ಆ್ಯಪ್ನಗರ

21ರಿಂದ ರಾಷ್ಟ್ರ ಮಟ್ಟದ ಚೆಸ್‌ ಪಂದ್ಯಾವಳಿ

ವಿಕ ಸುದ್ದಿಲೋಕ ಮೈಸೂರು ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಆಲ್‌ ಇಂಡಿಯಾ ಅಂಡರ್‌ 15 ಫಿಡ್‌ ರೇಟೆಡ್‌ ಓಪನ್‌ ಚೆಸ್‌ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ...

Vijaya Karnataka 11 Nov 2018, 5:00 am
ಮೈಸೂರು: ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಆಲ್‌ ಇಂಡಿಯಾ ಅಂಡರ್‌ 15 ಫಿಡ್‌ ರೇಟೆಡ್‌ ಓಪನ್‌ ಚೆಸ್‌ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.
Vijaya Karnataka Web national level chess tournament in mysore on nov 21
21ರಿಂದ ರಾಷ್ಟ್ರ ಮಟ್ಟದ ಚೆಸ್‌ ಪಂದ್ಯಾವಳಿ


ಯುನೈಟೆಡ್‌ ಕರ್ನಾಟಕ ಚೆಸ್‌ ಅಸೋಸಿಯೇಷನ್‌, ಆಲ್‌ ಇಂಡಿಯಾ ವೆಸ್‌ ಫೆಡರೇಷನ್‌ ಮತ್ತು ಮೈಸೂರು ಚೆಸ್‌ ಕ್ಲಬ್‌ ಸಹಯೋಗದಲ್ಲಿ ನ.21ರಿಂದ 25ರವರೆಗೆ ಮೈಸೂರು ವಿವಿಯ ಜಿಮ್ನಾಸಿಯಂ ಸಭಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮೈಸೂರು ಚೆಸ್‌ ಕ್ಲಬ್‌ನ ಉಪಾಧ್ಯಕ್ಷ ನಾಗೇಂದ್ರ ಮುರಳೀಧರ್‌ ತಿಳಿಸಿದರು.

ದೇಶದ್ಯಾಂತ 300 ಜನ ಚದುರಂಗ ಪಟುಗಳು ಭಾಗಿಯಾಗುವ ನಿರೀಕ್ಷೆ ಇದ್ದು, ಸುಮಾರು 2.50 ಲಕ್ಷ ರೂ.ಗಳವರೆಗೆ 30 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ನ.21ರಂದು 9ಕ್ಕೆ ಎಂ.ಎಸ್‌. ರಾಮಯ್ಯ ಶಿಕ್ಷ ಣ ಸಂಸ್ಥೆಯ ಸಂಸ್ಥಾಪಕ ಸದಸ್ಯ ಎಂ.ಆರ್‌. ಜಯರಾಂ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಯೂತ್‌ ಕಮೀಷನ್‌ನ ಕೆ. ಶ್ರೀನಿವಾಸ್‌, ಜಿಪಂ ಸಿಇಒ ಜ್ಯೋತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಒಟ್ಟು 8 ವಿಭಾಗದಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಎಲ್ಲಾ ಪಂದ್ಯಗಳು ಸ್ವಿಸ್‌ ಲೀಗ್‌ ಮಾದರಿಯಲ್ಲಿ ನಡೆಯಲಿದೆ. ಒಟ್ಟು 9 ಸುತ್ತಿನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುತ್ತದೆ. ಒಟ್ಟು 40 ಟ್ರೋಫಿ ನೀಡಲಾಗುತ್ತದೆ. ಉತ್ತಮ ಪ್ರದರ್ಶನ ನೀಡಿದ 6 ವರ್ಷದೊಳಗಿನ ಬಾಲಕ-ಬಾಲಕಿಗೆ ಬೆಸ್ಟ್‌ ಯಂಗೆಸ್ಟ್‌ ಗರ್ಲ್ಸ್ ಮತ್ತು ಬೆಸ್ಟ್‌ ಯಂಗೆಸ್ಟ್‌ ಬಾಯ್‌ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ಭಾಗವಹಿಸಲಿಚ್ಛಿಸುವವರು ನ.15ರೊಳಗೆ ಡಿಡಿಡಿ.ಞysಟ್ಟಛ್ಚಿhಛಿss್ಚ್ಝ್ಠಚಿ.್ಚಟಞ. ಉಞaಜ್ಝಿ.ಞysಟ್ಟಛ್ಚಿhಛಿಛಿss್ಚ್ಝ್ಠಚಿ17ಃಜಞaಜ್ಝಿ.್ಚಟಞ. ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಮೈಸೂರು ಚೆಸ್‌ ಕ್ಲಬ್‌ನ ಸಿ.ಕೆ. ಮುರಳೀಧರನ್‌, ಗೌರವಾಧ್ಯಕ್ಷ ಎಚ್‌.ಜಿ. ಶ್ರೀವರ, ಜಿಲ್ಲಾ ಚೆಸ್‌ ಅಸೋಸಿಯೇಷನ್‌ ಉಪಾಧ್ಯಕ್ಷ ಲಾ. ಜಗನ್ನಾಥ್‌, ಕಾರ್ಯದರ್ಶಿ ಜಯ್‌ ಪ್ರಕಾಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ