ಆ್ಯಪ್ನಗರ

ಅ. 1 ರಂದು ದಸರಾ ಕ್ರೀಡಾಕೂಟಕ್ಕೆ ಪಿ.ವಿ. ಸಿಂಧು ಚಾಲನೆ

ಅ. 1ರಂದು ಸಂಜೆ 4.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುವ ದಸರಾ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಕ್ರೀಡಾಪಟು ಪಿ.ವಿ.ಸಿಂಧು ಕ್ರೀಡಾ ಜ್ಯೋತಿ ಸ್ವೀಕರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.

Vijaya Karnataka Web 28 Sep 2019, 7:10 pm
ಮೈಸೂರು: ಮೈಸೂರು ದಸರಾ 2019 ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದಸರಾ ಕ್ರೀಡಾ ಉಪ ಸಮಿತಿ ಸಹಯೋಗದಲ್ಲಿ ಸೆ.29 ರಿಂದ ಅ.6 ರವರೆಗೆ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ಅ. 1ರಂದು ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿಆಯೋಜಿಸಿರುವ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಕ್ರೀಡಾಪಟು ಪಿವಿ ಸಿಂಧು ಕ್ರೀಡಾಜ್ಯೋತಿ ಸ್ವೀಕರಿಸುವ ಮೂಲಕ ಅಧಿಕೃತ ಚಾಲನೆ ನೀಡಲಿದ್ದಾರೆ.
Vijaya Karnataka Web Dasara Wrestling


''ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವ ವಿ.ಸೋಮಣ್ಣ ಧ್ವಜಾರೋಹಣ ನೆರವೇರಿಸುವರು. ಮೇಯರ್‌ ಪುಷ್ಪಲತಾ ಜಗನ್ನಾಥ್‌ ಕ್ರೀಡಾಪಟುಗಳ ಪರಿಚಯ ಮಾಡಿಕೊಡಲಿದ್ದಾರೆ. ಅ. 4ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ,'' ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಸರಾ ಚಲನಚಿತ್ರೋತ್ಸವದಲ್ಲಿ 57 ಸಿನಿಮಾ ಪ್ರದರ್ಶನ

''ನಗರದ 8ಕ್ಕೂ ಹೆಚ್ಚು ಮೈದಾನಗಳಲ್ಲಿಸುಮಾರು 30ಕ್ಕೂ ಹೆಚ್ಚು ಕ್ರೀಡೆಗಳು ನಡೆಯಲಿದ್ದು, 5000 ದಿಂದ 6000 ಪ್ರತಿಭಾನ್ವಿತ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅ. 1ರಿಂದ ನಾಲ್ಕು ದಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌ ಕ್ರೀಡೆಗಳು, ಬ್ಯಾಸ್ಕೆಟ್‌ಬಾಲ್‌, ಜಿಮ್ನಾಸ್ಟಿಕ್ಸ್‌, ಹಾಕಿ, ಕಬಡ್ಡಿ, ಖೋ-ಖೋ, ಈಜು, ವಾಲಿಬಾಲ್‌, ಥ್ರೋಬಾಲ್‌, ಹ್ಯಾಂಡ್‌ಬಾಲ್‌, ವೇಟ್‌ಲಿಫ್ಟಿಂಗ್‌, ಬಾಕ್ಸಿಂಗ್‌ ಕ್ರೀಡೆಗಳು ಜರುಗಲಿವೆ. ಇದಲ್ಲದೆ ಇನ್ನಿತರ ಕ್ರೀಡಾಂಗಣದಲ್ಲಿ ಅರ್ಚರಿ, ವುಶು, ಟೇಬಲ್‌ ಟೆನ್ನಿಸ್‌, ಟೆನ್ನಿಸ್‌, ಕುಸ್ತಿ, ಫೆನ್ಸಿಂಗ್‌ ಬ್ಯಾಡ್ಮಿಂಟನ್‌ (ಷಟಲ್‌), ಫುಟ್‌ಬಾಲ್‌, ಜೂಡೋ, ಟೆಕ್ವಾಂಡೋ, ಬಾಲ್‌ ಬ್ಯಾಡ್ಮಿಂಟನ್‌, ನೆಟ್‌ಬಾಲ್‌ ಪಂದ್ಯಗಳು ಜರುಗಲಿವೆ,'' ಎಂದು ಅವರು ಮಾಹಿತಿ ನೀಡಿದರು.

''ಅ. 2ರಂದು ರಿಂಗ್‌ ರಸ್ತೆಯ ಬನ್ನೂರು ಜಂಕ್ಷನ್‌ ಬಳಿಯಿಂದ ಪುರುಷರು ಮತ್ತು ಮಹಿಳೆಯರಿಗೆ 100 ಕಿ.ಮೀ., ಮಹಿಳೆಯರಿಗೆ 50 ಕಿ.ಮೀ. ಸೈಕ್ಲೊಥಾನ್‌ ಆಯೋಜಿಸಲಾಗಿದೆ. ಅ.2ರಂದು ಯುವರಾಜ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ಕರಾಟೆ, 1 ರಿಂದ 4ರವರೆಗೆ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಚೆಸ್‌, ದೇಹದಾರ್ಢ್ಯ ಸ್ಪರ್ಧೆ (ತೂಕ ಮತ್ತು ಎತ್ತರ ವಿಭಾಗ), ಸೈಕಲ್‌ ಪೋಲೋ, ಹಾಫ್‌ ಮ್ಯಾರಾಥಾನ್‌ ನಡೆಯಲಿದೆ,'' ಎಂದು ಸುರೇಶ್‌ ತಿಳಿಸಿದರು.

Dasara Buses: ಹಬ್ಬದ ನಿಮಿತ್ತ ಬೆಂಗಳೂರಿನಿಂದ ಬೆಳಗಾವಿ, ಮಂಗಳೂರಿಗೆ ವಿಶೇಷ ರೈಲು

ವಸತಿ ವ್ಯವಸ್ಥೆ: ''ಕ್ರೀಡಾಪಟುಗಳಿಗೆ ಈ ಹಿಂದೆ ಛತ್ರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಈ ಬಾರಿ ಎಲ್ಲಾ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ವಸತಿ ಗೃಹ, ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ನಂಜರಾಜ ಬಹದ್ದೂರ್‌ ಛತ್ರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಎಲ್ಲಾ ಮೈದಾನಗಳಿಂದ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆ ಇರುವ ಜಾಗಕ್ಕೆ ತೆರಳಲು ವಾಹನ ವ್ಯವಸ್ಥೆ ಮಾಡಲಾಗಿದೆ,'' ಎಂದು ಸಮಿತಿ ತಿಳಿಸಿದೆ.

ಕ್ರೀಡಾಜ್ಯೋತಿಗೆ ಚಾಲನೆ

ಸೆ.29ರಂದು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವ ವಿ.ಸೋಮಣ್ಣ, ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ದಸರಾ ಕ್ರೀಡಾಕೂಟದ ಅಂಗವಾಗಿ ಜಿಲ್ಲಾದ್ಯಂತ ಸಂಚರಿಸುವ ಕ್ರೀಡಾಜ್ಯೋತಿಯನ್ನು ಹೆಸರಾಂತ ಕ್ರೀಡಾಪಟುಗಳಾದ ಉಷಾರಾಣಿ, ಧನುಷಾ ಅವರಿಗೆ ಹಸ್ತಾಂತರಿಸಲಿದ್ದಾರೆ.

ಸೆ. 29ರಿಂದ ಹೊರಡುವ ಕ್ರೀಡಾಜ್ಯೋತಿಯು ಅ. 1ರವರೆಗೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳು, ನಗರದ ನಾನಾ ಬಡಾವಣೆಗಳಲ್ಲಿ ಸಂಚರಿಸಿ ಅಂತಿಮವಾಗಿ ಅ. 1ರಂದು ಸಂಜೆ 4.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುವ ದಸರಾ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮಕ್ಕೆ ಬರಲಿದೆ. ಈ ಸಂದರ್ಭದಲ್ಲಿಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಕ್ರೀಡಾಪಟು ಪಿ.ವಿ.ಸಿಂಧು ಕ್ರೀಡಾ ಜ್ಯೋತಿ ಸ್ವೀಕರಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ