ಆ್ಯಪ್ನಗರ

ವಾರದೊಳಗೆ ಮುಕ್ತ ವಿವಿ ಮಾನ್ಯತೆ ಆದೇಶ?

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ನೀಡುವ ಬಗ್ಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಇನ್ನು 2-3 ದಿನಗಳಲ್ಲಿ ಆದೇಶ ಹೊರಡಿಸುವ ನಿರೀಕ್ಷೆ ಇದೆ.

Vijaya Karnataka 9 Aug 2018, 5:00 am
ಕುಲಪತಿ ಜತೆ ಯುಜಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ ಶಾಸಕ ರಾಮದಾಸ್‌
Vijaya Karnataka Web open vv recognition order within the week
ವಾರದೊಳಗೆ ಮುಕ್ತ ವಿವಿ ಮಾನ್ಯತೆ ಆದೇಶ?


ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ನೀಡುವ ಬಗ್ಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಇನ್ನು 2-3 ದಿನಗಳಲ್ಲಿ ಆದೇಶ ಹೊರಡಿಸುವ ನಿರೀಕ್ಷೆ ಇದೆ.

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ.ರಾಮದಾಸ್‌ ಮತ್ತು ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಹೊಸದಿಲ್ಲಿ ಯಲ್ಲಿ ಮಂಗಳವಾರ ಯುಜಿಸಿ ಅಧ್ಯಕ್ಷ ಪ್ರೊ.ಡಿ.ಪಿ.ಸಿಂಗ್‌ ಅವರನ್ನು ಭೇಟಿ ಮಾಡಿದ ಸಂದರ್ಭ ಈ ಮಾಹಿತಿ ಲಭ್ಯವಾಗಿದೆ.

‘‘ಆ.2ರಂದು ನಡೆದ ಯುಜಿಸಿ ಸಭೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಪ್ರಸ್ತುತ ಸಾಲಿನಿಂದ ಮಾನ್ಯತೆಯನ್ನು ನೀಡುವ ಕ್ರಮಕ್ಕೆ ದೊರೆತ ಒಪ್ಪಿಗೆಯ ನಡಾವಳಿಯನ್ನು ಅನುಮೋದನೆಗಾಗಿ ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಕಳುಹಿಸಲಾಗಿತ್ತು. ಪ್ರಸ್ತಾವಕ್ಕೆ ಅಂಕಿತ ಹಾಕಿರುವ ಅವರು ಸಂಬಂಧಪಟ್ಟ ಯುಜಿಸಿ ಅಧಿಕಾರಿಗಳಿಗೆ ಕೂಡಲೇ ಕೆಎಸ್‌ಒಯುಗೆ ಪ್ರವೇಶಾತಿ ಕೈಗೊಳ್ಳಲು ಯುಜಿಸಿ ಮಾನ್ಯತೆಯ ಆದೇಶವನ್ನು ಜಾರಿ ಮಾಡುವಂತೆ ಸೂಚಿಸಿದ್ದಾರೆ,’’ ಎಂದು ರಾಮದಾಸ್‌ ತಿಳಿಸಿದ್ದಾರೆ.

-----------------

ಸುಮಾರು 3 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯುಜಿಸಿ ಮಾನ್ಯತೆ ಸದ್ಯದಲ್ಲಿಯೇ ದೊರಕಲಿದೆ. ಇದಕ್ಕೆ ಪ್ರತಿ ಹಂತದಲ್ಲೂ ಸ್ಪಂದಿಸಿ, ಪ್ರಮುಖ ಪಾತ್ರವಹಿಸಿದ ಕೇಂದ್ರ ಸಚಿವ ಅನಂತಕುಮಾರ್‌ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕೆಎಸ್‌ಒಯು ವಿದ್ಯಾರ್ಥಿಗಳು, ನೌಕರರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
-ಎಸ್‌.ಎ.ರಾಮದಾಸ್‌ ಶಾಸಕ

------------------

ಮಾನ್ಯತೆ ಪ್ರಸ್ತಾವಕ್ಕೆ ಯುಜಿಸಿ ಅನುಮೋದನೆ ಸಿಕ್ಕಿದ್ದು, ಮಾನವ ಸಂಪನ್ಮೂಲ ಸಚಿವರ ಒಪ್ಪಿಗೆಯೂ ಸಿಕ್ಕಿದೆ. ಸದ್ಯದಲ್ಲೇ ಆದೇಶ ಕೈಸೇರುವ ನಿರೀಕ್ಷೆ ಇದೆ.
-ಪ್ರೊ.ಡಿ.ಶಿವಲಿಂಗಯ್ಯ, ಕುಲಪತಿ, ಮುಕ್ತ ವಿವಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ