ಆ್ಯಪ್ನಗರ

ಸಿದ್ದರಾಮಯ್ಯ ಕುರುಬ ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ: ವಿಶ್ವನಾಥ್ ಕಿಡಿ ನುಡಿ..

'ನಮ್ಮ ಸಮಾಜಕ್ಕೆ ಮೀಸಲಾತಿ ಸಿಗುವ ವಿಚಾರವಾಗಿ ನಾವೆಲ್ಲರೂ ಒಗ್ಗೂಡಬೇಕು. ಸಂಘಟನೆಯ ಒಗ್ಗಟ್ಟಿನಿಂದ ಮೀಸಲಾತಿ ಸಿಗುತ್ತದೆ. ಇದಕ್ಕೆ ನಮ್ಮ ಸಮುದಾಯದ ಮುಖಂಡರು, ರಾಜಕಾರಣಗಳ ಸಹಭಾಗಿತ್ವ ಬಹುಮುಖ್ಯ' - ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್..

Lipi 21 Jan 2021, 1:17 pm
ಮೈಸೂರು: ಕುರುಬರ ಎಸ್‌ಟಿ ಹೋರಾಟದ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ, ಗೊಂದಲ ಉಂಟುಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.
Vijaya Karnataka Web siddaramaiah misleading kuruba community mlc h vishwanath
ಸಿದ್ದರಾಮಯ್ಯ ಕುರುಬ ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ: ವಿಶ್ವನಾಥ್ ಕಿಡಿ ನುಡಿ..


ರಾಜ್ಯ ಕುರುಬರ ಎಸ್. ಟಿ. ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೋರಾಟದ ವಿಚಾರದಲ್ಲಿ ಸಮುದಾಯದ ಜನರು ಸಿದ್ದರಾಮಯ್ಯ ಮಾತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು. ವದಂತಿಗಳಿಗೆ ಬಲಿಯಾಗಬಾರದು ಎಂದು ಕೇಳಿಕೊಂಡರು.

ಸಿದ್ದರಾಮಯ್ಯ ಅವರು ಕುರುಬ ಸಮುದಾಯವರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದ ವಿಶ್ವನಾಥ್, ಸಿಎಂ ಆಗಿದ್ದ ವೇಳೆ ಸಿದ್ದರಾಮಯ್ಯನವರು ತಮ್ಮ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮುದಾಯದ ಮುಖಂಡರಿಗೆ ಸ್ಥಾನ ಕೊಡಲಿಲ್ಲ ಎಂದು ಕಿಡಿಕಾರಿದರು. ನಮ್ಮ ಸ್ವಾಮೀಜಿಗಳ ಪಟ್ಟಾಭಿಷೇಕದಲ್ಲೂ ಸಿದ್ದರಾಮಯ್ಯ ಭಾಗವಹಿಸಲಿಲ್ಲ, ಮಠದ ಬೆಳವಣಿಗೆಗೆ ಹತ್ತು ಪೈಸೆ ಕೊಡುಗೆಯನ್ನೂ ಕೊಟ್ಟಿಲ್ಲ, ಹೀಗಾಗಿ ಮಾತನಾಡುವ ಹಕ್ಕು ಅವರಗಿಲ್ಲ ಎಂದರು.

ಕುರುಬ ಸಮಾಜ ನಿಮ್ಮನ್ನು ಬಹಿಷ್ಕಾರ ಮಾಡಬೇಕಾಗುತ್ತೆ ಹುಷಾರ್..! ಸಿದ್ದುಗೆ ಹಳ್ಳಿ ಹಕ್ಕಿ ವಾರ್ನಿಂಗ್..!
ನಮ್ಮ ಸಮಾಜಕ್ಕೆ ಮೀಸಲಾತಿ ಸಿಗುವ ವಿಚಾರವಾಗಿ ನಾವೆಲ್ಲರೂ ಒಗ್ಗೂಡಬೇಕು. ಸಂಘಟನೆಯ ಒಗ್ಗಟ್ಟಿನಿಂದ ಮೀಸಲಾತಿ ಸಿಗುತ್ತದೆ. ಇದಕ್ಕೆ ನಮ್ಮ ಸಮುದಾಯದ ಮುಖಂಡರು, ರಾಜಕಾರಣಗಳ ಸಹಭಾಗಿತ್ವ ಬಹುಮುಖ್ಯ. ಈ ನಿಟ್ಟಿನಲ್ಲಿ ಪಾದಯಾತ್ರೆಯಲ್ಲಿ ಎಲ್ಲರೂ ಭಾಗಿಯಾಗೋಣ ಎಂದು ವಿಶ್ವನಾಥ್ ಮನವಿ ಮಾಡಿದರು.

ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದರೋ ದೇವರಿಗೆ ಗೊತ್ತು: ಕೆಎಸ್‌ ಈಶ್ವರಪ್ಪ ವ್ಯಂಗ್ಯ
ಇನ್ನು ಫೆಬ್ರವರಿ 3ರಂದು ನೆಲಮಂಗಲದಿಂದ ಆರಂಭವಾಗುವ ಪಾದಯಾತ್ರೆಗೆ 1 ಸಾವಿರ ಮಂದಿ ಹಾಗೂ ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ 15 ರಿಂದ 20 ಸಾವಿರ ಮಂದಿ ಮೈಸೂರು ಭಾಗದಿಂದ ಭಾಗವಹಿಸಬೇಕು ಎಂದು ಸಭೆಯಲ್ಲಿ ನಿರ್ಧಾರ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ