ಆ್ಯಪ್ನಗರ

ಟಿಪ್ಪು ಜಯಂತಿ ಆಚರಿಸುವವರಿಗೆ 10 ಸಾವಿರ ರೂ.: ಘೋಷಣೆ

ನಗರದಲ್ಲಿ ಸಂಘ, ಸಂಸ್ಥೆಗಳು ಟಿಪ್ಪು ಜಯಂತಿ ಕಾರ್ಯಕ್ರಮ ಆಯೋಜಿಸುವುದಕ್ಕೆ ಆಜ್ಜು ಬ್ರದರ್ಸ್‌ ವತಿಯಿಂದ 10ಸಾವಿರ ರೂ. ನೀಡುವುದಾಗಿ ಅಜೀದ್‌ ಉಲ್ಲಾ ಅಜ್ಜು ತಿಳಿಸಿದರು.

Vijaya Karnataka 9 Nov 2018, 9:20 pm
ಮೈಸೂರು: ನಗರದಲ್ಲಿ ಸಂಘ, ಸಂಸ್ಥೆಗಳು ಟಿಪ್ಪು ಜಯಂತಿ ಕಾರ್ಯಕ್ರಮ ಆಯೋಜಿಸುವುದಕ್ಕೆ ಆಜ್ಜು ಬ್ರದರ್ಸ್‌ ವತಿಯಿಂದ 10ಸಾವಿರ ರೂ. ನೀಡುವುದಾಗಿ ಅಜೀದ್‌ ಉಲ್ಲಾ ಅಜ್ಜು ತಿಳಿಸಿದರು.
Vijaya Karnataka Web rs 10000 for celebrating tippu jayanti
ಟಿಪ್ಪು ಜಯಂತಿ ಆಚರಿಸುವವರಿಗೆ 10 ಸಾವಿರ ರೂ.: ಘೋಷಣೆ


''ಟಿಪ್ಪು ಜಯಂತಿಯನ್ನು ಮಾಡಬೇಡಿ ಎಂದು ಹೇಳಲು ಬಿಜೆಪಿ ಅವರಿಗೆ ಯಾವ ಹಕ್ಕಿದೆ. ಬೇಕಿದ್ದರೆ ಅವರು ಆಚರಿಸಲಿ, ಇಲ್ಲವಾದರೆ ಬಿಡಲಿ. ಆಚರಣೆ ಮಾಡುವವರಿಗೆ ಏಕೆ ತೊಂದರೆಕೊಡಬೇಕು'' ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

''ಸಂಸದ ಪ್ರತಾಪ ಸಿಂಹ ಅವರು ಸಂಸದನ ಸ್ಥಾನವನ್ನು ಅರಿತು ನಡೆಯಬೇಕು. ಟಿಪ್ಪುವಿನ ಉತ್ತಮ ಕಾರ್ಯಗಳನ್ನು ಜಯಂತಿಯ ಮೂಲಕ ಸ್ಮರಿಸುವ ಕಾರ್ಯವಾಗಬೇಕು. ರಾಜ್ಯದಲ್ಲಿ ಮಾತ್ರವಲ್ಲದೇ, ದೇಶದ ಹಲವೆಡೆ ಟಿಪ್ಪು ಅಭಿಮಾನಿಗಳಿದ್ದಾರೆ. ಟಿಪ್ಪು ಆಳ್ವಿಕೆ ಸಂದರ್ಭ ನಾವು ಜನಿಸಿರಲಿಲ್ಲ. ಹಾಗಾಗಿ ಎಂದೋ ನಡೆದ ಘಟನೆಗಳನ್ನು ಇಟ್ಟುಕೊಂಡು ಹಗೆ ಸಾಧಿಸುವುದು ಸರಿಯಲ್ಲ'' ಎಂದರು.

''ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ಮಾಡಲು ತೀರ್ಮಾನಿಸಿದ್ದು, ಬಡ ಮಕ್ಕಳಿಗೆ ಪುಸ್ತಕ ವಿತರಣೆ, ಅನ್ನದಾನ, ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗುವುದು'' ಎಂದರು.

''ಟಿಪ್ಪು ಜಯಂತಿ ಕೇವಲ ಮುಸ್ಲಿಮರಿಗೆ ಸೀಮಿತವಾಗಿಲ್ಲ. ಪ್ರಚಾರಕ್ಕಾಗಿ ಹೇಳಿಕೆ ನೀಡುವ ಕಾರ್ಯವನ್ನು ಮಾಡಬಾರದು. ಟಿಪ್ಪುವಿನ ಕೊಡುಗೆಯನ್ನು ನೆನೆಯುವ ಕಾರ್ಯವಾಗಬೇಕು'' ಎಂದು ಹೇಳಿದರು. ಅಜರತ್‌ ಸೂಫಿ ಖಾನ್‌ ಅಜೀಮುಲ್ಲಾ ಶಾ, ಮೌಲಾನ ಕಲೀಮುಲ್ಲಾ, ರಿಯಾದ್‌ ಪಾಷ ಗೋಷ್ಠಿಯಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ