ಆ್ಯಪ್ನಗರ

ಮುಕ್ತ ವಿವಿ: ಉಳಿದ 15 ವಿಷಯಗಳ ಮಾನ್ಯತೆಗಾಗಿ ಮನವಿ

ಕರ್ನಾಟಕ ರಾಜ್ಯ ಮುಕ್ತ ವಿವಿಯ 17 ಇನ್‌ಹೌಸ್‌ ತಾಂತ್ರಿಕೇತರ ವಿಷಯಗಳಿಗೆ ಮಾತ್ರ ಯುಜಿಸಿ ಅನುಮತಿ ನೀಡಿದ್ದು, ಉಳಿದಂತೆ 15 ವಿಷಯಗಳಿಗೆ ಮಾನ್ಯತೆಯನ್ನು ನೀಡುವಂತೆ ಯುಜಿಸಿಗೆ ಸಂಬಂಧಪಟ್ಟ ಅಗತ್ಯ ದಾಖಲಾತಿಗಳನ್ನು ಒದಗಿಸಲಾಗಿದೆ ಎಂದು ಕೆಎಸ್‌ಒಯು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ.

Vijaya Karnataka 23 Aug 2018, 5:00 am
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯ 17 ಇನ್‌ಹೌಸ್‌ ತಾಂತ್ರಿಕೇತರ ವಿಷಯಗಳಿಗೆ ಮಾತ್ರ ಯುಜಿಸಿ ಅನುಮತಿ ನೀಡಿದ್ದು, ಉಳಿದಂತೆ 15 ವಿಷಯಗಳಿಗೆ ಮಾನ್ಯತೆಯನ್ನು ನೀಡುವಂತೆ ಯುಜಿಸಿಗೆ ಸಂಬಂಧಪಟ್ಟ ಅಗತ್ಯ ದಾಖಲಾತಿಗಳನ್ನು ಒದಗಿಸಲಾಗಿದೆ ಎಂದು ಕೆಎಸ್‌ಒಯು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ.
Vijaya Karnataka Web open university request for the remaining 15 topics recognition
ಮುಕ್ತ ವಿವಿ: ಉಳಿದ 15 ವಿಷಯಗಳ ಮಾನ್ಯತೆಗಾಗಿ ಮನವಿ


ಪ್ರೊ.ಶಿವಲಿಂಗಯ್ಯ ಅವರು ಈ ಕುರಿತು ರಾಜ್ಯಪಾಲ ವಜುಬಾಯ್‌ ವಾಲಾ ಅವರನ್ನು ಭೇಟಿ ಮಾಡಿ ಕೆಎಸ್‌ಓಯುನ ಉಳಿದ 15 ವಿಷಯಗಳಿಗೆ ಮಾನ್ಯತೆಯನ್ನು ಕೊಡಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳ ಪ್ರವೇಶ ಸ್ಥಗಿತವಾಗಿದೆ. ಹೀಗಾಗಿ, ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರಿಂದ ಪ್ರವೇಶಾತಿಗೆ ಹೆಚ್ಚಿನ ಒತ್ತಡ ಬಂದಿದೆ. 2018-19ನೇ ಸಾಲಿನಿಂದ ಮುಕ್ತ ಮತ್ತು ದೂರ ಕಲಿಕೆ ಪದ್ಧತಿಯಲ್ಲಿ ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಯುಜಿಸಿ ಅನುಮೋದನೆಗೊಂಡಿರುವ 17 ಇನ್‌ಹೌಸ್‌ ತಾಂತ್ರಿಕೇತರ ವಿಷಯಗಳಿಗೆ ಸದ್ಯದಲ್ಲಿಯೇ ಪ್ರವೇಶಾತಿ ಆರಂಭಿಸಲಾಗುವುದು ಎಂದು ಪ್ರೊ.ಶಿವಲಿಂಗಯ್ಯ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ