ಆ್ಯಪ್ನಗರ

ನಮ್ಮದು ಬಾಂಬೆ ಟೀಮ್‌ ಅಲ್ಲ, ನಾವೀಗ ಬಿಎಸ್ವೈ, ಬಿಜೆಪಿ ಟೀಮ್: ಸಚಿವ ಬಿ ಸಿ ಪಾಟೀಲ್

​ಸಂಪುಟ ಪುನಾರಚನೆಯ ವೇಳೆ ಅಸಮಾಧಾನ ಹಲವರಿಗೆ ಇದೆ. ನಮ್ಮ ಐದು ಬೆರಳುಗಳೇ ಸಮವಿಲ್ಲ, ಶಾಸಕರು ಕೆಲ ಇಲಾಖೆಯನ್ನು ನಿರ್ವಹಿಸುವ ಇಚ್ಛೆ ಇರುವುದರಿಂದ ಅಸಮಾಧಾನ ಇರುವುದು ಸಹಜ. ಬಳಿಕ ಶಮನ ಆಗಲಿದೆ

Vijaya Karnataka Web 23 Jan 2021, 2:49 pm
ಮೈಸೂರು: ಸದ್ಯ ನಮ್ಮದು ಯಾವ ಬಾಂಬೆ ಟೀಮ್‌ ಅಲ್ಲ. ನಾವಿರುವುದು ಬಿಎಸ್ವೈ ಟೀಮ್, ಬಿಜೆಪಿ ಟೀಮ್‌ನಲ್ಲಿ ಎಂದು ಕೃಷಿ ಸಚಿವ ಬಿ‌.ಸಿ‌. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
Vijaya Karnataka Web now we are in bs yediyurappa and bjp team says bc patil
ನಮ್ಮದು ಬಾಂಬೆ ಟೀಮ್‌ ಅಲ್ಲ, ನಾವೀಗ ಬಿಎಸ್ವೈ, ಬಿಜೆಪಿ ಟೀಮ್: ಸಚಿವ ಬಿ ಸಿ ಪಾಟೀಲ್


ಕಾರ್ಯಕ್ರಮವೊಂದಕ್ಕೆ ಹೋಗುವ ವೇಳೆ ಮೈಸೂರಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.

ಸಂಪುಟ ಪುನಾರಚನೆಯ ವೇಳೆ ಅಸಮಾಧಾನ ಹಲವರಿಗೆ ಇದೆ. ನಮ್ಮ ಐದು ಬೆರಳುಗಳೇ ಸಮವಿಲ್ಲ, ಶಾಸಕರು ಕೆಲ ಇಲಾಖೆಯನ್ನು ನಿರ್ವಹಿಸುವ ಇಚ್ಛೆ ಇರುವುದರಿಂದ ಅಸಮಾಧಾನ ಇರುವುದು ಸಹಜ. ಬಳಿಕ ಶಮನ ಆಗಲಿದೆ ಎಂದು ತಿಳಿಸಿದರು.

ಇನ್ನು ಬಾಂಬೆ ಟೀಮ್‌ ಬಿಜೆಪಿಗೆ ಬಂದು ಸೇರಿಕೊಂಡ ಮೇಲೆ ಎಲ್ಲರಿಗೂ ಪಕ್ಷವೇ ಟೀಮ್‌ ಆಗಿದೆ. ಗೋಹತ್ಯೆ ಮಾಡುವುದು ಅಪರಾಧ. ಪಾಲಕರಿಗೆ ವಯಸ್ಸಾಗಿದೆ ಎಂದು ಬಿಟ್ಟುಬರಲಾಗದು. ಸರಕಾರ ಗೋಶಾಲೆ ತೆರೆಯುವ ಸಂಬಂಧ ವಿಚಾರ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.

ಹಲವೆಡೆ ನಡೆಯುತ್ತಿರುವ ಗಣಿಗಾರಿಕೆಯಿಂದ ಕೃಷಿ ಚಟುವಟಿಕೆ ಮೇಲೆ ಅಡ್ಡ ಪರಿಣಾಮ ಆಗುತ್ತಿರುವ ಕುರಿತು ನನ್ನ ಗಮನಕ್ಕೆ ಬಂದಿದೆ. ಗಣಿ ಸಚಿವರ ಜೊತೆ ಚರ್ಚಿಸಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುತ್ತದೆ. ಅದೇ ರೀತಿ, ಗಣಿಗಾರಿಕೆ ನಡೆಸುವವರು ಮುನ್ನೆಚ್ಚರಿಕೆ ವಹಿಸಬೇಕಾದ ಕುರಿತು ಸರಕಾರ ಈ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಕೃಷಿ ಸಚಿವನಾಗಬೇಕೆಂಬುದು ನಾನು ಇಚ್ಛೆ ಪಟ್ಟ ಖಾತೆ. ರೈತರ ಬಾಳು ಹಸನಾದಾಗ ಮಾತ್ರ ನನಗೆ ತೃಪ್ತಿ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು, ಉತ್ತಮ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇನೆ. ಇನ್ನು ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರಕಾರ 10 ಬಾರಿ ಸಭೆ ನಡೆಸಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ರೈತರೊಂದಿಗೆ ಹೊಂದಾಣಿಕೆ ಏರ್ಪಡಲಿದೆ ಎಂದು ಸಚಿವ ಬಿ ಸಿ ಪಾಟೀಲ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ