ಆ್ಯಪ್ನಗರ

ಮುಂದುವರಿದ ಕಾರ್ಮಿಕರ ಪ್ರತಿಭಟನೆ

ತಮಗೆ ಯಾವುದೇ ಸೌಲಭ್ಯ ನೀಡದೇ ಆಂಧ್ರಪದೇಶಕ್ಕೆ ಸಾಮೂಹಿಕವಾಗಿ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿನ್ಯಾಸ್‌ ಇನೋವೇಟಿವ್‌ ಟೆಕ್ನಾಲಜಿಸ್‌ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ಕೂಡ ಮುಂದುವರಿಯಿತು.

Vijaya Karnataka 14 Jul 2018, 5:00 am
ಮೈಸೂರು : ತಮಗೆ ಯಾವುದೇ ಸೌಲಭ್ಯ ನೀಡದೇ ಆಂಧ್ರಪದೇಶಕ್ಕೆ ಸಾಮೂಹಿಕವಾಗಿ ವ
ರ್ಗಾವಣೆ ಮಾಡಿರುವುದನ್ನು ಖಂಡಿಸಿ ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿನ್ಯಾಸ್‌ ಇನೋವೇಟಿವ್‌ ಟೆಕ್ನಾಲಜಿಸ್‌ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ಕೂಡ ಮುಂದುವರಿಯಿತು.
Vijaya Karnataka Web protest workers protest
ಮುಂದುವರಿದ ಕಾರ್ಮಿಕರ ಪ್ರತಿಭಟನೆ


ಮೈಸೂರು ಡಿಸ್ಟ್ರಿಕ್ಟ್ ಜನರಲ್‌ ಎಂಪ್ಲಾಯಿಸ್‌ ಯೂನಿಯನ್‌, ವಿನ್ಯಾಸ್‌ ಇನೋವೇಟಿವ್‌ ಟೆಕ್ನಾಲಜಿಸ್‌ ವರ್ಕರ್ಸ್‌ ಯುನಿಟ್‌ ನೇತೃತ್ವದಲ್ಲಿ ಕಾರ್ಖಾನೆ ಎದುರು ಸೋಮವಾರದಿಂದ ಆಹೋರಾತ್ರಿ ಧರಣಿ ನಡೆಸುತ್ತಿರುವ ಕಾರ್ಮಿಕರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿ ಪ್ರತಿಭಟನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದರು.

ಕಾರ್ಖಾನೆಯಲ್ಲಿ 400 ಕಾರ್ಮಿಕರು 10 ವರ್ಷಗಳಿಂದ ದುಡಿಯುತ್ತಿದ್ದು, ಇದರಲ್ಲಿ 150 ಹೆಚ್ಚು ಮಹಿಳಾ ಕಾರ್ಮಿಕರು ಇದ್ದಾರೆ. ಇಲ್ಲಿ ನೀಡುತ್ತಿರುವ ವೇತನ ಸಾಕಷ್ಟು ಕಡಿಮೆ ಇದ್ದು, ಕಾರ್ಮಿಕರು ಸಂಘ ರಚಿಸಿಕೊಂಡು ಬೇಡಿಕೆ ಪಟ್ಟಿ ಸಲ್ಲಿಸಿದ್ದನ್ನು ನೆಪವಾಗಿಟ್ಟುಕೊಂಡು 20 ಮಹಿಳೆಯರು ಸೇರಿದಂತೆ ಒಟ್ಟು 94 ಕಾರ್ಮಿಕರನ್ನು ಆಂಧ್ರಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು. ಯುನಿಟ್‌ ಅಧ್ಯಕ್ಷ ಎಂ.ಕೆ.ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ ಸುಷ್ಮಾ ಅರ್‌.ಗೌಡ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ