ಆ್ಯಪ್ನಗರ

ಮೈಸೂರಿನಿಂದ ಕಲಬುರ್ಗಿಗೆ ವಿಮಾನಯಾನ ಆರಂಭ

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಹಾರಾಟ ಆರಂಭವಾಗಿದೆ. ಬೆಂಗೂರು-ಕಲಬುರ್ಗಿ-ಹೈದರಾಬಾದ್‌ಗೆ ಶುಕ್ರವಾರ ಬೆಳಗ್ಗೆ ಏರ್‌-72 ಏರ್‌ ಇಂಡಿಯಾ ಅಲಯನ್ಸ್‌ ವಿಮಾನ ಪ್ರಯಾಣ ಆರಂಭಿಸಿತು.

Vijaya Karnataka 28 Dec 2019, 5:00 am
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಹಾರಾಟ ಆರಂಭವಾಗಿದೆ. ಬೆಂಗೂರು-ಕಲಬುರ್ಗಿ-ಹೈದರಾಬಾದ್‌ಗೆ ಶುಕ್ರವಾರ ಬೆಳಗ್ಗೆ ಏರ್‌-72 ಏರ್‌ ಇಂಡಿಯಾ ಅಲಯನ್ಸ್‌ ವಿಮಾನ ಪ್ರಯಾಣ ಆರಂಭಿಸಿತು.
Vijaya Karnataka Web flight


ಮೈಸೂರಿನಿಂದ 28 ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಿದರು. ಮೊದಲ ಪ್ರಯಾಣದಲ್ಲಿಯೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಆರ್‌.ಮಂಜುನಾಥ್‌ ಅವರು ತಿಳಿಸಿದ್ದಾರೆ.

ಇದೇ ವಿಮಾನ ಈ ಹಿಂದೆ ಮೈಸೂರು-ಕೊಚ್ಚಿ ನಡುವೆ ಪ್ರಯಾಣಿಸುತ್ತಿತ್ತು. ಕೊಚ್ಚಿ ವಿಮಾನ ನಿಲ್ದಾಣದಲ್ಲಿರೀ ಕಾರ್ಪೆಟಿಂಗ್‌ ಕಾಮಗಾರಿ ನಡೆಯುತ್ತಿದ್ದು, ಮೈಸೂರು ಸೇರಿದಂತೆ ಕೆಲವು ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಹಾರಾಟವನ್ನು 2020ರ ಮಾರ್ಚ್ ತನಕ ರದ್ದುಪಡಿಸಲಾಗಿದೆ. ಪರಿಣಾಮ, ಇದೇ ವಿಮಾನ ಮೈಸೂರು-ಕೊಚ್ಚಿಯ ಬದಲಿಗೆ ಮೈಸೂರು-ಕಲಬುರ್ಗಿ ನಡುವೆ ಪ್ರಯಾಣ ಆರಂಭಿಸಿದೆ. ಈಗಾಗಲೇ ಮೈಸೂರಿನಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್‌ ಹಾಗೂ ಗೋವಾಕ್ಕೆ ನೇರ ವಿಮಾನ ಸಂಪರ್ಕವಿದೆ. ಇದೀಗ ಮತ್ತೊಂದು ಸೇವೆ ಸೇರ್ಪಡೆಯಾಗಿದೆ.

ಮೈಸೂರಿನಿಂದ ಕಲಬುರ್ಗಿಗೆ ವಿಮಾನ ಬೆಳಗ್ಗೆ 8.30ಕ್ಕೆ ಹೊರಡಬೇಕಿತ್ತು. ಆದರೆ, ಮೊದಲ ದಿನದ ತಯಾರಿ ಪ್ರಕ್ರಿಯೆಯಿಂದಾಗಿ ಬೆಳಗ್ಗೆ 9 ಗಂಟೆಗೆ ತೆರಳಿತು. 70 ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಇರುವ ವಿಮಾನ ಉಡಾನ್‌ ಯೋಜನೆಯಡಿಯಲ್ಲಿಕಾರ್ಯನಿರ್ವಹಿಸುತ್ತಿದೆ. ಮಂಗಳವಾರ ಹೊರತುಪಡಿಸಿದಂತೆ ಈ ವಿಮಾನ ಬೆಳಗ್ಗೆ 8.30ಕ್ಕೆ ಮೈಸೂರಿನಿಂದ ಹೊರಟು 9.10ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ 9.50ಕ್ಕೆ ಹೊರಟು ಕಲಬುರ್ಗಿಗೆ 11.25ಕ್ಕೆ ತಲುಪಲಿದೆ.

ಕಲಬುರ್ಗಿಯಿಂದ ಬೆಳಗ್ಗೆ 11.50ಕ್ಕೆ ಹೊರಟು 1.30ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಟು 2.50ಕ್ಕೆ ಮೈಸೂರು ತಲುಪಲಿದೆ.

ಮಂಗಳವಾರ ಮೈಸೂರಿನಿಂದ ಬೆಳಗ್ಗೆ 10.25ಕ್ಕೆ ಹೊರಟು ಬೆಂಗಳೂರಿಗೆ 11.05ಕ್ಕೆ ಆಗಮಿಸಲಿದೆ. ಅಲ್ಲಿಂದ 11.40ಕ್ಕೆ ಹೊರಟು 1.20ಕ್ಕೆ ಕಲಬುರ್ಗಿಯಲ್ಲಿಇಳಿಯಲಿದೆ. ಕಲಬುರ್ಗಿಯಿಂದ 1.45ಕ್ಕೆ ಹೊರಟು ಬೆಂಗಳೂರಿಗೆ 3.25ಕ್ಕೆ ತಲುಪಲಿದೆ. ಅಲ್ಲಿಂದ 3.45ಕ್ಕೆ ಹೊರಟು ಮೈಸೂರಿಗೆ 4.40ಕ್ಕೆ ಆಗಮಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ