ಆ್ಯಪ್ನಗರ

ಹುಣಸೂರು ನಗರಸಭೆ ವಾರ್ಡ್‌ ಮೀಸಲಾತಿ

ನಗರಸಭೆಯ 31 ವಾರ್ಡ್‌ಗಳ ಪೈಕಿ ಸಾರ್ವಜನಿಕ ಆಕ್ಷೇಪಣೆ ನಂತರ ಬರೋಬ್ಬರಿ 22 ವಾರ್ಡ್‌ಗಳ ಮೀಸಲಾತಿ ಬದಲಾಗಿದೆ. ಇದರಿಂದ ಬಹುತೇಕ ಸದಸ್ಯರು ಆಶ್ರಯ ಕಲ್ಪಿಸಿಕೊಂಡಂತಾಗಿದೆ.

Vijaya Karnataka 4 Aug 2018, 5:00 am
ಹುಣಸೂರು :
ನಗರಸಭೆಯ 31 ವಾರ್ಡ್‌ಗಳ ಪೈಕಿ ಸಾರ್ವಜನಿಕ ಆಕ್ಷೇಪಣೆ ನಂತರ ಬರೋಬ್ಬರಿ 22 ವಾರ್ಡ್‌ಗಳ ಮೀಸಲಾತಿ ಬದಲಾಗಿದೆ. ಇದರಿಂದ ಬಹುತೇಕ ಸದಸ್ಯರು ಆಶ್ರಯ ಕಲ್ಪಿಸಿಕೊಂಡಂತಾಗಿದೆ.
Vijaya Karnataka Web reservation of hunsur municipal ward
ಹುಣಸೂರು ನಗರಸಭೆ ವಾರ್ಡ್‌ ಮೀಸಲಾತಿ


ಮೇ.30 ರಂದು ಪ್ರಕಟಿಸಿದ್ದಂತೆ 4ನೇ ವಾರ್ಡ್‌ ಬಿ.ಸಿ.ಎಂ(ಎ)ಮಹಿಳೆ, 10ನೇ ವಾರ್ಡ್‌ ಪರಿಶಿಷ್ಟ ಜಾತಿ, 11ನೇ ವಾರ್ಡ್‌ ಬಿಸಿಎಂ(ಎ), 19ನೇ ವಾರ್ಡ್‌ ಸಾಮಾನ್ಯ, 20ನೇ ವಾರ್ಡ್‌ ಸಾಮಾನ್ಯ ಮಹಿಳೆ, 24ನೇ ವಾರ್ಡ್‌ ಸಾಮಾನ್ಯ ಮಹಿಳೆ, 25ನೇ ವಾರ್ಡ್‌ ಪರಿಶಿಷ್ಟ ಜಾತಿ, 28ನೇ ವಾರ್ಡ್‌ ಸಾಮಾನ್ಯ ಮಹಿಳೆ, 30ನೇ ವಾರ್ಡ್‌ ಸಾಮಾನ್ಯ ಮಹಿಳೆ. ಈ ವಾರ್ಡ್‌ಗಳ ಮೀಸಲಾತಿ ಯಥಾಸ್ಥಿತಿ ಇದ್ದರೆ, ಇನ್ನುಳಿದ 22 ವಾರ್ಡ್‌ಗಳ ಮೀಸಲಾತಿ ಬದಲಾಗಿದೆ. ಇದರಲ್ಲಿ ಆಡಳಿತ ಪಕ್ಷ ದ ಕೈಚಳಕವೂ ಇದೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. 27,28,29 ಹಾಗೂ 30ನೇ ವಾರ್ಡ್‌ಗಳೆಲ್ಲವೂ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದು ವಿಶೇಷ.

ಹೆಚ್ಚಾದ 4 ವಾರ್ಡ್‌:
ನಗರಸಭೆಯಾದ ನಂತರ ಜನಸಂಖ್ಯೆಗೆ ಅನುಗುಣವಾಗಿ 27ರಿಂದ 31ಕ್ಕೇರಿದ್ದು, 4 ವಾರ್ಡ್‌ಗಳನ್ನು ಹೆಚ್ಚಿಸಲಾಗಿದೆ. ಕಳೆದ ಬಾರಿ 27 ವಾರ್ಡ್‌ಗಳ ಪೈಕಿ 12 ಸಾಮಾನ್ಯ, ಬಿಸಿಎಂ(ಎ) 7, ಎಸ್‌ಸಿ 4 ಹಾಗೂ ಎಸ್‌ಟಿ 2 ಸ್ಥಾನ ಮೀಸಲು ಕಲ್ಪಿಸಲಾಗಿತ್ತು. ಈ ಬಾರಿ 16 ಸಾಮಾನ್ಯ(8 ಸಾ.ಮ), 6 ಬಿಸಿಎಂ (ಎ) (3 ಮಹಿಳೆ), ಎಸ್‌ಸಿ 5 (2 ಮಹಿಳೆ), ಎಸ್‌ಟಿ 3 (1 ಮಹಿಳೆ) ಹಾಗೂ ಬಿಸಿಎಂ(ಬಿ)ಗೆ ಒಂದು ಸ್ಥಾನವನ್ನು ಮೀಸಲಿರಿಸಲಾಗಿದೆ. ಕಳೆದ ಬಾರಿ 27 ವಾರ್ಡ್‌ಗಳಲ್ಲಿ 9 ಮಹಿಳೆಯರಿಗೆ ಮೀಸಲಾಗಿತ್ತು. ಈ ಬಾರಿ 14 ಮಂದಿ ಮಹಿಳಾ ವಾರ್ಡ್‌ಗಳಾಗಿರುವುದು ಹಾಗೂ ಬಿಸಿಎಂ(ಬಿ)ಗೂ ಒಂದು ಸ್ಥಾನ ಕಲ್ಪಿಸಿರುವುದು ವಿಶೇಷ.

ಅಧ್ಯಕ್ಷ ರಿಗೆ ಅವಕಾಶವಿಲ್ಲ: ಬದಲಾದ ಮೀಸಲಾತಿಯಿಂದ ಅಧ್ಯಕ್ಷ ಶಿವಕುಮಾರ್‌ ಮೊದಲನೆ ವಾರ್ಡ್‌ ಪ.ಜಾತಿಯಿಂದ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವುದರಿಂದ ಸ್ಪರ್ಧಿಸಲು ಬೇರೆ ಕ್ಷೇತ್ರ ನೋಡಿಕೊಳ್ಳಬೇಕಿದೆ. ಕೆಲ ಸದಸ್ಯರ ಸ್ಥಿತಿಯೂ ಇದೇ ರೀತಿಯಾಗಿದ್ದು, ಇತರೆ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ.

ವಾರ್ಡ್‌ ಮೀಸಲು ವಿವರ

1.ಪರಿಶಿಷ್ಟ ಪಂಗಡ. 16.ಸಾಮಾನ್ಯ

2.ಪರಿಶಿಷ್ಟ ಪಂಗಡ ಮಹಿಳೆ. 17.ಪರಿಶಿಷ್ಟ ಜಾತಿ

3.ಹಿಂದುಳಿದ ವರ್ಗ (ಎ)ಮಹಿಳೆ. 18.ಹಿಂದುಳಿದ ವರ್ಗ (ಬಿ)

4.ಹಿಂದುಳಿದ ವರ್ಗ (ಎ) ಮಹಿಳೆ 19.ಸಾಮಾನ್ಯ

5.ಹಿಂದುಳಿದ ವರ್ಗ ಎ. 20.ಸಾಮಾನ್ಯ (ಮಹಿಳೆ)

6.ಪರಿಶಿಷ್ಟ ಪಂಗಡ. 21.ಪರಿಶಿಷ್ಟಜಾತಿ (ಮಹಿಳೆ)

7.ಸಾಮಾನ್ಯ 22.ಸಾಮಾನ್ಯ

8.ಸಾಮಾನ್ಯ

9.ಹಿಂದುಳಿದ ವರ್ಗ (ಎ)ಮಹಿಳೆ 23.ಪರಿಶಿಷ್ಟ ಜಾತಿ (ಮಹಿಳೆ)

24. ಸಾಮಾನ್ಯ (ಮಹಿಳೆ )

10.ಪರಿಶಿಷ್ಟ ಜಾತಿ 25.ಪರಿಶಿಷ್ಟ ಜಾತಿ

11.ಹಿಂದುಳಿದ ವರ್ಗ(ಎ) 26.ಸಾಮಾನ್ಯ

12.ಸಾಮಾನ್ಯ 27.ಸಾಮಾನ್ಯ( ಮಹಿಳೆ )

13.ಹಿಂದುಳಿದ ವರ್ಗ (ಎ) 28.ಸಾಮಾನ್ಯ (ಮಹಿಳೆ )

14.ಸಾಮಾನ್ಯ (ಮಹಿಳೆ) 29.ಸಾಮಾನ್ಯ (ಮಹಿಳೆ)

15.ಸಾಮಾನ್ಯ (ಮಹಿಳೆ) 30.ಸಾಮಾನ್ಯ( ಮಹಿಳೆ)

31.ಸಾಮಾನ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ