ಆ್ಯಪ್ನಗರ

ಭಾಷೆ ಬಳಕೆ ಬಗ್ಗೆ ಸಿದ್ದರಾಮಯ್ಯ ನಿಗಾವಹಿಸಲಿ: ಎಚ್‌.ವಿಶ್ವನಾಥ್

ಜನರು ಜನಪ್ರತಿನಿಧಿಗಳು ಆಡುವ ಭಾಷೆಯನ್ನು ಕೂಡ ಗಮನಿಸುತ್ತಾರೆ. ಪ್ರತಿಪಕ್ಷ ನಾಯಕ ಛಾಯಾ ಮುಖ್ಯಮಂತ್ರಿ ಇದ್ದಂತೆ, ಸಿದ್ದರಾಮಯ್ಯ ತಾವು ಬಳಸುವ ಪದಗಳ ಮೇಲೆ ನಿಗಾವಹಿಸಬೇಕು ಎಂದು ಎಚ್‌.ವಿಶ್ವನಾಥ್ ಹೇಳಿದ್ದಾರೆ.

Vijaya Karnataka Web 19 Oct 2020, 12:32 pm
ಮೈಸೂರು: ಜವಾಬ್ದಾರಿಯುತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಾವು ಬಳಸುವ ಪದಗಳ ಮೇಲೆ ಎಚ್ಚರಿಕೆ ಇರಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.
Vijaya Karnataka Web h vishwanath


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜನರು ಜನಪ್ರತಿನಿಧಿಗಳು ಆಡುವ ಭಾಷೆಯನ್ನು ಕೂಡ ಗಮನಿಸುತ್ತಾರೆ. ಪ್ರತಿಪಕ್ಷ ನಾಯಕ ಛಾಯಾ ಮುಖ್ಯಮಂತ್ರಿ ಇದ್ದಂತೆ, ಆದರೆ ಅಂಥ ಪ್ರತಿ ಪಕ್ಷ ನಾಯಕ 'ಏ ನಿನಗೆ ಧಮ್‌ ಇದಿಯಾ, ಎಂಪಿಗಳಿಗೆ ಧಮ್‌ ಇದಿಯಾ' ಎಂದು ಹೇಳುವುದು ಭಾಷೆನಾ?, ಜವಾಬ್ದಾರಿಯುತ ಪ್ರತಿಪಕ್ಷ ನಾಯಕರಾಗಿ ಬಳಸುವ ಪದಗಳ ಮೇಲೆ ಎಚ್ಚರಿಕೆ ಇರಬೇಕು,'' ಎಂದು ವ್ಯಂಗವಾಡಿದರು. ''ಪ್ರತಿಪಕ್ಷಗಳು ಎಷ್ಟು ಬಲವಾಗಿರುತ್ತವೆಯೋ ಸರಕಾರವೂ ಅಷ್ಟೇ ಬಲವಾಗಿರುತ್ತವೆ,'' ಎಂದರು.

ಪ್ರವಾಹ ನಿರ್ವಹಣೆಯಲ್ಲಿಸರಕಾರ ವಿಫಲವಾಗಿದೆ, ಸಿಎಂ ರಾಜೀನಾಮೆ ನೀಡಲಿ ನಾನೇ ನಿರ್ವಹಿಸುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್‌, ''ಸಿದ್ದರಾಮಯ್ಯ ಸರಕಾರವನ್ನು ಚೆನ್ನಾಗಿ ನಿರ್ವಹಿಸಿದ್ದರೆ, ಸರಕಾರ ಏಕೆ ಬೀಳುತ್ತಿತ್ತು. ಸರಿಯಾಗಿ ನಿರ್ವಹಿಸಿದ್ದರೆ ಸ್ವತಃ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಕೆ ಸೋಲುತ್ತಿದ್ದರು,'' ಎಂದು ಟಾಂಗ್‌ ನೀಡಿದರು.

ಯುಕೆ ಜನರ ಕಷ್ಟಕ್ಕೆ ಸರಕಾರ ಶೀಘ್ರ ಸ್ಪಂದಿಸಲಿ:
''ಉತ್ತರ ಕರ್ನಾಟಕದ ಜನರು ಶ್ರಮಜೀವಿಗಳು. ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಎಲ್ಲಾಮಂತ್ರಿಗಳು ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಜನರಿಗೆ ನೆರವಾಗಲಿ. ಇತರೆ ಅಧಿಕಾರಿಗಳನ್ನು ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಕ್ಕೆ ನಿಯೋಜಿಸಲಿ. ಸರಕಾರವು ತಕ್ಷಣದಿಂದಲೇ ಕಾರ‍್ಯ ಪ್ರವೃತ್ತರಾಗಲಿ,'' ಎಂದು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ