ಆ್ಯಪ್ನಗರ

ಪ್ರಯಾಣಿಕರೇ ಗಮನಿಸಿ..! ಮೈಸೂರಿನಿಂದ ಮತ್ತೆ ರೈಲುಗಳು ಆರಂಭ | ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಕೊರೊನೋತ್ತರ ಜೀವನ ಹಂತ-ಹಂತವಾಗಿ ಸಾಮಾನ್ಯ ರೂಪಕ್ಕೆ ಮರಳುತ್ತಿದೆ. ಹೌದು, ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ರೈಲುಗಳು ಮೈಸೂರಿನಿಂದ ಮತ್ತೆ ಪ್ರಾರಂಭವಾಗುತ್ತಿವೆ. ಕಾಯ್ದಿರಿಸದ ಹಾಗೂ ಕಾಯ್ದಿರಿಸಿದ ಎಕ್ಸ್‌ಪ್ರೆಸ್‌ ರೈಲುಗಳು ಸೋಮವಾರದಿಂದ ಕಾರ್ಯಾರಂಭಿಸಿವೆ.

Vijaya Karnataka Web 7 Dec 2020, 4:03 pm
ಮೈಸೂರು: ಕೊರೊನಾ ವೈರಸ್‌ ಲಾಕ್‌ಡೌನ್ ಹಿನ್ನೆಲೆ ಸ್ಥಗಿತಗೊಂಡಿದ್ದ ಹಲವು ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ಮೈಸೂರು ವಿಭಾಗ ಮರು ಪ್ರಾರಂಭಿಸಿದೆ. ಕಾಯ್ದಿರಿಸದ ಹಾಗೂ ಕಾಯ್ದಿರಿಸಿದ ಪ್ರಯಾಣಿಕರ ಎಕ್ಸ್‌ಪ್ರೆಸ್ ರೈಲುಗಳು ಸಾಮಾನ್ಯ ದರದೊಂದಿಗೆ ಸೋಮವಾರದಿಂದ ಕಾರ್ಯಾರಂಭಿಸಿವೆ.
Vijaya Karnataka Web train
ಸಾಂದರ್ಭಿಕ ಚಿತ್ರ


ಕೊರೊನಾ ವೈರಸ್‌ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಾ.25ರಿಂದ ರೈಲು ಸೇವೆಗಳನ್ನು ರದ್ದುಗೊಳಿಸಿದ ನಂತರ ಮೈಸೂರು ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಎಂದಿನಂತೆ ರೈಲುಗಳು ಸಂಚರಿಸಲಿವೆ. ಈ ರೈಲುಗಳ ಬೇಡಿಕೆ ಅವಲಂಬಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲುಗಳ ಸಂಚಾರ ಪ್ರಾರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯಾಣಿಕರಲ್ಲಿ ರೈಲ್ವೆ ಇಲಾಖೆ ಮನವಿ ಮಾಡಿದೆ. ಅಲ್ಲದೇ ರೈಲು ಸೇವೆ ಆರಂಭದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮೈಸೂರು ರೈಲು ನಿಲ್ದಾಣವನ್ನು ಶುಚಿಗೊಳಿಸಿ ಸ್ಯಾನಿಟೈಸ್ ಮಾಡಲಾಗಿದೆ.

ಮೈಸೂರು ರೈಲ್ವೆ ವ್ಯಾಪಾರ ಅಭಿವೃದ್ಧಿ ಘಟಕಕ್ಕೆ ಒಂದೇ ತಿಂಗಳಲ್ಲಿ 45 ಲಕ್ಷ ರೂ. ಆದಾಯ..!

ರೈಲುಗಳ ವಿವರ:
* ಟಿಪ್ಪು ಎಕ್ಸ್‌ಪ್ರೆಸ್: ಮೈಸೂರು - ಬೆಂಗಳೂರು: ಬೆಳಗ್ಗೆ 11.30ಕ್ಕೆ
* ಟಿಪ್ಪು ಎಕ್ಸ್‌ಪ್ರೆಸ್: ಬೆಂಗಳೂರು - ಮೈಸೂರು: ಮಧ್ಯಾಹ್ನ 3.15ಕ್ಕೆ
* ಬಸವ ಎಕ್ಸ್‌ಪ್ರೆಸ್: ಮೈಸೂರು - ಬಾಗಲಕೋಟೆ: ಮಧ್ಯಾಹ್ನ 1.30ಕ್ಕೆ
* ಬಸವ ಎಕ್ಸ್‌ಪ್ರೆಸ್: ಬಾಗಲಕೋಟೆ - ಮೈಸೂರು: ಮಧ್ಯಾಹ್ನ 1.50ಕ್ಕೆ
* ತಿರುಪತಿ ಎಕ್ಸ್‌ಪ್ರೆಸ್: ಚಾಮರಾಜ ನಗರ - ಮೈಸೂರು: ಮಧ್ಯಾಹ್ನ 3.10ಕ್ಕೆ
* ತಿರುಪತಿ ಎಕ್ಸ್‌ಪ್ರೆಸ್: ಮೈಸೂರು - ಚಾಮರಾಜ ನಗರ: ಬೆಳಗ್ಗೆ 10.30ಕ್ಕೆ
* ತಿರುಪತಿ ಎಕ್ಸ್‌ಪ್ರೆಸ್: ಮೈಸೂರು - ಬೆಂಗಳೂರು: ಸಂಜೆ 5.10ಕ್ಕೆ
* ತಿರುಪತಿ ಎಕ್ಸ್‌ಪ್ರೆಸ್: ಬೆಂಗಳೂರು - ಮೈಸೂರು: ಬೆಳಗ್ಗೆ 6.55ಕ್ಕೆ
* ತಾಳಗುಪ್ಪ ಎಕ್ಸ್‌ಪ್ರೆಸ್: ಮೈಸೂರು - ಬೆಂಗಳೂರು: ಸಂಜೆ 7.30ಕ್ಕೆ
* ತಾಳಗುಪ್ಪ ಎಕ್ಸ್‌ಪ್ರೆಸ್: ಬೆಂಗಳೂರು - ಮೈಸೂರು: ಬೆಳಗ್ಗೆ 4.30ಕ್ಕೆ

ಚುನಾವಣೆಯಲ್ಲಿ ಹಣ ಪಡೆದಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ: ಸಿದ್ದುಗೆ ಜಿಟಿಡಿ ಸವಾಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ