ಆ್ಯಪ್ನಗರ

ನಾಡ ಕುಸ್ತಿ: ವರುಣ್‌ಗೆ ಗೆಲುವು

ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ನಡೆದ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಭೂತಪ್ಪನ ಗರಡಿಯ ಪೈ.ವರುಣ್‌, ಸಿಂಧುವಳ್ಳಿ ಪುರ ಪೈ.ರಿಶೋದ್‌ರನ್ನು ಸೋಲಿಸುವ ಮೂಲಕ ವಿಜಯ ಶಾಲಿಯಾಗಿದ್ದಾರೆ.

Vijaya Karnataka 11 Oct 2018, 5:00 am
ಮೈಸೂರು: ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ನಡೆದ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಭೂತಪ್ಪನ ಗರಡಿಯ ಪೈ.ವರುಣ್‌, ಸಿಂಧುವಳ್ಳಿ ಪುರ ಪೈ.ರಿಶೋದ್‌ರನ್ನು ಸೋಲಿಸುವ ಮೂಲಕ ವಿಜಯ ಶಾಲಿಯಾಗಿದ್ದಾರೆ.
Vijaya Karnataka Web nada wrestling varun wins
ನಾಡ ಕುಸ್ತಿ: ವರುಣ್‌ಗೆ ಗೆಲುವು


ಇನ್ನೊಂದು ಕುಸ್ತಿಯಲ್ಲಿ ನಜರ್‌ಬಾದ್‌ ಪೈ.ಶರತ್‌ ಹೊಸಹಳ್ಳಿ ಪೈ.ಸಂತೋಷ್‌ರನ್ನು ಸೋಲಿಸಿದರು. ಉಳಿದಂತೆ ಬೆಂಗಳೂರು ಪೈ.ಚೇತನ್‌ ವಿರುದ್ಧ ಕಾಳಿ ಸಿದ್ದನಹುಂಡಿಯ ಪೈ.ಕೃಷ್ಣ, ಕ್ಯಾತಮಾರನಹಳ್ಳಿ ಪೈ.ನವೀನ್‌ ವಿರುದ್ಧ ಬಾಬುರಾಯನ ಕೊಪ್ಪಲಿನ ಕಿರಣ್‌ ಹಾಗೂ ಹೆಬ್ಬಾಡಿ ಪೈ.ರಾಜಣ್ಣ ವಿರುದ್ಧ ಬಸ್ತೀಪುರ ಪೈ.ದೇವರಾಜ್‌ ಗೆಲುವು ಸಾಧಿಸಿದ್ದಾರೆ.

ಸಮಬಲ ಹೋರಾಟ: ಹಂಪಾಪುರ ಪೈ.ನಾಗೇಶ್‌ ಮತ್ತು ಬೆಳಗಾವಿ ಪೈ.ನಾಗರಾಜು, ರಮ್ಮನಗಳ್ಳಿ ಪೈ. ರವಿ ಮತ್ತು ಸಾಂಗ್ಲಿ ಪೈ.ಭಜರಂಗ, ಸಾಂಗ್ಲಿ ಪೈ.ಪರಶರಮ್‌ ಮತ್ತು ಪಾಲಹಳ್ಳಿ ಪೈ.ಗಿರೀಶ್‌, ಉದ್ಬೂರು ಪೈ.ಭರತ್‌ ಮತ್ತು ಪಾಂಡವಪುರ ಪೈ.ಸುಜೇಂದ್ರ, ಇಟ್ಟಿಗೆಗೂಡು ಪೈ.ಚಂದನ್‌ ಮತ್ತು ಗಂಜಾಂ ಪೈ.ನಾರಾಯಣ, ಕನಕಪುರ ಪೈ.ಸ್ವರೂಪ್‌ ಗೌಡ ಮತ್ತು ಕೊಪ್ಪಲು ಪೈ.ಕಿರಣ್‌, ಗಂಜಾಂ ಪೈ.ವಿನಯ್‌ ಸಾಮ್ರಾಟ್‌ ಮತ್ತು ರಮ್ಮನಹಳ್ಳಿ ಪೈ.ರಾಘುನಾಯಕ್‌, ಪೈ.ನಿತಿನ್‌ ಅಪ್ಪು ಮತ್ತು ಪಡುವಾರಹಳ್ಳಿ ಪೈ.ಚಂದ್ರು, ಬನ್ನೂರು ಪೈ.ಸತೀಶ್‌ ಮತ್ತು ಮಳವಳ್ಳಿ ಪೈ.ಕಾರ್ತಿಕ್‌ ನಾಯಕ್‌, ಗಂಜಾಂ ಪೈ.ರವಿಚಂದ್ರ ಮತ್ತು ಪೈ.ಶಬ್ಬೀರ್‌ ಖಾನ್‌, ನಂಜನಗೂಡು ಪೈ.ಸೂರ್ಯಕಾಂತ್‌ ಮತ್ತು ಚಾಮುಂಡಿ ಕ್ರೀಡಾಂಗಣ ಪೈ.ರಾಜೇಶ್‌, ಕೆಂಚನಹಳ್ಳಿ ಪೈ.ಮನು ಮತ್ತು ಮೈಸೂರು ಪೈ.ವಾಸಿಖ್‌, ಒಕ್ಕಲಗೇರಿ ಪೈ.ಕುಮಾರ್‌ ಕಾಳಿ ಮತ್ತು ಪೈ.ಅರ್ಷದ್‌ ನಡುವಿನ ಕುಸ್ತಿ ಡ್ರಾನಲ್ಲಿ ಅಂತ್ಯಗೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ