ಆ್ಯಪ್ನಗರ

ಮೈಸೂರಿನಲ್ಲಿ ಏನೇ ಸಮಸ್ಯೆಯಿದ್ದರೂ ಈ ಅಪ್ಲಿಕೇಶನ್‌ ನಿಂದ ಸೂಕ್ತ ಪರಿಹಾರ!

ಮೈಸೂರು ನಗರ ಪಾಲಿಕೆ ಮತ್ತಚ್ಟು ಜನಸ್ನೇಹಿ ಆಗುವ ಉದ್ದೇಶದಿಂದ ಹಿಂದೆ ಇದ್ದ ಮೈ ಕ್ಲೀನ್ ಸಿಟಿ ಆ್ಯಪ್ ಅನ್ನು ಅಭಿವೃದ್ಧಿ ಮಾಡಿದೆ. ಶುಕ್ರವಾರ ಮೈಸೂರು ಮೇಯರ್ ಈ ಅನ್ನು ಬಿಡುಗಡೆ ಮಾಡಿದ್ದಾರೆ.

Vijaya Karnataka Web 13 Mar 2020, 5:26 pm
ಮೈಸೂರು: ನಗರ ಪಾಲಿಕೆಯ ಆಡಳಿತವನ್ನು ಇನ್ನಷ್ಟು ಪಾರದರ್ಶಕ ಹಾಗೂ ಜನಸ್ನೇಹಿಗೊಳಿಸುವ ಉದ್ದೇಶದಿಂದಾಗಿ ಈ ಹಿಂದೆ ಇದ್ದ ‘ಮೈ ಕ್ಲೀನ್ ಸಿಟಿ’ ಆ್ಯಪ್ ನ ಹೊಸ ಆವೃತ್ತಿಯನ್ನು ಮತ್ತಷ್ಟು ಹೊಸ ಅಪ್ಲಿಕೇಶ್‌ ಸೇರ್ಪಡೆಗೊಳಿಸುವ ಮೂಲಕ ಬಿಡುಗಡೆ ಮಾಡಲಾಯಿತು.
Vijaya Karnataka Web my clean city


ಶುಕ್ರವಾರ ಪಾಲಿಕೆಯಲ್ಲಿ ಮೇಯರ್ ತಸ್ನೀಂ ಹೊಸ ಆವೃತ್ತಿಯ ಆ್ಯಪ್ ಅನ್ನು ಬಿಡುಗಡೆಗೊಳಿಸಿದರು. ಇದೇ ವೇಳೆ ಆಯುಕ್ತರಾದ ಗುರುದತ್ ಹೆಗಡೆ ಮಾತನಾಡಿ, ಈಗಾಗಲೇ ಗೂಗಲ್ ಪ್ಲೇ ಸ್ಟೋರ್ ಮೂಲಕ ‘ಮೈ ಕ್ಲೀನ್ ಸಿಟಿ- ಮೈಸೂರು' ಆ್ಯಪ್ ನಲ್ಲಿ ಲಭ್ಯವಿದೆ. ಇನ್ನು ಇಂದಿನ ಹೊಸ ಆವೃತ್ತಿಯಲ್ಲಿ ಹಲವು ಜನಸ್ನೇಹಿ ಅಂಶಗಳನ್ನು ಸೇರಿಸಲಾಗಿದೆ. ಹಿಂದೆ ಇದ್ದ ಅಪ್ಲಿಕೇಶನ್‌ ನಲ್ಲಿ ಗುಂಡಿ ಬಿದ್ದಿರುವ ರಸ್ತೆ, ಘನತ್ಯಾಜ್ಯ ವಿಲೇವಾರಿ, ಬೀದಿ ದೀಪ ಸಮಸ್ಯೆ, ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ, ಫುಟ್ ಪಾತ್ ಅಥವಾ ಪಾಲಿಕೆ ಆಸ್ತಿ ಒತ್ತುವರಿ ಪ್ರಾಣಿಗಳ ಹಾವಳಿ ಕುರಿತಾಗಿ ಅಷ್ಟೇ ದೂರು ದಾಖಲಿಸಬಹುದಿತ್ತು. ಈ ಹೊಸ ಅಪ್ಲಿಕೇಶನ್‌ ನಲ್ಲಿ ಮಾರಕ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ಕುರಿತು ಎಲ್ಲಿಯಾದರೂ ದೂರು ನೀಡಬಹುದು ಎಂದರು.

ಇನ್ನು ನಮ್ಮ ಸುತ್ತಮುತ್ತಲ ನಾಗರಿಕರು ನಿಷೇಧಿತ ಪ್ಲಾಸ್ಟಿಕ್ ಬಳಕೆ ಕುರಿತು ದೂರು ನೀಡಿದ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ತೆರಳಿ ನಿಷೇಧಿತ ಪ್ಲಾಸ್ಟಿಕ್ ಬಳಕೆದಾರರ ವಿರುದ್ಧ ಕ್ರಮ ಜರುಗಿಸಲಿದ್ದಾರೆ. ಅಲ್ಲದೇ ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಜನರು ನಗರ ಪಾಲಿಕೆಯೊಂದಿಗೆ ಕೈಜೋಡಿಸಲು ಈ ಆ್ಯಪ್ ಸಹಕಾರಿಯಾಗಿದೆ ಎಂದು ತಿಳಿಸಿದರು.

ಹೊಸ ಆವೃತ್ತಿಯ ಅಪ್ಲಿಕೇಶನ್‌ ನಲ್ಲಿ ದೂರು ನೇರವಾಗಿ ವಾರ್ಡ್ ಅಧಿಕಾರಿಗೆ ತಲುಪುತ್ತದೆ. ಹೀಗಾಗಿ ನಾಗರಿಕರ ಸಮಸ್ಯೆಗಳಿಗೆ ಮತ್ತಷ್ಟು ವೇಗವಾಗಿ ಪರಿಹಾರ ನೀಡಬಹುದು. ಪ್ರತಿಯೊಂದು ಮಸ್ಯೆಗಳನ್ನು ಪರಿಹರಿಸಲು ನಿಗದಿತ ಕಾಲಮಿತಿ ನಿಗದಿಪಡಿಸಲಾಗಿದ್ದು ನಿಗದಿತ ಸಮಯದೊಳಗೆ ಸಮಸ್ಯೆ ಬಗೆಹರಿಸದೇ ಇದ್ದರೆ ವಲಯ ಅಧಿಕಾರಿ ಸೂಕ್ತಕ್ರಮ ಕೈಗೊಳ್ಳುತ್ತಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ