ಆ್ಯಪ್ನಗರ

ಸೌಕರ‍್ಯವೇ ಇಲ್ಲದ ಸಬ್‌ರಿಜಿಸ್ಟ್ರಾರ್‌ ಕಚೇರಿ

ಕರ್ಪೂರವಳ್ಳಿ ಮಹದೇವ್‌ ಸಾಲಿಗ್ರಾಮ ಕೃಷ್ಣರಾಜನಗರ ತಾಲೂಕು ಮಿರ್ಲೆ ಉಪನೋಂದಣಾಧಿಕಾರಿ ಕಚೇರಿಯಲ್ಲಿಕನಿಷ್ಠ ಮೂಲಸೌಲಭ್ಯಗಳಿಲ್ಲದೆ ನಾನಾ ಕೆಲಸಗಳಿಗಾಗಿ ಆಗಮಿಸುವ ಸಾರ್ವಜನಿಕರು ...

Vijaya Karnataka 27 Oct 2019, 5:00 am
ಕರ್ಪೂರವಳ್ಳಿ ಮಹದೇವ್‌ ಸಾಲಿಗ್ರಾಮ
Vijaya Karnataka Web saligrama sub registrars office has no facilities
ಸೌಕರ‍್ಯವೇ ಇಲ್ಲದ ಸಬ್‌ರಿಜಿಸ್ಟ್ರಾರ್‌ ಕಚೇರಿ

ಕೃಷ್ಣರಾಜನಗರ ತಾಲೂಕು ಮಿರ್ಲೆ ಉಪನೋಂದಣಾಧಿಕಾರಿ ಕಚೇರಿಯಲ್ಲಿಕನಿಷ್ಠ ಮೂಲಸೌಲಭ್ಯಗಳಿಲ್ಲದೆ ನಾನಾ ಕೆಲಸಗಳಿಗಾಗಿ ಆಗಮಿಸುವ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಸರಕಾರಕ್ಕೆ ಹೆಚ್ಚು ಆದಾಯ ತಂದುಕೊಡುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಲು ಹಿಂದು ಮುಂದು ನೋಡುತ್ತಿದ್ದು, ಸಾರ್ವಜನಿಕರು ಕುಳಿತುಕೊಳ್ಳಲು ಆಸನ, ನೆರಳಿನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಶೌಚಾಲಯವಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಏಕೈಕ ಶೌಚಾಲಯವಿದ್ದರೂ ಬಳಸಲು ಯೋಗ್ಯವಿಲ್ಲದ ಕಾರಣ ಮಹಿಳೆಯರು ಸಾಕಷ್ಟು ಕಿರಿಕಿರಿ ಅನುಭವಿಸುವಂತಾಗಿದೆ.
ಹೆಚ್ಚು ಸಂಖ್ಯೆಯ ಜನರು ಆಗಮಿಸಿದಾಗ ಬಿಸಿಲು, ಮಳೆ ಲೆಕ್ಕಿಸದೆ ಇಡಿ ದಿನ ಕಾದು ಕೆಲಸ ಮಾಡಿಸಿಕೊಂಡು ತೆರಳಬೇಕು. ಕಚೇರಿ ಆವರಣದಲ್ಲಿಕುಳಿತುಕೊಳ್ಳಲಾಗಲಿ, ವಾಹನಗಳ ಪಾರ್ಕಿಂಗ್‌ಗಾಗಲಿ ಸಾಕಷ್ಟು ಸ್ಥಳವಕಾಶವಿಲ್ಲ. ಸಮಸ್ಯೆಗಳನ್ನು ಲೆಕ್ಕಿಸದೆ ಬಂದ ಕೆಲಸವಾದರೆ ಸಾಕೆನ್ನುವ ಅನಿವಾರ್ಯ ಪರಿಸ್ಥಿತಿ ಸಾರ್ವಜನಿಕರಿಗೆ ಎದುರಾಗಿದೆ. ಇನ್ನು ಕಚೇರಿ ಸುತ್ತಮುತ್ತ ಗಿಡಗಂಟಿ ಆಳೆತ್ತರಕ್ಕೆ ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿದ್ದರೂ ಅಲ್ಲಿನ ಸಿಬ್ಬಂದಿ ತಮಗೂ ಅದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಪಾರ್ಥೇನಿಯಂ ಕಳೆ ಹುಲುಸಾಗಿ ಬೆಳೆದಿದ್ದು,ಆಗಾಗ್ಗೆ ತೆರವು ಮಾಡಿ ಕಚೇರಿ ಸುತ್ತ ಶುಚಿತ್ವ ಕಾಪಾಡುವ ಕೆಲಸವೂ ಆಗಿಲ್ಲ.ಇಲ್ಲಿಜಡ್ಡುಗಟ್ಟಿರುವ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವ ಗೋಜಿಗೂ ಹೋಗಿಲ್ಲಎಂದು ಕಿಡಿಕಾರುತ್ತಾರೆ ಸಾರ್ವಜನಿಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ