು ಆರಂಭಿಸಿದ್ದ ಕೃಷ್ಣ ಕುಮಾರ್‌ ಅವರು 2018ರಲ್ಲಿ ಚಿಕ್ಕ ಮಟ್ಟದಲ್ಲಿ ಸುದ್ದಿಯಾಗಿದ್ದರು. 2019ರ ಹೊತ್ತಿಗೆ ಇದು ಉದ್ಯಮಿ ಆನಂದ್‌ ಮಹೀಂದ್ರಾ ಅವರಿಗೆ ತಲುಪಿತ್ತು. ಕೃಷ್ಣ ಕುಮಾರ್‌ ಅವರ ತಾಯಿಯ ಬಗ್ಗೆಗ್ಗಿನ ಪ್ರೀತಿ ಹಾಗೂ ಸಮರ್ಪಣಾ ಭಾವನೆ ಕಂಡು ಪುಳಕಿತರಾದ ಆನಂದ್‌ ಮಹೀಂದ್ರಾ ಟ್ವೀಟ್‌ ಮಾಡಿ, ತಾಯಿಯ ಬಗ್ಗೆಗ್ಗಿನ ಮಗನ ಪ್ರೀತಿ ಕಂಡು ಸಂತೋಷವಾಗಿದೆ. ಅಲ್ಲದೇ ದೇಶ ಪ್ರೇಮವು ಇದರಲ್ಲಿ ಅಡಗಿದೆ. ಇವರಿಗೆ ಕಾರು ನೀಡಲು ಇಚ್ಚಿಸುತ್ತಿದ್ದೇನೆ. ಮುಂದಿನ ಪಯಣವನ್ನು ಈ ಕಾರಿನ ಮೂಲಕ ಮಾಡಲಿ ಎಂದು ಮನೋಜ್‌ ಎಂಬವರು ಶೇರ್‌ ಮಾಡಿದ್ದ ಟ್ವೀಟ್‌ಗೆ(ವಿಡಿಯೊ) ಪ್ರತಿಕ್ರಿಯಿಸಿದ್ದರು. ಇದೀಗ ಎರಡು ವರ್ಷಗಳ ಬಳಿಕ ಆನಂದ್‌ ಮಹೀಂದ್ರಾ ಮಾತು ಉಳಿಸಿಕೊಂಡಿದ್ದಾರೆ. ಕೃಷ್ಣ ಕುಮಾರ್‌ ಅವರಿಗೆ ಕಾರು ಸಿಕ್ಕಿದೆ.

ಮೈಸೂರು: ಈ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲ, ನರ್ಸ್‌ ಕೂಡ ಇಲ್ಲ!

anand mahindra

ಖುಷಿಯಾದ ತಾಯಿ ಹಾಗೂ ಮಗ!

ಇನ್ನು ಆನಂದ್‌ ಮಹೀಂದ್ರಾ ಅವರು ನೀಡಿದ ಕಾರ್‌ನಿಂದ ಖುಷಿಯಾಗಿರುವ ಕೃಷ್ಣ ಕುಮಾರ್‌ ಹಾಗೂ ತಾಯಿ ಚೂಡಾರತ್ನ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ಮುಂದೆ ಮತ್ತೊಂದು ಪ್ರಯಾಣ ಮಾಡುವುದಾಗಿ ಹೇಳಿದರು ಕೂಡ ಎಲ್ಲಿಗೆ ಎಂದು ಕೃಷ್ಣ ಕುಮಾರ್‌ ಸ್ಪಷ್ಟಪಡಿಸಿಲ್ಲ. ಆದರೆ ಉಡುಗೊರೆಯಾಗಿ ಸಿಕ್ಕಿರುವ ಕಾರನ್ನು ಸಮಾಜ ಸೇವೆಗೆ ಬಳಸುವುದಾಗಿ ಕೃಷ್ಣಕುಮಾರ್‌ ಹೇಳಿದ್ದಾರೆ. ತಮ್ಮ ನೆರೆಹೊರೆಯವರಿಗೆ ಆರೋಗ್ಯ ಸಮಸ್ಯೆ ಕಂಡುಬಂದರೆ, ವಯಸ್ಕರಿಗೆ, ತುರ್ತು ಅವಶ್ಯಕತೆಗೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ತನ್ನ ದೇಶ ಪರ್ಯಾಟನೆಯಿಂದಾಗಿ ಸಂಪಾದಿಸಿರುವಾ ಅರಿವನ್ನು ಯುವ ಪೀಳಿಗೆಗೆ ನೀಡಲು ಉದ್ದೇಶಿಸಿದ್ದು ತನ್ನ ಮೈಸೂರಿನ ಮನೆಯನ್ನು ಜ್ಞಾನ ವಿಕಾಸ ಕೇಂದ್ರ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ ತನ್ನ 20 ವರ್ಷದ ಹಳೆ ಸ್ಕೂಟರನ್ನು ಜೀವನದ ಅವಿಭಾಜ್ಯ ಅಂಗದಂತೆ ಇಡುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ