ಆ್ಯಪ್ನಗರ

ಯಾವುದೇ ಗೊಂದಲವಿಲ್ಲ, ಒಟ್ಟಾಗಿದ್ದೇವೆ: ಬಿಎಸ್‌ವೈ

ಈಶ್ವರಪ್ಪ ಮೊದಲು ಬರುವುದಿಲ್ಲ ಅಂದಿದ್ದರು.ಆಮೇಲೆ ಬರುವುದಾಗಿ ಹೇಳಿದರು. ಹೀಗಾಗಿ ಗೋಷ್ಠಿಯಲ್ಲಿ ಈಶ್ವರಪ್ಪ ಅವರಿಗೆ ಅವಕಾಶ ನೀಡಲಾಗಿದೆ. ಯಾವುದೇ ಗೊಂದಲವಿಲ್ಲ, ಒಟ್ಟಾಗಿದ್ದೇವೆ ಎಂದು ಬಿಎಸ್‌ವೈ ಹೇಳಿದ್ದಾರೆ.

ವಿಕ ಸುದ್ದಿಲೋಕ 6 May 2017, 1:55 pm
ಮೈಸೂರು: ಈಶ್ವರಪ್ಪ ಮೊದಲು ಬರುವುದಿಲ್ಲ ಅಂದಿದ್ದರು.ಆಮೇಲೆ ಬರುವುದಾಗಿ ಹೇಳಿದರು. ಹೀಗಾಗಿ ಗೋಷ್ಠಿಯಲ್ಲಿ ಈಶ್ವರಪ್ಪ ಅವರಿಗೆ ಅವಕಾಶ ನೀಡಲಾಗಿದೆ. ಯಾವುದೇ ಗೊಂದಲವಿಲ್ಲ, ಒಟ್ಟಾಗಿದ್ದೇವೆ ಎಂದು ಬಿಎಸ್‌ವೈ ಹೇಳಿದ್ದಾರೆ.
Vijaya Karnataka Web no confusion we are together by
ಯಾವುದೇ ಗೊಂದಲವಿಲ್ಲ, ಒಟ್ಟಾಗಿದ್ದೇವೆ: ಬಿಎಸ್‌ವೈ


ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಆಗಮಿಸುವ ಮೊದಲು ಬಸವೇಶ್ವರ ಪುತ್ಥಳಿಗೆ ಪುಷ್ಪಾರ್ಚಣೆ ಮಾಡಿದ ಬಳಿಕ ಮಾತನಾಡಿದ ಯಡಿಯೂರಪ್ಪ, ಬರಗಾಲದ ಪರಿಸ್ಥಿತಿಯಲ್ಲಿ ಸಿಎಂ ದುಬೈ ಪ್ರವಾಸ ಮತ್ತು ಎಂಎಲ್‌ಸಿ ನೇಮಕಾತಿಯಲ್ಲಿ ತೊಡಗಿರುವುದು ಖಂಡನೀಯ ಎಂದರು.

ಕಾಂಗ್ರೆಸ್ ಸರಕಾರ ದಪ್ಪ ಚರ್ಮದ ಸರಕಾರ. ಸಿಎಂ ಆದಿಯಾಗಿ ಸಚಿವರು ಯಾರೂ ಬರ ಪ್ರವಾಸ ಮಾಡುತ್ತಿಲ್ಲ. ಬರ ಅವಲೋಕನಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧರಿಸಿದ್ದು, ಸಭೆಯಲ್ಲಿ ಪ್ರಮುಖ ನಾಯಕರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಕಾರ್ಯಕಾರಿಣಿಯಲ್ಲಿ ಭಾಷಣ ಮಾಡಿದ ಬಿಎಸ್‌ವೈ. ನಾನೆಂದೂ ಅಧಿಕಾರಕ್ಕೆ ಅಂಟಿಕೊಂಡಿಲ್ಲ. ಎರಡು ಬಾರಿ ಸಿ ಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಎಲ್ ಜಿ ಹಾವನೂರು, ವೆಂಕಟಸ್ವಾಮಿ, ಶ್ರೀಕಂಠದತ್ತರನ್ನು ಪಕ್ಷಕ್ಕೆ ಕರೆ ತಂದೆನು .ಅವರೆಲ್ಲರೂ ಬಂದರೆ ನನ್ನ ಕುರ್ಚಿಗೆ ಸಂಚಾರ ಆಗುತ್ತದೆ ಎಂದು ನಾನು ಎಂದೂ ಯೋಚಿಸಲಿಲ್ಲ ಎಂದರು.

ಬಿಎಸ್ ವೈ ಮೂರನೇ ಬಾರಿ ಸಿಎಂ ಆಗಲಿ

ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿದ ಅನಂತ್‌ ಕುಮಾರ್‌, ಬಿಎಸ್ ವೈ ಮೂರನೇ ಬಾರಿ ಸಿಎಂ ಆಗಲಿ ,ಹ್ಯಾಟ್ರಿಕ್ ಬಾರಿಸಲಿ ಎಂದು ಹೇಳಿ ಪಕ್ಷದಲ್ಲಿ ಏಕತೆಯ ಅಗತ್ಯವನ್ನು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ