ಆ್ಯಪ್ನಗರ

ನಿಲ್ದಾಣವಿಲ್ಲದೇ ಪ್ರಯಾಣಿಕರ ಪರದಾಟ

* ಬಸ್‌ನಿಲ್ದಾಣ ಕಾಮಗಾರಿ ಆರಂಭ | ಪರಾರ‍ಯಯ ವ್ಯವಸ್ಥೆಯಿಲ್ಲದೆ ಎಲ್ಲೆಂದರಲ್ಲಿ ನಿಲ್ಲುವ ಪ್ರಯಾಣಿಕರು ನವೀನ್‌ ಕುಮಾರ್‌ ಪಿರಿಯಾಪಟ್ಟಣ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ...

Vijaya Karnataka 12 May 2019, 5:00 am
* ಬಸ್‌ನಿಲ್ದಾಣ ಕಾಮಗಾರಿ ಆರಂಭ | ಪರಾರ‍ಯಯ ವ್ಯವಸ್ಥೆಯಿಲ್ಲದೆ ಎಲ್ಲೆಂದರಲ್ಲಿ ನಿಲ್ಲುವ ಪ್ರಯಾಣಿಕರು
Vijaya Karnataka Web passenger strangling just because bus station in pereyapattana
ನಿಲ್ದಾಣವಿಲ್ಲದೇ ಪ್ರಯಾಣಿಕರ ಪರದಾಟ

ನವೀನ್‌ ಕುಮಾರ್‌ ಪಿರಿಯಾಪಟ್ಟಣ
ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ 1 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ಆರಂಭವಾಗಿದ್ದು, ಪರಾರ‍ಯಯ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.

ಪಟ್ಟಣದ ಬಸ್‌ ನಿಲ್ದಾಣದ ಚಾವಣಿ ಸೇರಿದಂತೆ ಹಲವು ಶಿಥಿಲವಾಗಿತ್ತು. ಈ ಹಿಂದೆ ಸಾರಿಗೆ ಸಚಿವ ತಮ್ಮಣ್ಣ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಕೆ.ಮಹದೇವ್‌ ಮನವಿ ಮಾಡಿದಂತೆ ಬಸ್‌ ನಿಲ್ದಾಣ ಮರುನವೀಕರಣಕ್ಕೆ 1 ಕೋಟಿ ರೂ. ಹಣ ಬಿಡುಗಡೆಯಾಗಿತ್ತು. ಕಳೆದ 4-5 ದಿನಗಳಿಂದ ಕಾಮಗಾರಿ ಆರಂಭವಾಗಿದೆ. ಆದರೆ ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿರುವುದರಿಂದ ಬಸ್‌ಗಾಗಿ ಕಾಯುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಏನೇನು ಅಭಿವೃದ್ಧಿ: 1 ಕೋಟಿ ವೆಚ್ಚದಲ್ಲಿ ಬಸ್‌ನಿಲ್ದಾಣದ ಚಾವಣಿ ಶೀಟ್‌ಗಳನ್ನು ಬದಲಾಯಿಸಿ ನವವಿನ್ಯಾಸದ ಶೀಟ್‌ಗಳನ್ನು ಅಳವಡಿಸಲಾಗುತ್ತದೆ. ನೆಲಹಾಸು ಬದಲಾವಣೆ, ಬೆಂಚ್‌ಗಳ ಅಳವಡಿಕೆ, ಕ್ಯಾಂಟೀನ್‌ ನವೀಕರಣ, ಶೌಚಾಲಯಗಳ ನವೀಕರಣ ಮತ್ತು ಸ್ಕೂಟರ್‌, ಸೈಕಲ್‌ ಸ್ಟ್ಯಾಂಡ್‌ಗಳ ನಿರ್ಮಾಣ ನಡೆಯಲಿದೆ.

ಪ್ರಯಾಣಿಕರ ಪರದಾಟ: ನವೀಕರಣ ಮಳೆಗಾಲದಲ್ಲಿ ಆರಂಭವಾಗಿರುವುದರಿಂದ ಜನರು ಮರದ ಅಡಿಯಲ್ಲಿ ನಿಂತು ಬಸ್‌ಗಳಿಗೆ ಕಾಯುವ ಸ್ಥಿತಿ ಬಂದಿದೆ. ಅಲ್ಲದೆ ಯಾವ ಬಸ್‌ ಎಲ್ಲಿ ಹೋಗುತ್ತದೆ, ಜನರು ಎಲ್ಲಿ ಕಾಯಬೇಕು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಇದಲ್ಲದೆ ಪ್ರತಿದಿನ ಸಂಜೆ ವೇಳೆ ಮಳೆ ಬರುತ್ತಿದೆ. ಮಧ್ಯಾಹ್ನ ಬಿರುಬಿಸಿಲು ಇರುತ್ತದೆ. ಆದರೆ ಪ್ರಯಾಣಿಕರ ಅನುಕೂಲಕ್ಕೆ ಯಾವುದೇ ವ್ಯವಸ್ಥೆ ಇಲ್ಲದೆ ಮರಗಿಡಗಳ ಆಶ್ರಯ ಪಡೆಯುವಂತಾಗಿದೆ ಎನ್ನುತ್ತಾರೆ ಪ್ರಯಾಣಿಕರು.

ಸೂಚನಾ ಫಲಕ ಅಳವಡಿಸಿ: ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ಗಳ ಮಾರ್ಗಸೂಚಿ ಬಗ್ಗೆ ಸೂಕ್ತ ಫಲಕಗಳನ್ನು ಅಳವಡಿಸಬೇಕು ಮತ್ತು ತಾತ್ಕಾಲಿಕ ಶೆಡ್‌ಗಳನ್ನು ಮಳೆಗಾಲ ಕಳೆಯುವ ವರೆಗೆ ಅಳವಡಿಸಿದರೆ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೈಸೂರು ಕಡೆಗೆ ಬೋರ್ಡ್‌ ಅಳವಡಿಸಲಾಗಿದೆ, ಟಿಸಿಯವರಿಗೆ ಅಲ್ಲಿಯೇ ಇದ್ದು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೂಚನಾ ಫಲಕ ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮವಹಿಸಲಾಗುವುದು. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವುದರಿಂದ ಯಾವುದೇ ತಾತ್ಕಾಲಿಕ ವ್ಯವಸ್ಥೆ ಮಾಡಿಲ್ಲ.
-ರಾಮಚಂದ್‌ ದರ್ಶನ್‌ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ ಪಿರಿಯಾಪಟ್ಟಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ