ಆ್ಯಪ್ನಗರ

ಅತಿಯಾದ ಮಳೆ: ಕುಂಠಿತ ತಂಬಾಕು ಬೆಳೆ

ತಾಲೂಕಿನಲ್ಲಿ ಅತಿಯಾದ ಮಳೆಯಿಂದ ತಂಬಾಕು ಬೆಳೆ ಬೆಳವಣಿಗೆಯಲ್ಲಿ ಕುಂಠಿತವಾಗಿದ್ದು ಈ ಬಾರಿ ರೈತರು ನಷ್ಟ ಅನುಭವಿಸುವಂತಾಗಿದೆ.

Vijaya Karnataka 9 Jul 2018, 5:00 am
ಪಿರಿಯಾಪಟ್ಟಣ : ತಾಲೂಕಿನಲ್ಲಿ ಅತಿಯಾದ ಮಳೆಯಿಂದ ತಂಬಾಕು ಬೆಳೆ ಬೆಳವಣಿಗೆಯಲ್ಲಿ ಕುಂಠಿತವಾಗಿದ್ದು ಈ ಬಾರಿ ರೈತರು ನಷ್ಟ ಅನುಭವಿಸುವಂತಾಗಿದೆ.
Vijaya Karnataka Web stubborn tobacco crop
ಅತಿಯಾದ ಮಳೆ: ಕುಂಠಿತ ತಂಬಾಕು ಬೆಳೆ


ಪಿರಿಯಾಪಟ್ಟಣ ತಾಲೂಕಿನ ರೈತರದ್ದು ತಂಬಾಕು ಬೆಳೆಯೊಂದಿಗೆ ಜೂಜಾಟ ಎಂದರೆ ತಪ್ಪಾಗಲಾರದು. ವಾಣಿಜ್ಯ ಬೆಳೆಯಾದ ತಂಬಾಕು ಹಿಂದಿನ ವರ್ಷ ಅನಾವೃಷ್ಟಿಗೆ ತುತ್ತಾಗಿದ್ದರೆ ಈ ಬಾರಿ ಅತಿವೃಷ್ಟಿಗೆ ತುತ್ತಾಗಿದ್ದು ರೈತರು ತೊಂದರೆಗೆ ಒಳಗಾಗಿದ್ದಾರೆ. ಜೂನ್‌ನಲ್ಲಿ ಆರಂಭವಾದ ಮಳೆ ಜುಲೈ ಅಂತ್ಯದವರೆಗೆ ಕೈಕೊಟ್ಟಿತ್ತು. ಇದರಿಂದ ರೈತರು ಕಂಗಾಲಾಗಿ ಜಮೀನುಗಳಲ್ಲಿಯೆ ಬೆಳವಣಿಗೆ ಕಾಣದೆ ಎಲೆಗಳು ಸಣ್ಣ ಗಿಡದಲ್ಲಿಯೆ ಹಣ್ಣಾಗ ತೊಡಗಿದ್ದವು. ಈಗ ಜುಲೈ ತಿಂಗಳಿನಲ್ಲಿ ಕೂಡ ಎಡೆ ಬಿಡದೆ ಮಳೆ ಸುರಿಯುತ್ತಿದ್ದು ಸ್ವಲ್ಪ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಹೆಚ್ಚಾದ ಮಳೆ
: ಜೂನ್‌ ಆರಂಭದಲ್ಲಿಯೆ ಅತಿ ಹೆಚ್ಚು ಮಳೆ ಸುರಿದು ಪೂರ್ವ ಮುಂಗಾರು ಉತ್ತಮವಾದ ಮಳೆಯಾಯಿತು. ಜುಲೈ ತಿಂಗಳ ಅಂತ್ಯದ ವೇಳೆಗೆ ಒಟ್ಟು 466.80 ಮಿ.ಮೀ. ಮಳೆಯಾಗಬೇಕು. ಆದರೆ ಜುಲೈ ಆರಂಭದಲ್ಲಿಯೆ 559.71 ಮಿ.ಮೀ. ಮಳೆಯಾಗಿರುವುದು ಅತಿಯಾದ ಮಳೆಯಾಗಿದೆ. ಕಾಡು ಭಾಗದ ಜಮೀನುಗಳಲ್ಲಿ ತಂಬಾಕು ಗಿಡಗಳು ಬೆಳವಣಿಗೆ ಕಂಡಿಲ್ಲ್ಲ ಇದು ಹೊರತು ಪಡಿಸಿದರೆ ರಾವಂದೂರು ಬೆಟ್ಟದಪುರ ಗ್ರಾಮದ ಅಲ್ಪಸ್ವಲ್ಪ ಭಾಗ ಉತ್ತಮವಾಗಿದೆ.

ತಂಬಾಕು ಮಂಡಳಿ 101 ಮಿಲಿಯನ್‌ ಕೆ.ಜಿ. ನಿಗದಿ ಮಾಡಿದೆ. ಆದರೆ ಈ ವಾತಾವರಣ ಗಮನಿಸಿದರೆ 80-85 ಮಿಲಿಯನ್‌ ಕೆ.ಜಿ.ತಂಬಾಕು ಬೆಳೆಯಬಹುದು ಎಂದು ಅಂದಾಜಿಸಲಾಗಿದೆ. ಶೇ. 15ರಿಂದ 20 ಮಿಲಿಯನ್‌ ಕೆ.ಜಿ ತಂಬಾಕು ನಷ್ಟವಾಗಬಹುದು ಎಂದು ಹೇಳಲಾಗುತ್ತಿದೆ. ಈ ಹಿಂದಿನ ವರ್ಷ ಪ್ರತಿ ಹೆಕ್ಟೇರ್‌ಗೆ 1250 ತಂಬಾಕು ಬೆಳೆದಿದ್ದು ಈ ಬಾರಿ 1100 ಕೆ.ಜಿ ಉತ್ಪಾದನೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಇಳುವರಿ , ಗ್ರೇಡ್‌ ಇಲ್ಲ : ಹವಮಾನ ವೈಪರೀತ್ಯದಿಂದ ನಾಟಿ ಮಾಡಿದ ದಿನದಿಂದಲೂ ಇಂದಿನವರೆಗೆ ಮಳೆ ಎಡೆ ಬಿಡದೆ ಸುರಿಯುತ್ತಿರುವುದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಪ್ಪು ಮಣ್ಣಿನಲ್ಲಿ ಬೆಳೆದ ಬೆಳೆಗಳಲ್ಲಿ ಹದಗೊಳಿಸಿದ ನಂತರ ಉತ್ತಮವಾದ ಗ್ರೇಡ್‌ ಉತ್ಪಾದನೆಯಾಗುತ್ತಿಲ್ಲ್ಲ. ಮರಳು ಭೂಮಿಯಲ್ಲಿ ಶೀತ ಹೆಚ್ಚಾಗಿ ನೀಡಿದ ಮೇಲು ಗೊಬ್ಬರ ಮಳೆಗೆ ಕೊಚ್ಚಿಹೋಗಿ ಇಳುವರಿ ಕಡಿಮೆಯಾಗಿದೆ.

ಗಗನಕ್ಕೇರಿದ ಸೌದೆ : ತಂಬಾಕು ಎಲೆಗಳನ್ನು ಹದಮಾಡಲು ಉರುವಲಾಗಿ ಮರವನ್ನು ಬಳಸುವುದು ಹೆಚ್ಚಾಗಿದೆ. ಸರಕಾರಿ ಮಾರಾಟ ಮಳಿಗೆಯಲ್ಲಿ ನೀಲಗಿರಿ ಸೌಧೆ ಟನ್‌ಗೆ 3600 ರೂ. ನೀಡಲಾಗುತ್ತಿದ್ದು ಖಾಸಗಿಯಲ್ಲಿ 4200 ರಿಂದ 4800 ರವರೆಗೆ ಮಾರಾಟ ಮಾಡಲಾಗುತ್ತಿದೆ. ಇದು ಉತ್ಪಾದನಾ ವೆಚ್ಚದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ.

ಕಳೆದ ವರ್ಷ ಸರಿಯಾದ ಮಳೆ ಬೀಳದೆ ನಷ್ಟ ಅನುಭವಿಸಿದರೆ ಈ ಬಾರಿ ಅತಿಯಾದ ಮಳೆಯಿಂದ ರೈತರು ಹೆಚ್ಚು ನಷ್ಟ ಅನುಭವಿಸುವಂತೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ