ಆ್ಯಪ್ನಗರ

ಅ ಆ ಇ ಗೊತ್ತಿಲ್ಲದವರು ಮಸಿ ಬಳಿದಿದ್ದಾರೆ! ಅವರನ್ನು ನೋಡಿದ್ರೆ ಅಯ್ಯೋ ಅನ್ಸುತ್ತೆ:ಕಾಳಿ ಸ್ವಾಮಿ

ರಿಷಿಕುಮಾರ ಸ್ವಾಮೀಜಿ (ಕಾಳಿ ಸ್ವಾಮಿ) ಕರ್ನಾಟಕದಲ್ಲಿ ಸದ್ಯ ಈ ಹೆಸರು ಬಹಳ ಚಾಲ್ತಿಯಲ್ಲಿದೆ. ಕಾಳಿ ಸ್ವಾಮಿ ಮುಖಕ್ಕೆ ಮಸಿ ಬಳಿದ ಬಳಿಕ ಹಿಂದೂ ಪರ ಸಂಘಟನೆಗಳು ಕೂಡ ರೊಚ್ಚಿಗೆದ್ದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಳಿ ಸ್ವಾಮಿ, ಮಸಿ ಬಳಿದವರಿಗೆ ಅ ಆ ಇ ಬರಲ್ಲ, ಮಸಿ ಬಳಿತೀವಿ ಎಂದು ಬರ್ತಾರೆ ಎಂದು ಕಿಡಿಕಾರಿದರು.

Edited byಅವಿನಾಶ ವಗರನಾಳ | Lipi 15 May 2022, 11:57 pm

ಹೈಲೈಟ್ಸ್‌:


  • ʼಜಮೀರ್ ಅಹಮದ್‌ ಹೇಳುವ ತರದವರು ನಮ್ಮಲ್ಲೂ ಇದ್ದಾರೆʼ
  • ʼಇವರಿಗೆ ಅ ಆ ಇ ಈ ಬರಲ್ಲ, ಮಸಿ ಬಳಿತೀವಿ ಎಂದು ಬರ್ತಾರೆʼ
  • ತಮ್ಮ ಮುಖಕ್ಕೆ ಮಸಿ ಬಳಿದವರಿಗೆ ಟಾಂಗ್‌ ನೀಡಿದ ಕಾಳಿ ಸ್ವಾಮಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Kali Swamy
ಮೈಸೂರು: ಜಮೀರ್ ಅಹಮದ್‌ ಹೇಳುವ ತರದವರು ನಮ್ಮಲ್ಲೂ ಇದ್ದಾರೆ. ಕಲ್ಲು ಹೊಡೆದರೆ, ಬೆಂಕಿ ಹಚ್ಚಿದರೆ ಅವರಿಗೆ ಓದು ಬರಹ ಬರಲ್ಲ, ಏನೂ ಗೊತ್ತಿಲ್ಲ ಅಂತಾರೆ. ಅಂತವರು ನಮ್ಮಲ್ಲೂ ಇದ್ದಾರೆ. ಇವರಿಗೆ ಅ ಆ ಇ ಕೇಳಿದ್ರೆ ಬರಲ್ಲ. ಮಸಿ ಬಳಿತೀವಿ ಎಂದು ಬರ್ತಾರೆ. ಇವರನ್ನು ನೋಡಿದರೆ ನಮಗೂ ಅಯ್ಯೊ ಅನಿಸುತ್ತೆ. ಅಂತವರಿಗೆ ಏನು ಮಾಡಲು ಆಗಲ್ಲ ಎಂದು ರಿಷಿಕುಮಾರ (ಕಾಳಿ) ಸ್ವಾಮೀಜಿ ಒತ್ತಾಯಿಸಿದರು.
ಮೈಸೂರಿನಲ್ಲಿ ಭಾನುವಾರ ಮಾತನಾಡಿದ ಅವರು, ಮಸಿ ಬಳಿದವರಿಗೆ ಏನು ಮಾಡಲು ಆಗಲ್ಲ. ಅವರ ವಿರುದ್ಧ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೇಸು ಕೊಟ್ಟಿದ್ದೇವೆ. ಈಗ ಮಸಿ ಹಾಕಿದ್ದೇವೆ ಮುಂದೆ ಮಾರಿಹಬ್ಬ ಮಾಡುತ್ತೇವೆ ಅಂತಾರೆ. ಕೊಲೆ ಮಾಡಬಹುದು ಅಷ್ಟೇ.
ಯಾರೋ ಅವಮಾನ ಮಾಡಿದರೆ ಸನ್ಮಾನ ಮಾಡಲು ಚಾಮುಂಡಮ್ಮ ಇದ್ದಾಳೆ ಎಂದರು.

ಅವಮಾನ ಮಾಡಿದವರಿಗೆ ಒಳ್ಳೆದಾಗಲಿ ಎಂದು ಚಾಮುಂಡಿಯಲ್ಲಿ ಕೇಳಿಕೊಳ್ಳುತ್ತೇನೆ. ಸಾವರ್ಕರ್ ಅಂತವರೇ ಹಿಂಸೆಯನ್ನು 50 ವರ್ಷಗಳ ಕಾಲ ಅನುಭವಿಸಿದ್ದಾರೆ. ಸನ್ಮಾನ, ಅವಮಾನಕ್ಕೆ ಯತಿಗಳು ತಲೆ ಕೆಡಿಸಿಕೊಳ್ಳಬಾರದು. ಯಾರು ಏನೇ ಹೇಳಿದರೂ ನಾನು
ಹಿಂದೂ ಪರ ಸಂಘಟನೆಗಳ ಪರ ಇದ್ದೇನೆ ಎಂದು ಹೇಳಿದರು.

ಅವರ ಕರ್ಮಕಾಂಡಕ್ಕೆ ಪರ್ಮನೆಂಟ್‌ ಜಾಗ ತಿಹಾರ್‌ ಜೈಲು: ಡಿಕೆ ಶಿವಕುಮಾರ್‌ಗೆ ಅಶ್ವತ್ಥ್‌ ನಾರಾಯಣ ತಿರುಗೇಟು
ಪೇಟ ಬಿಟ್ಟು ಕಣ್ಣಿಗೆ ಗ್ಲಾಸ್ ಧರಿಸಿ ಚಾಮುಂಡಿ ದೇವಾಲಯ ಪ್ರವೇಶಿದ ರಿಷಿಕುಮಾರ ಸ್ವಾಮೀಜಿ ಚಾಮುಂಡೇಶ್ವರಿ ದರ್ಶನ ಪಡೆದರು. ಪೇಟ ತೊಡದಿದ್ದಕ್ಕೆ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿದ್ದಕ್ಕೆ ಸ್ಪಷ್ಟನೆ ನೀಡಿದ ರಿಷಿಕುಮಾರ ಸ್ವಾಮೀಜಿ, ಮೊನ್ನೆ ಮಸಿ ಬಳಿದಾಗ ಪೇಟ ಕಪ್ಪು ಬಣ್ಣವಾಗಿದೆ. ನಾನು ಪೇಟ ತರುವುದು ದಾವಣೆಗೆರೆಯಿಂದ. ಹಾಗಾಗಿ ಪೇಟ ಧರಿಸಿಲ್ಲ.ಕಣ್ಣಿಗೆ ಗಾಯವಾಗಿದೆ, ಹೀಗಾಗಿ ಗ್ಲಾಸ್ ಧರಿಸುತ್ತಿದ್ದೇನೆ. ಚಾಮುಂಡಮ್ಮನ ದರ್ಶನ ಪಡೆಯುವಾಗ ಗ್ಲಾಸ್ ತೆಗೆದಿದ್ದೆ ಎಂದು ಹೇಳಿದರು.

ಮತಾಂತರ ನಿಷೇಧ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿರುವುದು ಒಳ್ಳೇದು: ಪ್ರಮೋದ್ ಮುತಾಲಿಕ್
ಕೌಲಂದೆ ಪಾದಯಾತ್ರೆ ವಿಚಾರಕ್ಕೆ ಸ್ಪಷ್ಟನೆ!
ಮಿನಿ ಪಾಕಿಸ್ತಾನ ಅಂತ ಕೂಗಿದವರನ್ನ ಪೋಲಿಸರು ಬಂಧಿಸಿದ್ದಾರೆ. ಆತನ ಮೇಲೆ ದೇಶದ್ರೋಹದ ಕೇಸ್ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಹೀಗಾಗಿ ಪಾದಯಾತ್ರೆ ಕೈಬಿಟ್ಟಿದ್ದೇನೆ ಎಂದು ಕಾಳಿಸ್ವಾಮಿ ತಿಳಿಸಿದರು.

ಜ್ಞಾನವಾಪಿ ಮಸೀದಿ ಪ್ರಕರಣದ ತೀರ್ಪು ಕೊಟ್ಟ ನ್ಯಾಯಾಧೀಶರಿಗೆ ಜೀವಭಯ!
ಜಾಮೀಯ ಮಸೀದಿಯಲ್ಲಿ ಪೂಜೆಗೆ ಅವಕಾಶ
ಶ್ರೀರಂಗಪಟ್ಟಣದಲ್ಲಿರುವ ಜಾಮೀಯ ಮಸೀದಿ ಹಿಂದೂ ದೇಗುಲವಾಗಿದ್ದು, ಅಲ್ಲಿ ಪೂಜೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ರಿಷಿಕುಮಾರ (ಕಾಳಿ) ಸ್ವಾಮೀಜಿ ಒತ್ತಾಯಿಸಿದರು. ಹಿಂದೂ ದೇಗುಲದ ಮೇಲೆ ಮಸೀದಿ ನಿರ್ಮಿಸಿದ್ದಾರೆ. ಅಲ್ಲಿಆಂಜನೇಯ ದೇಗುಲ ಇರುವ ಕುರುಹುಗಳು ದೊರೆತಿವೆ. ಆದ್ದರಿಂದ ಮಸೀದಿಯಲ್ಲಿ ಪೂಜೆ, ರಾಮಾಯಣ ಪಠಿಸಲು ಅವಕಾಶ ನೀಡಬೇಕು,’’ ಎಂದು ಸರಕಾರವನ್ನು ಆಗ್ರಹಿಸಿದರು.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ