ಆ್ಯಪ್ನಗರ

ಮೈಸೂರು: ಹಲ್ಲು ನೋವು ಸೋಂಕು: ಯುವಕ ಸಾವು

ಹಲ್ಲು ನೋವಿನಿಂದ ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ಯುವಕ ಸೋಮವಾರ ಮೃತಪಟ್ಟಿದ್ದಾರೆ.

Vijaya Karnataka 2 Oct 2018, 5:00 am
ಮೈಸೂರು: ಹಲ್ಲು ನೋವಿನಿಂದ ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ಯುವಕ ಸೋಮವಾರ ಮೃತಪಟ್ಟಿದ್ದಾರೆ.
Vijaya Karnataka Web mysore tooth pain infection the death of a young man
ಮೈಸೂರು: ಹಲ್ಲು ನೋವು ಸೋಂಕು: ಯುವಕ ಸಾವು


ಯರಗನಹಳ್ಳಿ ನಿವಾಸಿ ಪ್ರೀತಂಗೌಡ (24) ಮೃತರು. ಹಲ್ಲಿನಲ್ಲಿ ಕೀವು ತುಂಬಿಕೊಂಡು ಸೋಂಕಿಗೊಳಗಾಗಿದ್ದ ಪ್ರೀತಂಗೌಡ ಅವರನ್ನು ಮೂರು ದಿನದ ಹಿಂದೆ ಅವರ ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

''ಇದರಿಂದ ಕೆರಳಿದ ಸಂಬಂಧಿಕರು ಸಾವಿನಲ್ಲಿ ಅನುಮಾನ ಇದೆ. ಅಲ್ಲದೆ ಮೊದಲೇ ಮೃತಪಟ್ಟಿದ್ದರೂ ಚಿಕಿತ್ಸೆ ನೀಡಿ ಹಣ ವಸೂಲು ಮಾಡಿದ್ದಾರೆ. ವೈದ್ಯರು ಸಾವಿಗೆ ಕಾರಣವೇನು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ. ಕೇವಲ ಹಲ್ಲು ನೋವು ಎಂದು ದಾಖಲಾದ ಮಗ ಮೃತಪಟ್ಟಿರುವುದರಿಂದ ನಮಗೆ ಅನುಮಾನ ಉಂಟಾಗಿದೆ,'' ಎಂದು ಪೋಷಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಮಗನ ಸಾವಿನಲ್ಲಿ ಅನುಮಾನವಿದ್ದು , ಈ ಬಗ್ಗೆ ತನಿಖೆ ನಡೆಸಬೇಕೆಂದು ತಂದೆ ಚಂದ್ರಶೇಖರ ಆಲನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಕೈಗೊಂಡಿದ್ದಾರೆ.

---------

ರೋಗಿಯು ಆಸ್ಪತ್ರೆಗೆ ಬರುವಾಗಲೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರಿಗೆ ಸೆಪ್ಟಿಸಿಮಿಯಾ ಆಗಿದ್ದರಿಂದ ದೇಹ ನಂಜಾಗಿತ್ತು. ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಗಂಭೀರ ಸ್ಥಿತಿ ಎದುರಿಸುತ್ತಿದ್ದರು. ಚಿಕಿತ್ಸೆಗೆ ದೇಹ ಸ್ಪಂದಿಸಲಿಲ್ಲ. ಎರಡು ದಿನ ಚಿಕಿತ್ಸೆ ನೀಡಿದರೂ ರಕ್ತದೊತ್ತಡ ಏರಿಕೆಯಾಗಲಿಲ್ಲ. ವೆಂಟಿಲೇಟರ್‌ ಹಾಕಿ, ಬದುಕುವ ಸಾಧ್ಯತೆ ಕಡಿಮೆ ಎಂದು ಮೊದಲೇ ಪೋಷಕರಿಗೆ ತಿಳಿಸಿದ್ದೆವು. ಆದರೆ, ಸೋಮವಾರ ಅವರ ಸಂಬಂಧಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-ಡಾ.ಚಂದ್ರಶೇಖರ್‌, ಕಾವೇರಿ ಆಸ್ಪತ್ರೆ ಅಧ್ಯಕ್ಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ