ಆ್ಯಪ್ನಗರ

ಅಧ್ಯಾತ್ಮ ಎಂಬ ಸಮುದ್ರದಲ್ಲಿ ಈಜಬೇಕು: ಸ್ವಾಮೀಜಿ

ಅಧ್ಯಾತ್ಮ ಎಂಬುದು ಸಮುದ್ರದಂತೆ, ಅದರಲ್ಲಿ ನಿರಂತರವಾಗಿ ಈಜುತ್ತಿರಬೇಕು ಎಂದು ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

Vijaya Karnataka 20 Aug 2019, 5:00 am
ಮೈಸೂರು: ಅಧ್ಯಾತ್ಮ ಎಂಬುದು ಸಮುದ್ರದಂತೆ, ಅದರಲ್ಲಿ ನಿರಂತರವಾಗಿ ಈಜುತ್ತಿರಬೇಕು ಎಂದು ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
Vijaya Karnataka Web swimming in the sea called the spiritual swamiji
ಅಧ್ಯಾತ್ಮ ಎಂಬ ಸಮುದ್ರದಲ್ಲಿ ಈಜಬೇಕು: ಸ್ವಾಮೀಜಿ


ಮೈಸೂರಿನ ಸರಸ್ವತಿಪುರಂನಲ್ಲಿರುವ ಕೃಷ್ಣಧಾಮದಲ್ಲಿ ನಡೆಯುತ್ತಿರುವ ಪೇಜಾವರ ಮಠದ ಹಿರಿಯ, ಕಿರಿಯ ಶ್ರೀಗಳ ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಸೋಮವಾರ ಸಾಂಸ್ಕೃತಿಕ ಕಾರ‍್ಯಕ್ರಮಕ್ಕ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

''ಪೇಜಾವರ ಶ್ರೀಗಳು ಪ್ರವಚನದ ಮೂಲಕ ಎಲ್ಲರಿಗೂ ಒಳ್ಳೆಯ ವಿಚಾರಗಳನ್ನು ಬಿತ್ತುವ ಕಾರ‍್ಯವನ್ನು ಮಾಡುತ್ತಿದ್ದಾರೆ,''ಎಂದು ಹೇಳಿದರು.

ವಿದ್ವಾನ್‌ ಸಿ.ಎಚ್‌.ಶ್ರೀನಿವಾಸಮೂರ್ತಿ ಅವರು ಕರ್ಮಾನುಷ್ಠಾನದ ಅವಶ್ಯಕತೆ ವಿಷಯ ಕುರಿತು ಪ್ರವಚನ ನೀಡಿದರು. ''ಗುರಿ ಇದ್ದವರು ಅದನ್ನು ತಲುಪುವ ಮಾರ್ಗವನ್ನು ತಾವೇ ಕಂಡು ಕೊಳ್ಳುತ್ತಾರೆ. ದೇವರನ್ನು ಕಾಣಬೇಕು ಎಂಬುವವರು ಕೂಡ ಹಾಗೆಯೇ, ಭಗವಂತನ ಸೇವೆಯ ಮೂಲಕ ಆತನನ್ನು ಕಾಣುತ್ತಾರೆ,''ಎಂದರು.

''ನಿತ್ಯ ದೇವರ ಆರಾಧನೆ ಮಾಡಿ, ಅತಿಥಿಗಳಿಗೆ ಕೈಲಾದ ಸಹಾಯವನ್ನು ಮಾಡಬೇಕು. ಹಿರಿಯರನ್ನು ಗೌರವಿಸುವುದು, ಅವರನ್ನು ರಕ್ಷಿಸುವುದು ದೇವರಿಗೆ ಅರ್ಪಿತ,''ಎಂದು ತಿಳಿಸಿದರು.

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮಹಾಭಾರತ ಅನುಗ್ರಹ ಸಂದೇಶ ನೀಡಿದರು. ಕಿರಿಯ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ