ಆ್ಯಪ್ನಗರ

ಶಿಕ್ಷೆ ಬದಲು ಸುಧಾರಣೆಗೆ ಆದ್ಯತೆ ನೀಡಿ

ರಾಜ್ಯದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲಿನ ಅಪರಾಧ ಚಟುವಟಿಕೆಗಳಲ್ಲಿ ಶೇ.4.3ರಷ್ಟಕ್ಕೆ ಮಾತ್ರ ಶಿಕ್ಷೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಿ.ಎಚ್‌.ವಘೇಲಾ ಆತಂಕ ವ್ಯಕ್ತಪಡಿಸಿದರು.

Vijaya Karnataka 25 Mar 2019, 5:00 am
ಮೈಸೂರು : ರಾಜ್ಯದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲಿನ ಅಪರಾಧ ಚಟುವಟಿಕೆಗಳಲ್ಲಿ ಶೇ.4.3ರಷ್ಟಕ್ಕೆ ಮಾತ್ರ ಶಿಕ್ಷೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಿ.ಎಚ್‌.ವಘೇಲಾ ಆತಂಕ ವ್ಯಕ್ತಪಡಿಸಿದರು.
Vijaya Karnataka Web priority of punishment should be preferred
ಶಿಕ್ಷೆ ಬದಲು ಸುಧಾರಣೆಗೆ ಆದ್ಯತೆ ನೀಡಿ


ನಗರದ ನಜರ್‌ಬಾದ್‌ನಲ್ಲಿರುವ ಕರ್ನಾಟಕ ಪೊಲೀಸ್‌ ಅಕಾಡೆಮಿ ಸಭಾಂಗಣದಲ್ಲಿ 'ಗ್ಲೋಬಲ್‌ ಕನ್ಸರ್ನ್ಸ್‌ ಇಂಡಿಯಾ ಹಾಗೂ ಹನ್ಸ್‌ ಸೀಡೆಲ್‌ ಪ್ರತಿಷ್ಠಾನ,'' ವತಿಯಿಂದ ಭಾನುವಾರ ನಡೆದ ಮಹಿಳೆ ಹಾಗೂ ಮಕ್ಕಳ ಮೇಲೆ ಹಿಂಸಾಚಾರ ಮುಕ್ತ ಸುರಕ್ಷಿತ ನಗರಿಗಳು' ಕುರಿತಂತೆ ವಕೀಲರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

''ಬಹುತೇಕ ಪ್ರಕರಣಗಳಲ್ಲಿ ಅಪರಾಧಿಗಳೂ ಶಿಕ್ಷೆಯಾಗದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ವ್ಯವಸ್ಥೆ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ,'' ಎಂದು ಬೇಸರ ವ್ಯಕ್ತಪಡಿಸಿದರು.

''ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಶೇ.60ಕ್ಕೂ ಹೆಚ್ಚು ಮಂದಿ ಶಿಕ್ಷೆಗೆ ಗುರಿಯಾಗದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಈ ವ್ಯವಸ್ಥೆಯನ್ನು ಬದಲಿಸುವ ಜವಾಬ್ದಾರಿ ನಮ್ಮ ಮೇಲಿದೆ,'' ಎಂದು ಹೇಳಿದರು.

''ಹಲವು ಅಪರಾಧ ಪ್ರಕರಣಗಳಲ್ಲಿ ಸಾಕ್ಷಿಗಳಿಗೆ ಸಿಗದ ರಕ್ಷಣೆಯಿಂದ ಅಪರಾಧಿಗಳು ಶಿಕ್ಷೆ ಅನುಭವಿಸದೇ ಬಿಡುಗಡೆಯಾಗಿದ್ದು, ಪೊಲೀಸರು, ವಕೀಲರು ಮತ್ತು ನ್ಯಾಯಾಂಗ ವ್ಯವಸ್ಥೆಯ ಸಮಯ ವ್ಯರ್ಥವಾಗುತ್ತಿದೆ,'' ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ಮತ್ತು ದಾವೆ ಇಲಾಖೆಯ ನಿರ್ದೇಶಕ ಅಮೃತಕುಮಾರ್‌ ಮಾತನಾಡಿ, ಪ್ರಸ್ತುತ ವಕೀಲರು ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದನ್ನೇ ದೊಡ್ಡ ಗುರಿಯಾಗಿಸಿಕೊಂಡಿದ್ದು, ಈ ಮನೋಭಾವ ಬದಲಿಸಿಕೊಂಡು ಶಿಕ್ಷೆಯ ಬದಲಾಗಿ ಸುಧಾರಣೆ ಎಂಬ ವಿಚಾರಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಪೊಲೀಸ್‌ ಅಕಾಡೆಮಿ ನಿರ್ದೇಶಕ ವಿಪುಲ್‌ ಕುಮಾರ್‌, ಗ್ಲೋಬಲ್‌ ಕನ್ಸರ್ನ್ಸ್‌ ಇಂಡಿಯಾ ಸಂಸ್ಥಾಪಕಿ ಬೃಂದಾ ಅಡಿಗೆ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ