ಆ್ಯಪ್ನಗರ

ಮೈಸೂರು: 10 ದಿನದಲ್ಲಿಯೇ ಶೇ.50ರಷ್ಟು ಇಳಿದ ಸಕ್ರಿಯ ಪ್ರಕರಣಗಳು..! ಕಡಿಮೆಯಾದ ಕೊರೊನಾ ಆತಂಕ

ದಸರಾ ಪ್ರಾರಂಭವಾಗುವುದಕ್ಕೂ ಮುಂಚೆ ಮೈಸೂರಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿತ್ತು. ಆದರೆ,ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಂಭ್ರಮ ಯಶಸ್ವಿಯಾಗಿ ಮುಗಿಯುವುದರ ಜೊತೆಗೆ ಕೊರೊನಾ ಆತಂಕವೂ ಕಡಿಮೆಯಾಗಿದೆ. ಕೇವಲ 10 ದಿನಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.50ಕ್ಕಿಂತಲೂ ಕಡಿಮೆಯಾಗಿದೆ.

Vijaya Karnataka Web 30 Oct 2020, 5:22 pm
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಂಭ್ರಮ ಯಶಸ್ವಿಯಾಗಿ ಮುಗಿಯುವುದರ ಜೊತೆಗೆ ಕೊರೊನಾ ಆತಂಕವೂ ಕಡಿಮೆಯಾಗಿದೆ. ಕೇವಲ 10 ದಿನಗಳ ಅವಧಿಯಲ್ಲಿ ಮೈಸೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.50ಕ್ಕಿಂತಲೂ ಕಡಿಮೆಯಾಗಿದೆ.
Vijaya Karnataka Web mysurus coronavirus active cases drop by over 50 in ten days
ಮೈಸೂರು: 10 ದಿನದಲ್ಲಿಯೇ ಶೇ.50ರಷ್ಟು ಇಳಿದ ಸಕ್ರಿಯ ಪ್ರಕರಣಗಳು..! ಕಡಿಮೆಯಾದ ಕೊರೊನಾ ಆತಂಕ


ಅಲ್ಲದೆ, ಇದುವರೆಗೂ 44,550ಕ್ಕೂ ಹೆಚ್ಚು ಜನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅಕ್ಟೋಬರ್‌ ಆರಂಭದಿಂದ ರೋಗಿಗಳ ಗುಣಮುಖದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರುವುದು ಆತಂಕ ಕಡಿಮೆಯಾಗಲು ಕಾರಣವಾಗಿದೆ. ಗುರುವಾರದ ವರದಿಯಂತೆ ಮೈಸೂರಿನಲ್ಲಿ 1,900 ಸಕ್ರಿಯ ಪ್ರಕರಣಗಳಿವೆ. ಇದು ಕಳೆದ 10 ದಿನಗಳ ಹಿಂದಿನ ಸಕ್ರಿಯ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ ಶೇಕಡಾ 50ಕ್ಕಿಂತ ಕಡಿಮೆಯಾಗಿದೆ. ಅಕ್ಟೋಬರ್ 20 ರವರೆಗೆ ಸುಮಾರು 6,000 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದ್ದವು.

ಅಕ್ಟೋಬರ್‌ ಆರಂಭವಾಗುತ್ತಿದ್ದಂತೆ ಮೈಸೂರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಸಾಂಸ್ಕೃತಿಕ ನಗರಿ ದಸರಾಗೆ ಸಜ್ಜಾಗುತ್ತಿತ್ತು. ಸರಳ ದಸರಾ ಎಂದಿದ್ದರೂ ಬೇರೆ ಬೇರೆ ಕಡೆಯಿಂದ ನಗರಕ್ಕೆ ಆಗಮಿಸುವ ಪ್ರವಾಸಿಗರಿಂದ ಪ್ರಕರಣಗಳು ಹೆಚ್ಚಾಗಬಹುದು ಎಂಬ ಸಾಕಷ್ಟು ಆತಂಕಗಳು ಇದ್ದವು. ಹಬ್ಬದ ಸಮಯದಲ್ಲಿ ಸಾಂಕ್ರಾಮಿಕ ರೋಗದ ನಿರ್ವಹಣೆಗೆ ಬೆಂಗಳೂರಿನ ಕೊರೊನಾ ವೈರಸ್‌ ತಾಂತ್ರಿಕ ಸಲಹಾ ಸಮಿತಿ ಭೇಟಿ ನೀಡಿ ಜಿಲ್ಲಾಡಳಿತಕ್ಕೆ ಸಲಹೆ ನೀಡಿತ್ತು.

ದಸರಾದ ಆರಂಭ ಮತ್ತು ಅಂತ್ಯದ ನಂತರ ಕಳೆದ ತಿಂಗಳಾದಂತೆ ಪ್ರಕರಣಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಿಲ್ಲ. ಹಲವು ಕಾರ್ಯಕ್ರಮಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ರದ್ದುಗೊಳಿಸಲಾಗಿತ್ತು. ಜೊತೆಗೆ ಅನೇಕ ಕಾರ್ಯಕ್ರಮಕಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಇದರಿಂದಲೂ ಕೂಡ ಕೊರೊನಾ ವೈರಸ್‌ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿಲ್ಲ.

ಮೈಸೂರು: ಅರಮನೆಗಿಂತಲೂ ಮೃಗಾಲಯಕ್ಕೆ ಹೆಚ್ಚು ಜನ ಭೇಟಿ..! 19.56 ಲಕ್ಷ ರೂ. ಆದಾಯ

ದಸರಾ ಆರಂಭಕ್ಕೂ ಮೊದಲು ಮೈಸೂರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಎರಡು ಬಾರಿ ಭೇಟಿ ನೀಡಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸೂಚನೆ ನೀಡಿದ್ದರು. ಪರೀಕ್ಷೆ ಹೆಚ್ಚಿಸುವುದು, ಮನೆ ಬಾಗಿಲಿನಲ್ಲಿ ಕೊರೊನಾ ಪರೀಕ್ಷೆ, ಮತ್ತು ಸಂಪರ್ಕ ಪತ್ತೆಹಚ್ಚುವಿಕೆ ಸೇರಿ ಅನೇಕ ವಿಧಾನಗಳನ್ನು ಅನುಸರಿಸಲಾಗಿತ್ತು.

ಪ್ರವಾಸಿಗರೇ ಇತ್ತ ಗಮನಿಸಿ..! ಇನ್ಮುಂದೆ ಅರಮನೆ ಪ್ರವೇಶಕ್ಕೆ ಕೊರೊನಾ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯ..!

ದಸರಾದ ಮೊದಲ ದಿನ ಅಕ್ಟೋಬರ್ 17ರಂದು ಸಕ್ರಿಯ ಪ್ರಕರಣಗಳು 7,246ರಷ್ಟಿದ್ದರೆ, 501 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದವು. ಎರಡನೇ ದಿನ 404 ಹೊಸ ಕೇಸ್‌, ಮೂರನೇ ದಿನ 151 ಪಾಸಿಟಿವ್‌ ಕೇಸ್‌, ನಾಲ್ಕನೇ ದಿನ 451 ಹೊಸ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5,976ಕ್ಕೆ ಇಳಿದಿತ್ತು. ಅದಾದ 10 ದಿನಗಳಲ್ಲಿ ಪಾಸಿಟಿವಿಟಿ ಪ್ರಮಾಣ ಮತ್ತು ಮರಣ ಪ್ರಮಾಣ ಕಡಿಮೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.50ಕ್ಕಿಂತಲೂ ಕಡಿಮೆಯಾಗಿದೆ.

ಮೈಸೂರು ಪಾಲಿಕೆಯಲ್ಲಿ ಗ್ರಾಪಂ ಸೇರ್ಪಡೆ ಜಟಾಪಟಿ..! ಸಭೆಯಿಂದ ಹೊರನಡೆದ ಶಾಸಕ ಜಿ.ಟಿ.ದೇವೇಗೌಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ