ಆ್ಯಪ್ನಗರ

ದಲಿತ ದೌರ್ಜನ್ಯ ಪ್ರಕರಣ: ಸಾ ರಾ ಎಂದು ಇರುವವರೆಲ್ಲ ನನ್ನ ಸಂಬಂಧಿಕರಾಗಲ್ಲ ಎಂದ ಸಾ.ರಾ. ಮಹೇಶ್

ಸಾಲಿಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದ ಗಲಾಟೆ ಮತ್ತು ದಲಿತ ದೌರ್ಜನ್ಯ ಪ್ರಕರಣ ಸಂಬಂಧ ಸಾ.ರಾ. ಮಹೇಶ್ ಅವರ ಸಹೋದರನ ಹೆಸರು ಥಳುಕು ಹಾಕಿಕೊಂಡಿದ್ದು ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.

Vijaya Karnataka Web 18 Dec 2019, 7:18 am
ಮೈಸೂರು: ಸಾಲಿಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದ ಗಲಾಟೆ ಮತ್ತು ದಲಿತ ದೌರ್ಜನ್ಯ ಪ್ರಕರಣ ಸಂಬಂಧ ಸಾ.ರಾ. ಮಹೇಶ್ ಸ್ಪಷ್ಟನೆ ನೀಡಿದ್ದಾರೆ.
Vijaya Karnataka Web sa ra mahesh


ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಅಂದು ನಡೆದ ಪ್ರಕರಣದಲ್ಲಿ ನನ್ನ ಸಂಬಂಧಿ ಎಂಬ ಒಬ್ಬರ ಹೆಸರು ಥಳುಕು ಹಾಕಿದೆ. ಹೆಸರಿನ ಹಿಂದೆ ಸಾ.ರಾ. ಇದ್ದವರೆಲ್ಲ ನನ್ನ ಸಹೋದರರಲ್ಲ. ನನ್ನ ಒಬ್ಬ ಸಹೋದರ ಜಿಪಂ‌ ಸದಸ್ಯ ಆಗಿದ್ದಾನೆ. ಈಗ ಪ್ರಕರಣದಲ್ಲಿ ಸಿಲುಕಿರುವ ಸಹೋದರ ಯಾರು ಎಂದು ಜನರಿಗೆ ಗೊತ್ತಿರಲಿಲ್ಲ. ಆದರೆ ಈಗ ಎಲ್ಲರಿಗೂ ಆತನ‌ ಬಗ್ಗೆ ಗೊತ್ತಾಗುವಂತೆ ಆಗಿದೆ.

ಇಡೀ ಪ್ರಕರಣವನ್ನು ವಿರೋಧ ಪಕ್ಷದ ಕೆಲವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಶಾಸಕ ಆಗುವುದಕ್ಕಿಂತಲೂ‌ ಮುಂಚಿನಿಂದ ಸಾಲಿಗ್ರಾಮದಲ್ಲಿ ಇಂತಹ ಘಟನೆಗಳು ನಡೆದಿವೆ. ಹಿಂದೆ ಗೋಲಿಬಾರ್ ಸಹ ಆಗಿದೆ ಆದರೆ ನನ್ನ ಹೆಸರು ಏಕೆ ಬಳಕೆಯಾಗುತ್ತಿದೆ ಎಂಬುದು ಗೊತ್ತಿಲ್ಲ. ಇನ್ನು ಪ್ರಕರಣ ಸಂಬಂಧ ಇನ್ನೂ ಯಾವುದೇ ಶಾಂತಿ ಸಭೆ ಏರ್ಪಟ್ಟಿಲ್ಲ ಎಂದು ತಿಳಿಸಿದರು.

ಸಾಲಿಗ್ರಾಮ ದೌರ್ಜನ್ಯ ಪ್ರಕರಣ: 7 ಮಂದಿ ಬಂಧನ

ಸಾಲಿಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದ ದಲಿತ ದೌರ್ಜನ್ಯ ಪ್ರಕರಣ ಇದಾಗಿದ್ದು, ಕೆ.ಆರ್. ನಗರ ಠಾಣೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದರು. ಪ್ರಕರಣದ ಆರೋಪಿ ಶಾಸಕ ಸಾ.ರಾ. ಮಹೇಶ್ ಅವರ ಸೋದರ ಸಾ.ರಾ. ರವೀಶ್ ಸೇರಿದಂತೆ 29 ಮಂದಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪ್ರಕರಣದ ತನಿಖಾಧಿಕಾರಿಯಾದ ಡಿವೈಎಸ್ಪಿ ಸುಂದರ್ ರಾಜು ಹೇಳಿದ್ದರು.

ಸಖಿ ಒನ್‌ ಸ್ಟಾಪ್‌ ಸೆಂಟರ್‌: ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಒಂದೇ ವೇದಿಕೆಯಲ್ಲಿ ನ್ಯಾಯ, ಚಿಕಿತ್ಸೆ, ಸಾಂತ್ವಾನ

ವಿಶ್ವನಾಥ್ ಬಗ್ಗೆ ಮೃಧು ಧೋರಣೆ :
ಪಕ್ಷದ ವಿಚಾರ ಕುರಿತು ಮಾತನಾಡಿ, ಸದ್ಯ ಯಾರು ಸಹ ಜೆಡಿಎಸ್‌ ಪಕ್ಷವನ್ನು ಬಿಟ್ಟು ಹೋಗುತ್ತಿಲ್ಲ. ಇದು‌ ಸತ್ಯಕ್ಕೆ‌ ದೂರವಾದ ವಿಚಾರ ಎಂದರು. ಚುನಾವಣೆ ನಂತರ ವಿಶ್ವನಾಥ್ ವಿರುದ್ಧ ದಾಖಲೆ ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರ ಕುರಿತು ಪ್ರತಿಕ್ರಿಯಿಸಿ , ಸದ್ಯ ವಿಶ್ವನಾಥ್ ಅವರೇ ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಅದೆಲ್ಲಾ ಬೇಡ, ಮುಂದೆ ನೋಡೋಣ‌ ಬಿಡಿ ಎಂದು ಅವರ ಬಗ್ಗೆ ಮೃಧು ಧೋರಣೆ ತಾಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ