ಆ್ಯಪ್ನಗರ

ಬಾಕಿ ವಸೂಲಿ ಕಾಯಿದೆ: 18ಕ್ಕೆ ಅರಿವು ಕಾರ್ಯಕ್ರಮ

ಮೈಸೂರು ಕೈಗಾರಿಕೆಗಳ ಸಂಘದ ವತಿಯಿಂದ ಸಣ್ಣ ಉದ್ದಿಮೆಗಳ ಸರಬರಾಜಿನ ಬಾಕಿ ವಸೂಲಿ ಕಾಯಿದೆ ಹಾಗೂ ಸೂಕ್ಷ್ಮ ಸಣ್ಣ ಉದ್ಯಮಗಳ ಸೌಲಭ್ಯ ಪರಿಷತ್‌ನ ಸಾಮರ್ಥ್ಯ‌ದ ಅರಿವು ಕಾರ್ಯಕ್ರಮ ಡಿ.18 ರಂದು ನಗರದಲ್ಲಿ ಜರುಗಲಿದೆ.

Vijaya Karnataka 15 Dec 2018, 5:00 am
ಮೈಸೂರು : ಮೈಸೂರು ಕೈಗಾರಿಕೆಗಳ ಸಂಘದ ವತಿಯಿಂದ ಸಣ್ಣ ಉದ್ದಿಮೆಗಳ ಸರಬರಾಜಿನ ಬಾಕಿ ವಸೂಲಿ ಕಾಯಿದೆ ಹಾಗೂ ಸೂಕ್ಷ್ಮ ಸಣ್ಣ ಉದ್ಯಮಗಳ ಸೌಲಭ್ಯ ಪರಿಷತ್‌ನ ಸಾಮರ್ಥ್ಯ‌ದ ಅರಿವು ಕಾರ್ಯಕ್ರಮ ಡಿ.18 ರಂದು ನಗರದಲ್ಲಿ ಜರುಗಲಿದೆ.
Vijaya Karnataka Web pending receiving act awareness program on 18th
ಬಾಕಿ ವಸೂಲಿ ಕಾಯಿದೆ: 18ಕ್ಕೆ ಅರಿವು ಕಾರ್ಯಕ್ರಮ


ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘಟಕರಾದ ಪಿ. ವಾಸು, ''ಅಂದು ಬೆಳಗ್ಗೆ 10.30ಕ್ಕೆ ನಗರದ ಲಲಿತ ಸ್ಮಾರಕ ಭವನದಲ್ಲಿ ವಿದ್ಯಾ ವಿಕಾಸ ಎಂಜಿನಿಯರಿಂಗ್‌ ಸಂಸ್ಥೆ, ಎಂ.ಎಸ್‌.ಎಂ.ಇ ಅಭಿವೃದ್ಧಿ ಸಂಸ್ಥೆ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದೇಶನಾಲಯ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್‌ ಹಾಗೂ ಮೈಸೂರು ಕೈಗಾರಿಕೆಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಲಿದೆ,''ಎಂದರು.

''ಸರಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದೇಶನಾಲಯದ ಅಯುಕ್ತರಾದ ಗುಂಜನ್‌ ಕೃಷ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಸಿಯಾ ಉಪಾಧ್ಯಕ್ಷ ರಾಜು, ಎಂ.ಎಸ್‌.ಎಂ.ಎ.ಇ ಮಂತ್ರಾಲಯದ ಉಪನಿರ್ದೇಶಕ ಪಿಯೂಷ್‌ ಅಗರವಾಲ್‌, ಎಂ.ಎಸ್‌.ಎಂ.ಇ.ಕೌನ್ಸಿಲ್‌ ಅಧ್ಯಕ್ಷ ರವಿಕೋಟಿ ಭಾಗವಹಿಸಲಿದ್ದಾರೆ. ಮೈಸೂರು, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರುಗಳು, ಕೈಗಾರಿಕಾ ಪದಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರಕಾರದ ಉದ್ಯಮಗಳು, ಮಂಡಳಿ ನಿಗಮಗಳ ಪ್ರಮುಖರು, ವಿಶ್ವವಿದ್ಯಾನಿಲಯ, ಶಿಕ್ಷಣ ಸಂಸ್ಥೆ, ವಕೀಲರು, ಲೆಕ್ಕ ಪರಿಶೋಧಕರು, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಂದ ಖರೀದಿಸುವ ಎಲ್ಲಾ ಖರೀದಿದಾರರು, ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ,''ಎಂದರು.

''ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಸರಬರಾಜಿನ ಬಾಕಿ ಪಾವತಿ ವಸೂಲಿ ಕಾಯಿದೆ ಕೈಗಾರಿಕಾ ಉತ್ಪನ್ನಗಳ ಪಾವತಿಯ ವಿಳಂಬವನ್ನು ತಪ್ಪಿಸಲಿದೆ. ಕೆಲವು ಸಂದರ್ಭಗಳಲ್ಲಿ ಆರು ತಿಂಗಳಿನಿಂದ ಹಲವು ವರ್ಷಗಳವರೆಗೆ ಖರೀದಿ ಸಂಸ್ಥೆಗಳು ಬಾಕಿ ಪಾವತಿಸದೆ ಸಣ್ಣ ಕೈಗಾರಿಕೆಗಳು ದುಡಿಮೆ ಬಂಡವಾಳದ ಕೊರತೆಯಿಂದ ರೋಗಗ್ರಸ್ಥವಾಗಿ ಮುಚ್ಚಲ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ,''ಎಂದು ಹೇಳಿದರು.

ಗೋಷ್ಠಿಯಲ್ಲಿ ಎಂ.ಎಸ್‌.ಎಂ.ಇ ಕೌನ್ಸಿಲ್‌ ಅಧ್ಯಕ್ಷ ರವಿ ಕೋಟಿ, ಪ್ರಧಾನ ಕಾರ್ಯದರ್ಶಿ ಸುರೇಶ್‌ ಕುಮಾರ್‌ ಜೈನ್‌, ರಾಜು, ಸತೀಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ