ಆ್ಯಪ್ನಗರ

ದಸರೆಗೂ ಮುನ್ನ ಮೈಸೂರಿಗೆ ಗುಡ್ ನ್ಯೂಸ್!: ಅರಮನೆ ನಗರಿಯ 18 ವೈಶಿಷ್ಠ್ಯಗಳಿಗೆ GI ಹೆಗ್ಗುರುತು

ಮೈಸೂರು ಸೀರೆ, ಮೈಸೂರು ವೀಳ್ಯದೆಲೆ, ಮೈಸೂರು ಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಸ್ಯಾಂಡಲ್ ಸೋಪು.. ಅಬ್ಬಬ್ಬಾ! ಎಷ್ಟೊಂದು ವಿಶೇಷತೆಗಳು! ಈ ಎಲ್ಲಾ ವಿಶೇಷತೆಗಳಿಗೆ ಈಗ GI ಹೆಗ್ಗುರುತು ಸಿಗಲಿದೆ. ಏನಿದು GI? ಇಲ್ಲಿದೆ ಉತ್ತರ…

TIMESOFINDIA.COM 29 Aug 2019, 3:11 pm
ಮೈಸೂರು: ದಸರಾ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಮೈಸೂರಿನ ಜನಕ್ಕೆ ಸಂತಸದ ಸುದ್ದಿ! ರಾಜ್ಯದ ಒಟ್ಟು 42 ವಿಶೇಷತೆಗಳಿಗೆ ಭೌಗೋಳಿಕ ವಿಶೇಷತೆಗಳ ಹೆಗ್ಗುರುತು (ಜಿಯಾಗ್ರಫಿಕಲ್ ಇಂಡಿಕೇಷನ್ ಟ್ಯಾಗ್) ಸಿಗಲಿದೆ. ಈ ಪೈಕಿ ಮೈಸೂರಿನ 18 ವಿಶೇಷತೆಗಳಿಗೆ GI ಟ್ಯಾಗ್ ಸಿಗಲಿದೆ. ಮೈಸೂರು ಸೀರೆ, ಮೈಸೂರು ವೀಳ್ಯದೆಲೆ, ಮೈಸೂರು ಬಾಳೆ, ಮೈಸೂರು ಮಲ್ಲಿಗೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರಿನ ಚಿತ್ರಕಲೆ ಸೇರಿದಂತೆ ಒಟ್ಟು 18 ವಿಶೇಷತೆಗಳು ಈ ಪಟ್ಟಿಯಲ್ಲಿವೆ.
Vijaya Karnataka Web mysore gi tag


ವಿಪರ್ಯಾಸವೆಂದರೆ ಭೌಗೋಳಿಕ ಹೆಗ್ಗುರುತು ಪಡೆಯಲು ಸಜ್ಜಾಗಿರುವ ಎಷ್ಟೋ ವಿಶೇಷತೆಗಳು, ಮೈಸೂರಿನಿಂದಲೇ ಮರೆಯಾಗುತ್ತಿವೆ. ಉದಾಹರಣೆಗೆ ಮೈಸೂರು ವೀಳ್ಯದೆಲೆ ಹಾಗೂ ಮೈಸೂರು ಮಲ್ಲಿಗೆ, ಬಾಳೆಹಣ್ಣು ಬೆಳೆಗಾರರು ಮೈಸೂರಿನಲ್ಲೇ ವಿರಳ. ಹೀಗಾಗಿ, ಬೆಳೆಗಾರರಿಗೆ ಆರ್ಥಿಕ ಸಹಕಾರ ನೀಡಲು ಸರ್ಕಾರ ಯೋಜನೆ ರೂಪಿಸ್ತಿದೆ.. ಈ ಕೊರತೆಯ ನಡುವೆಯೂ ಮೈಸೂರು ನಗರ ಭೌಗೋಳಿಕ ವಿಶೇಷತೆಗಳ ಹೆಗ್ಗುರುತು ಉಳ್ಳ ಪ್ರವಾಸಿ ತಾಣವಾಗಿ ಬದಲಾಗ್ತಿರೋದು ಸಂತಸದ ವಿಚಾರ.

ಮುಂದಿನ ದಿನಗಳಲ್ಲಿ ಸರ್ಕಾರ ಭೌಗೋಳಿಕ ಹೆಗ್ಗುರುತು ಪಡೆಯುವ ಮೈಸೂರಿನ 18 ವಿಭಿನ್ನ ವಿಶೇಷ ಉತ್ಪನ್ನಗಳಿಗಾಗಿಯೇ ಪ್ರತ್ಯೇಕ ಯೋಜನೆ ರೂಪಿಸಬೇಕಿದೆ. GI ವಿಶೇಷ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಲು ಸರ್ವ ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿಯೇ ಮುಂದಿನ ತಿಂಗಳು ಸರ್ಕಾರದಿಂದ ಹೊಸ ನೀತಿ ಜಾರಿಗೆ ಬರಲಿದೆ ಎಂದು ಕೈಗಾರಿಕಾ ಇಲಾಖೆಯ ಮೂಲಗಳು ತಿಳಿಸಿವೆ.

ಮೈಸೂರಿನ ಹೆಗ್ಗುರುತಾದ ನಂಜನಗೂಡು ಬಾಳೆಹಣ್ಣು ಉತ್ಪಾದನೆ ಅಳಿವಿನಂಚಿನಲ್ಲಿದೆ, ವೀಳ್ಯದೆಲೆ ಉತ್ಪಾದನೆಗೆ ರಿಯಲ್ ಎಸ್ಟೇಟ್ ಭೂತ ಬಡಿದಿದೆ. ಹೀಗಾಗಿ, ರೈತರಿಗೆ ಆರ್ಥಿಕ ನೆರವು ನೀಡಬೇಕಾದ ಅನಿವಾರ್ಯತೆ ಇದೆ. ಅಷ್ಟೇ ಅಲ್ಲ, ಈ ಎಲ್ಲಾ ಉತ್ಪನ್ನಗಳಿಗೆ ಮೈಸೂರಿನ ಹೆಗ್ಗುರುತು ಎಂದು ಬಿಂಬಿಸಿ ಮಾರುಕಟ್ಟೆಯನ್ನೂ ಒದಗಿಸಬೇಕಾದ ಕೆಲಸವನ್ನು ಸರ್ಕಾರ ಮಾಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ