ಆ್ಯಪ್ನಗರ

ದಕ್ಷಿಣ ಭಾರತದಲ್ಲಿ ಪಿರಿಯಾಪಟ್ಟಣ ನಂ. 1 ಕ್ಲೀನ್‌ ಸಿಟಿ

ಸ್ವಚ್ಛ ಸರ್ವೇಕ್ಷ ಣೆ 2019ರ ಅಭಿಯಾನದಡಿ ದೇಶದಲ್ಲಿ 4237 ಸ್ಥಳೀಯ ಸಂಸ್ಥೆಗಳು ಭಾಗಿಯಾಗಿದ್ದು , ಜ.1ರಿಂದ 31ರವರೆಗೆ ನಡೆದ ಸ್ವಚ್ಛ ಸರ್ವೇಕ್ಷ ಣೆ ಅಭಿಯಾನದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾ ಮುಂತಾದ ರಾಜ್ಯಗಳನ್ನು ಒಟ್ಟುಗೂಡಿಸಿ ಸೌತ್‌ ಇಂಡಿಯಾ ಜೋನ್‌ ಮಾಡಲಾಗಿತ್ತು.

Vijaya Karnataka 7 Mar 2019, 8:01 pm
ಪಿರಿಯಾಪಟ್ಟಣ: ದಕ್ಷಿಣ ಭಾರತ ವಲಯದ ನಂ.1 ಕ್ಲೀನ್‌ ಸಿಟಿ ಪ್ರಶಸ್ತಿಗೆ ಪಿರಿಯಾಪಟ್ಟಣ ಪುರಸಭೆ ಭಾಜನವಾಗಿದೆ.
Vijaya Karnataka Web clean


ಸ್ವಚ್ಛ ಸರ್ವೇಕ್ಷ ಣೆ 2019ರ ಅಭಿಯಾನದಡಿ ದೇಶದಲ್ಲಿ 4237 ಸ್ಥಳೀಯ ಸಂಸ್ಥೆಗಳು ಭಾಗಿಯಾಗಿದ್ದು , ಜ.1ರಿಂದ 31ರವರೆಗೆ ನಡೆದ ಸ್ವಚ್ಛ ಸರ್ವೇಕ್ಷ ಣೆ ಅಭಿಯಾನದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾ ಮುಂತಾದ ರಾಜ್ಯಗಳನ್ನು ಒಟ್ಟುಗೂಡಿಸಿ ಸೌತ್‌ ಇಂಡಿಯಾ ಜೋನ್‌ ಮಾಡಲಾಗಿತ್ತು. ಈ ವಿಭಾಗದಲ್ಲಿ 1 ಲಕ್ಷ ಜನಸಂಖ್ಯೆಯೊಳÜಗಿನ ಪುರಸಭೆ ವಿಭಾಗದಲ್ಲಿ ಪಿರಿಯಾಪಟ್ಟಣ ಪುರಸಭೆಗೆ ನಂ.1 ಕ್ಲೀನ್‌ಸಿಟಿ ಪ್ರಶಸ್ತಿ ದೊರಕಿದೆ. 2ನೇ ಸ್ಥಾನ ತೆಲಂಗಾಣದ ಸಿದ್ದಿಪೇಟೆ ಮತ್ತು 3ನೇ ಸ್ಥಾನ ಕೆ.ಆರ್‌.ನಗರಕ್ಕೆ ಲಭಿಸಿದೆ.

ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಹರ್‌ದೀಪ್‌ಸಿಂಗ್‌ ಪುರಿ ಅವರು ಪ್ರಶಸ್ತಿ ವಿತರಣೆ ಮಾಡಿದ್ದು, ಸಮಾರಂಭದಲ್ಲಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಅಂಜುಪರ್ವೇಜ್‌, ಮೈಸೂರು ಜಿಲ್ಲಾ ಯೋಜನಾ ನಿರ್ದೇಶಕ ಲೋಕನಾಥ್‌, ಪಿರಿಯಾಪಟ್ಟಣ ಪುರಸಭೆ ಮುಖ್ಯಾಧಿಕಾರಿ ಡಿ.ಪುಟ್ಟರಾಜು, ಪರಿಸರ ಎಂಜಿನಿಯರ್‌ ಎ.ಟಿ.ಪ್ರಸನ್ನ ಪ್ರಶಸ್ತಿಯನ್ನು ನೀಡುವ ಸಂದರ್ಭದಲ್ಲಿ ಹಾಜರಿದ್ದರು.

ಪಿರಿಯಾಪಟ್ಟಣದ ಜನರಲ್ಲಿ ಸ್ವಚ್ಛ ಸರ್ವೇಕ್ಷ ಣ ಅಂಗವಾಗಿ ವಿವಿಧ ಜಾಗೃತಿ ಜಾಥಾ ನಡೆಸಿದ್ದು, ಜನನಿಬಿಡ ಪ್ರದೇಶದಲ್ಲಿ ಡಸ್ಟ್‌ಬಿನ್‌ಗಳ ಬಳಕೆ ಸೇರಿದಂತೆ ಅನೇಕ ರೀತಿಯ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶಾಸಕ ಕೆ. ಮಹದೇವ್‌ ಅವರ ಸಹಕಾರ ಮತ್ತು ಪೌರಕಾರ್ಮಿಕರ ಶ್ರಮ, ಪರಿಸರ ಎಂಜಿನಿಯರ್‌ ಪ್ರಸನ್ನ ಸೇರಿದಂತೆ ಎಲ್ಲಾ ಸಿಬ್ಬಂದಿ ಸಹಕಾರದಿಂದ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದ್ದು, ಜನರು ಇದಕ್ಕೆ ಪೂರಕವಾಗಿ ಸ್ಪಂದಿಸಿದ ಪರಿಣಾಮ ಪ್ರಶಸ್ತಿ ಲಭಿಸಿದೆ. ಇದರಿಂದ ಜವಾಬ್ದಾರಿ ಹೆಚ್ಚಾಗಿದೆ.
ಡಿ.ಪುಟ್ಟರಾಜು, ಪುರಸಭಾ ಮುಖ್ಯಾಧಿಕಾರಿ, ಪಿರಿಯಾಪಟ್ಟಣ ಪುರಸಭೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ