ಆ್ಯಪ್ನಗರ

ಮೈಸೂರಿನ ಜೆಎಸ್‌ಎಸ್‌ನಲ್ಲಿ ಮತ್ತೊಂದು ಕೋವಿಡ್‌ ಲಸಿಕೆ ಪ್ರಯೋಗ

ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಕೋವಿಶೀಲ್ಡ್‌ ಲಸಿಕೆ 3ನೇ ಹಂತದ ಪ್ರಯೋಗ ನಡೆಸಲಾಗುತ್ತಿದೆ.

Vijaya Karnataka Web 28 Sep 2020, 10:18 am
ಬೀರೇಶ್‌ ಕಬಿನಿ
Vijaya Karnataka Web Covid vaccine


ಮೈಸೂರು: ಮೈಸೂರಿನ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕೋವಿಡ್‌-19 ರೋಗಿಗಳಿಗೆ ಚಿಕಿತ್ಸೆ ನೀಡುವುದಲ್ಲದೆ, ಈ ವೈರಾಣುವನ್ನು ಸಂಪೂರ್ಣ ತೊಲಗಿಸಲು ಸಂಶೋಧಿಸಿರುವ ಔಷಧಗಳ ಪರೀಕ್ಷೆಗೆ ವೇದಿಕೆಯಾಗುವ ಮೂಲಕ ದೇಶದ ಗಮನ ಸೆಳೆದಿದೆ. ಈಗಾಗಲೆ ಎರಡು ಪರೀಕ್ಷೆ ಕೈಗೊಂಡಿರುವ ಸಂಸ್ಥೆಯು, ಆಸ್ಪ್ರೇಲಿಯಾದ ಕಂಪೆನಿ ಸಿದ್ಧಪಡಿಸಿರುವ ಮತ್ತೊಂದು ಔಷಧವಾದ ನೋವಾ ವ್ಯಾಕ್ಸ್‌ನ ಪರೀಕ್ಷೆ ನಡೆಸಲಿದೆ.

ಈಗಾಗಲೆ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಕೋವಿಶೀಲ್ಡ್‌ ಲಸಿಕೆ 3ನೇ ಹಂತದ ಪ್ರಯೋಗ ನಡೆಸಲಾಗುತ್ತಿದೆ. ನೋವಾ ವ್ಯಾಕ್ಸ್‌ ಕಂಪೆನಿಯು ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ನೊಂದಿಗೆ ಈ ಪ್ರಯೋಗ ನಡೆಸುತ್ತಿದೆ. ನೀಡಿದ ಜವಾಬ್ದಾರಿಯನ್ನು ಜೆಎಸ್‌ಎಸ್‌ ಆಸ್ಪತ್ರೆ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಇದಲ್ಲದೆ ಮಕ್ಕಳಿಗೆ ಟಿಬಿ ಕಾಯಿಲೆ ನಿಯಂತ್ರಣಕ್ಕಾಗಿ ನೀಡುವ ಬಿಸಿಜಿ ಲಸಿಕೆಯು ಹಿರಿಯ ನಾಗರಿಕರಲ್ಲಿನ ಕೋವಿಡ್‌ 19 ನಿಯಂತ್ರಿಸುವ ಸಾಧ್ಯತೆ ಇದೆ ಎಂದು ಖಾತ್ರಿ ಪಡಿಸಿಕೊಳ್ಳಲು ಐಸಿಎಂಆರ್‌ ಅಧ್ಯಯನ ಆರಂಭಿಸಿದೆ.

ಈ ಲಸಿಕೆ ಪ್ರಯೋಗವನ್ನು ಜೆಎಸ್‌ಎಸ್‌ನಲ್ಲಿ ನಡೆಸಲಾಗುತ್ತಿದೆ. ಇದಕ್ಕಾಗಿ ಆಸ್ಪತ್ರೆಯು 60 ಮತ್ತು 80 ವರ್ಷದೊಳಗಿನ ಸ್ವಯಂಸೇವಕರ ನೋಂದಣಿಯನ್ನು ಪ್ರಾರಂಭಿಸಿದೆ. ಲಸಿಕೆಯ ಪ್ರಯೋಗ ಕಾರ್ಯವನ್ನು ಶಿಸ್ತಿನಿಂದ ಕೈಗೊಳ್ಳುವುದನ್ನು ಗಮನಿಸಿದ ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಇದೀಗ ಆಸ್ಪ್ರೇಲಿಯಾ ಮೂಲದ ಕಂಪೆನಿ ಸಿದ್ಧಪಡಿಸಿರುವ ನೋವಾ ವ್ಯಾಕ್ಸ್‌ ಎಂಬ ಔಷಧ ಪ್ರಯೋಗ ನಡೆಸುವ ಅವಕಾಶವನ್ನೂ ಮೈಸೂರಿನ ಜೆಎಎಸ್‌ ಆಸ್ಪತ್ರೆಗೆ ನೀಡಿದೆ. ಇದು ಆಸ್ಪತ್ರೆಗೆ ದೊರೆತ ಮೂರನೇ ಅವಕಾಶ.

ಕೊರೊನಾ ಮಧ್ಯೆ ಶ್ವಾನಕ್ಕೂ ಬಂತು ಕಂಟಕ: ಮೆದುಳು ಜ್ವರದಿಂದ ಬೀದಿನಾಯಿಗಳ ಸಾವು!

ಅಕ್ಟೋಬರ್‌ನಲ್ಲಿ ಪ್ರಯೋಗ ಆರಂಭ:
ನೋವಾ ವ್ಯಾಕ್ಸ್‌ನ 2 ಮತ್ತು 3ನೇ ಹಂತದ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಎಲ್ಲಾ ದಾಖಲೆಗಳೊಂದಿಗೆ ಅನುಮತಿ ಕೋರಿ ಐಸಿಎಂಆರ್‌ ಗೆ ಪತ್ರ ಬರೆಯಲಾಗಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಅನುಮತಿ ದೊರೆಯಲಿದೆ. ಅಂತೆಯೇ ಕೋವಿಶೀಲ್ಡ್‌ನಂತೆ ಇದಕ್ಕೂ ಮೂರು ತಿಂಗಳವರೆಗೆ ಅಧ್ಯಯನ ನಡೆಸಲಾಗುತ್ತದೆ. ಕೋವಿಡ್‌-19 ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಇದೊಂದು ಬಹು ಮುಖ್ಯ ಕಾರ್ಯ ಎಂದು ಜೆಎಸ್‌ಎಸ್‌ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ ಹಾಗೂ ರೀಸರ್ಚ್ನ ಸಮಕುಲಾಧಿಪತಿ ಪ್ರೊ.ಬಿ.ಸುರೇಶ್‌ ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಭಾರತದಿಂದಲೇ 150 ರಾಷ್ಟ್ರಗಳಿಗೆ ಅಗತ್ಯ ಔಷಧ ರವಾನೆ: ಮೋದಿ

ಲಸಿಕೆ ಪ್ರಯೋಗ ಹೇಗೆ?
ಮೊದಲಿಗೆ ಈ ಲಸಿಕೆಯನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತದೆ. 2ನೇ ಹಂತದ ಪರೀಕ್ಷೆ ಜವ್ದಾರಿಯನ್ನು ಜೆಎಸ್‌ಎಸ್‌ ಆಸ್ಪತ್ರೆಗೆ ನೀಡಲಾಗಿದೆ. ಐವರು ಆರೋಗ್ಯವಂತ ಸ್ವಯಂ ಸೇವಕರಿಗೆ ವ್ಯಾಕ್ಸಿನ್‌ ನೀಡಲಾಗಿದೆ. ಮುಂದಿನ ದಿನಗಳಲ್ಲಿಒಟ್ಟು 25 ಮಂದಿಯನ್ನು ಈ ರೀತಿ ಪರೀಕ್ಷಿಸಲಾಗುತ್ತದೆ. ನಂತರ ಕೊರೊನಾ ಪಾಸಿಟಿವ್‌ ಇರುವ ವ್ಯಕ್ತಿಗಳ ಮೇಲೆ ಪ್ರಯೋಗಿಸಿ 28 ದಿನಗಳವರೆಗೆ ನಿಗಾದಲ್ಲಿಡಲಾಗುವುದು. ಇದೇ ವೇಳೆ ರಕ್ತ ಪರೀಕ್ಷೆ ಮಾಡಿ ದೇಹದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಮೂರನೇ ಹಂತದಲ್ಲಿ250 ಮಂದಿವರೆಗೆ ಪರೀಕ್ಷೆಗೆ ಒಳಪಡಿಸಲಾಗುವುದು. ಈ ಹಂತದಲ್ಲಿ ಕೋವಿಡ್‌ ರೋಗಿಗಳಿಗೆ ಮದ್ದು ನೀಡಬೇಕೆ, ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು. ಮೂರು ತಿಂಗಳು ಈ ಪರೀಕ್ಷೆ ನಡೆಯಲಿದೆ.

ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯ ಕಂಡುಹಿಡಿದ ವಿಜ್ಞಾನಿಗಳು, ಲಸಿಕೆ ಅಭಿವೃದ್ಧಿಗೆ ಸಹಕಾರಿ

ನಮ್ಮ ಸಂಸ್ಥೆಯಲ್ಲಿ ಮೂರನೇ ಪರೀಕ್ಷೆ ಕೈಗೊಂಡಿದ್ದೇವೆ. ಯಶಸ್ವಿಯಾದಲ್ಲಿ ಮೊದಲಿಗೆ ಆರೋಗ್ಯವಂತರಿಗೆ ಕೊರೊನಾ ವೈರಾಣು ಪ್ರವೇಶಿಸದಂತೆ ತಡೆಗಟ್ಟಲು ಹಾಗೂ ನಂತರ ರೋಗ ಲಕ್ಷಣ ಇರುವವರಿಗೆ ಲಸಿಕೆ ನೀಡಲಾಗುವುದು. ಯಾವುದೇ ತೊಂದರೆ ಇಲ್ಲವಾದಲ್ಲಿ ಔಷಧ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತದೆ. ಅಗತ್ಯಕ್ಕೆ ತಕ್ಕಂತೆ ಔಷಧ ತಯಾರಿಕೆಯೂ ಆರಂಭವಾಗುತ್ತದೆ.
-ಪ್ರೊ.ಬಿ.ಸುರೇಶ್‌, ಜೆಎಸ್‌ಎಸ್‌ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ ಹಾಗೂ ರೀಸರ್ಚ್ನ ಸಮಕುಲಾಧಿಪತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ