ಆ್ಯಪ್ನಗರ

ರಸ್ತೆ ಕಾಮಗಾರಿ ಕಳಪೆ ಆರೋಪ: ಪ್ರತಿಭಟನೆ

ಹಳೆ ಎಡತೊರೆಯ ರೈಲ್ವೆ ಅಂಡರ್‌ಬ್ರಿಡ್ಜ್ ಕೆಳಗೆ ಹಳ್ಳ ಬಿದ್ದಿದ್ದ ರಸ್ತೆಯನ್ನು ದುರಸ್ಥಿ ಮಾಡುವ ನೆಪದಲ್ಲಿ ಮತ್ತಷ್ಟು ಹಳ್ಳ ಮಾಡಿದ್ದಾರೆ ಎಂದು ಆರೋಪಿಸಿ ಉದಯ ಕರ್ನಾಟಕ ಸಂಘದ ಕಾರ‌್ಯಕರ್ತರು ಪ್ರತಿಭಟನೆ ನಡೆಸಿದರು.

ವಿಕ ಸುದ್ದಿಲೋಕ 29 Nov 2016, 5:15 am
ಕೃಷ್ಣರಾಜನಗರ: ಹಳೆ ಎಡತೊರೆಯ ರೈಲ್ವೆ ಅಂಡರ್‌ಬ್ರಿಡ್ಜ್ ಕೆಳಗೆ ಹಳ್ಳ ಬಿದ್ದಿದ್ದ ರಸ್ತೆಯನ್ನು ದುರಸ್ಥಿ ಮಾಡುವ ನೆಪದಲ್ಲಿ ಮತ್ತಷ್ಟು ಹಳ್ಳ ಮಾಡಿದ್ದಾರೆ ಎಂದು ಆರೋಪಿಸಿ ಉದಯ ಕರ್ನಾಟಕ ಸಂಘದ ಕಾರ‌್ಯಕರ್ತರು ಪ್ರತಿಭಟನೆ ನಡೆಸಿದರು.
Vijaya Karnataka Web poor road infrastructure charges protest
ರಸ್ತೆ ಕಾಮಗಾರಿ ಕಳಪೆ ಆರೋಪ: ಪ್ರತಿಭಟನೆ


ರಸ್ತೆ ದುರಸ್ಥಿಗೊಳಿಸುವ ಸಂದರ್ಭದಲ್ಲಿ ಸಮರ್ಪಕವಾಗಿ ಕೆಲಸ ಮಾಡುವಂತೆ ತಿಳಿ ಹೇಳಿದರೂ ಕೇಳದೆ ಮತ್ತೆ ಮನೆಗೆ ಹೋಗಿ ಬರುವಷ್ಟರಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಒಂದಷ್ಟು ಡಾಂಬರ್ ಹಾಕಿ ಹಳ್ಳಮುಚ್ಚಿ ಹೊರಟು ಹೋಗಿದ್ದಾರೆ. ನಾವು ಯಾರನ್ನು ಪ್ರಶ್ನಿಸುವುದು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಹಾಸನ ಮೈಸೂರು ಮುಖ್ಯರಸ್ತೆಯಿಂದ ತಿರುವು ಪಡೆಯುವ ಈ ರಸ್ತೆಯೂ ಸಹ ರಾಜ್ಯ ಹೆದ್ದಾರಿಯಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಮಳೆ ಬಂದರೆ ಆಳುದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಅನೇಕ ಬಾರಿ ಅಪಘಾತ ಸಂಭವಿಸಿ ಹಲವು ಮಂದಿ ಆಸ್ಪತ್ರೆ ಸೇರಿದ್ದಾರೆ. ಸಹ ರಾಜ್ಯ ಹೆದ್ದಾರಿ ಮಟ್ಟಕ್ಕೆ ರಸ್ತೆಯನ್ನು ಎತ್ತರಿಸಿ ಡಾಂಬರೀಕರಣಗೊಳಿಸದೇ ಮತ್ತೆ ಇದ್ದ ಹಳ್ಳದ ಮಟ್ಟಕ್ಕೆ ಡಾಂಬರ್ ತ್ಯಾಪೆ ಹಾಕಿ ಹೋಗಿದ್ದಾರೆ ಎಂದು ಆರೋಪಿಸಿದರು.

ಈ ಕೂಡಲೇ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಡತೊರೆಯ ರೈಲ್ವೆ ಅಂಡರ್‌ಬ್ರಿಡ್ಜ್ ಕೆಳಗಿನ ರಸ್ತೆಯ ಎರಡು ಕಡೆ ಚರಂಡಿ ತೆಗೆದು ರಸ್ತೆಯನ್ನು ಎತ್ತರಿಸಿ ನೀರು ನಿಲ್ಲದಂತೆ ಡಾಂಬರೀಕರಣಗೊಳಿಸುವಂತೆ ಒತ್ತಾಯಿಸಿದರು. ಕೂಡಲೇ ಕೆಲಸ ಆರಂಭ ಮಾಡದಿದ್ದಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಸಂಘದ ಅಧ್ಯಕ್ಷರಾದ ಕೆರೆ ಕಷ್ಣ, ನಾಗೇಶ್,ಕಷ್ಣೇಗೌಡ, ಕಾಟ್ನಾಳುಚಂದ್ರು ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ