ಆ್ಯಪ್ನಗರ

ಮಹಾರಾಜ ಕಾಲೇಜಿನಲ್ಲಿ ‘ಶ್ರೀ ರಾಮಾಯಣ ದರ್ಶನಂ ಓದು’

ರಾಮಾಯಣದಲ್ಲಿ ಬದುಕಿನ ಸಾರ, ಪರಿವರ್ತನೆಯ ಅಂಶಗಳಿವೆ ಎಂದು ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ಅವರು ಅಭಿಪ್ರಾಯಪಟ್ಟರು.

Vijaya Karnataka 11 Jan 2019, 5:00 am
ಮೈಸೂರು: ರಾಮಾಯಣದಲ್ಲಿ ಬದುಕಿನ ಸಾರ, ಪರಿವರ್ತನೆಯ ಅಂಶಗಳಿವೆ ಎಂದು ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ಅವರು ಅಭಿಪ್ರಾಯಪಟ್ಟರು.
Vijaya Karnataka Web sri ramayana darshanam read at maharajas college
ಮಹಾರಾಜ ಕಾಲೇಜಿನಲ್ಲಿ ‘ಶ್ರೀ ರಾಮಾಯಣ ದರ್ಶನಂ ಓದು’


ನಗರದ ಮಹಾರಾಜ ಕಾಲೇಜಿನ ಜ್ಯೂನಿಯರ್‌ ಬಿಎ ಹಾಲ್‌ನಲ್ಲಿ ಮಹಾಕವಿ ಕುವೆಂಪು ಅವರ ಮಹಾಕಾವ್ಯ 'ಶ್ರೀರಾಮಾಯಣ ದರ್ಶನಂ' ಕಾವ್ಯದ ಭಾಷಾ ಸೊಗಸು, ಒಳನೋಟಗಳು ಮತ್ತು ವಿವಿಧ ಸಂಸ್ಕೃತಿಗಳ ಮುಖಾ ಮುಖಿಯನ್ನು ಪರಿಚಯಿಸಲು 'ಶ್ರೀ ರಾಮಾಯಣ ದರ್ಶನಂ ಓದು' ಎಂಬ ವಿನೂತನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಯುವರಂಗ ನಿರ್ದೇಶಕ ಎಂ.ಗಣೇಶ್‌ ಉಡುಪಿ ಅವರು ವಾಚನಾಭಿಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕಲಿಯುಗದಿಂದ ತ್ರೇತ್ರಾಯುಗಕ್ಕೆ ನಮ್ಮನ್ನೆಲ್ಲಾ ಕರೆದುಕೊಂಡು ಹೋದ ಬಗೆಯನ್ನು ಶ್ಲಾಘಿಸಿದರು.

''ಮಹಾರಾಜ ಕಾಲೇಜಿನ ಜ್ಯೂನಿಯರ್‌ ಬಿಎ ಹಾಲ್‌ ಹಾಗೂ ಸೀನಿಯರ್‌ ಬಿಎ ಹಾಲ್‌ಗಳಲ್ಲಿ ಹಲವು ನೆನಪುಗಳಿವೆ. ರಾಷ್ಟ್ರಕವಿ ಕುವೆಂಪು ಅವರು ಎಷ್ಟೋ ದಶಕಗಳ ಕಾಲ ಇಲ್ಲಿ ಪಾಠ ಮಾಡಿದ್ದಾರೆ. ಹಾಗಾಗಿ ಇದು ಸಾಮಾನ್ಯ ಬೆಂಚಲ್ಲ. ಇಲ್ಲಿಂದ ಓದು ಕಲಿತು ಎಷ್ಟೋ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ನಾನು ಕಾಲೇಜು ಓದುವಾಗ ಜಿ.ಪಿ.ರಾಜರತ್ನಂ ಅವರು ಬುದ್ಧನ ಕತೆಗಳ ಕುರಿತು ಇದೇ ರೂಮಿನಲ್ಲಿ ಉಪನ್ಯಾಸ ನೀಡಿದ್ದರು,'' ಎಂದು ತಮ್ಮ ಹಳೆ ದಿನಗಳನ್ನು ಮೆಲುಕು ಹಾಕಿದರು.

ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸದಾ ಪ್ರಶ್ನೆ ಮಾಡುವ ಮನೋಭಾವ ಇರಬೇಕು. ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಜ್ಞಾನ ಬೆಳೆಯುತ್ತದೆ. ವಿಜ್ಞಾನಿ ನ್ಯೂಟನ್‌ ಈ ರೀತಿ ಹುಡುಕುತ್ತ ಹೋದಾಗಲೇ ಗುರುತ್ವಾಕರ್ಷಣೆ ನಿಯಮದ ಬಗ್ಗೆ ಸಂಶೋಧನೆ ಮಾಡಿದ್ದು. ಜ್ಞಾನ' ಎಂಬುದು ಪ್ರಶ್ನೆಯಿಂದ ಆಶ್ಚರ್ಯ, ಆಶ್ಚರ್ಯದಿಂದ ಪ್ರಶ್ನೆಯ ಮಧ್ಯೆ ನಡೆಯುತ್ತದೆ,'' ಎಂದು ತಿಳಿಸಿದರು. ಇದಕ್ಕೂ ಮುನ್ನ ಯುವರಂಗ ನಿರ್ದೇಶಕ ಎಂ.ಗಣೇಶ್‌ ಉಡುಪಿ ಅವರು 'ಶ್ರೀರಾಮಾಯಣ ದರ್ಶನಂ' ಮಹಾಕಾವ್ಯವನ್ನು ವಾಚನಾಭಿನಯ ಮಾಡಿ ನೆರೆದಿದ್ದ ವಿದ್ಯಾರ್ಥಿಗಳ ಚಪ್ಪಾಳೆಗೆ ಪಾತ್ರರಾದರು.

ಲೇಖಕಿ ಡಾ.ಎಚ್‌.ಆರ್‌.ಸುಜಾತ, ಕನ್ನಡ ಸಂಘದ ಸಂಚಾಲಕಿ ಡಾ.ಡಿ.ವಿಜಯಲಕ್ಷ್ಮಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ವಿಶ್ವನಾಥ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ