ಆ್ಯಪ್ನಗರ

ಶತಾಬ್ದಿ ಎಕ್ಸ್‌ಪ್ರೆಸ್‌ ವೇಗ ಹೆಚ್ಚಳ: ಮೈಸೂರು- ಬೆಂಗಳೂರು ನಡುವೆ ಓಡಾಟಕ್ಕೆ ಇನ್ನು 2 ಗಂಟೆ ಸಾಕು

ನೈಋತ್ಯ ರೈಲ್ವೇ ವಿಭಾಗ ಜುಲೈ 1ರಿಂದ ಜಾರಿಗೆ ಬರುವಂತೆ ಹಲವು ರೈಲುಗಳ ವೇಗವನ್ನು ಹೆಚ್ಚಿಸಿದ್ದು, ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ಇನ್ನು 1:55 ನಿಮಿಷಗಳಲ್ಲಿ ಎರಡು ನಗರಗಳ ನಡುವಿನ ದೂರವನ್ನು ಕ್ರಮಿಸಲಿದೆ. ಇದರಿಂದ ಪ್ರಯಾಣಿಕರು ಎರಡು ಗಂಟೆಗೂ ಕಡಿಮೆ ಅವಧಿಯಲ್ಲಿ ಬೆಂಗಳೂರು=ಮೈಸೂರು ನಡುವೆ ಸಂಚರಿಸಬಹುದಾಗಿದೆ.

TNN 29 Jun 2019, 2:22 pm
ಮೈಸೂರು: ಜುಲೈ 1ರಿಂದ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ವೇಗ ಹೆಚ್ಚಿಸಲಾಗುತ್ತಿದ್ದು, 1:55 ನಿಮಿಷಗಳಲ್ಲಿ ಎರಡು ನಗರಗಳ ನಡುವೆ ಸಂಚರಿಸಲಿದೆ.
Vijaya Karnataka Web Indian Railway


ನೈಋತ್ಯ ರೈಲ್ವೆ ಪ್ರಕಟಿಸಿದ ಪರಿಷ್ಕೃತ ವೇಳಾಪಟ್ಟಿ ಪ್ರಕಾರ, ಈ ರೈಲು 1 ಗಂಟೆ 55 ನಿಮಿಷಗಳಲ್ಲಿ ಬೆಂಗಳೂರು-ಮೈಸೂರು ಅಂತರವನ್ನು ಕ್ರಮಿಸಲಿದೆ. ಮೈಸೂರಿನಿಂದ ಅಪರಾಹ್ನ 2:15ಕ್ಕೆ ಹೊರಡುವ ರೈಲು ಸಂಜೆ 4:10ಕ್ಕೆ ಬೆಂಗಳೂರು ತಲುಪುತ್ತದೆ ಎಂದು ನೈಋತ್ಯ ರೈಲ್ವೇ ಅಧಿಕಾರಿ ತಿಳಿಸಿದರು.

ಜುಲೈ 1ರಿಂದ ಶತಾಬ್ದಿ ಎಕ್ಸ್‌ಪ್ರೆಸ್ ಮಾತ್ರವೇ ಅಲ್ಲ, ಇನ್ನೂ ಹಲವು ರೈಲುಗಳ ವೇಗ ಹೆಚ್ಚಲಿದೆ. ಚೆನ್ನೈ- ಮೈಸೂರು ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ವೇಗವನ್ನು ಗಂಟೆಗೆ 10 ನಿಮಿಷಗಳನ್ನು ಹೆಚ್ಚಿಸಲಾಗಿದೆ. ಹುಬ್ಬಳ್ಳಿ-ಬೆಂಗಳೂರು- ಮೈಸೂರು ನಡುವಣ ವಿಶ್ವಮಾನವ ಎಕ್ಸ್‌ಪ್ರೆಸ್‌ ವೇಗವನ್ನು 15 ನಿಮಿಷಗ ಹೆಚ್ಚಿಸಲಾಗಿದೆ. ಹೊಸದಾಗಿ ಆರಂಭಿಸಲಾದ ಕಾಚಿಗುಡ ಎಕ್ಸ್‌ಪ್ರೆಸ್‌ ಮೈಸೂರು ಮತ್ತು ಬೆಂಗಳೂರು ನಡುವೆ 15 ನಿಮಿಷಗಳಷ್ಟು ವೇಗ ವರ್ಧಿಸಿಕೊಳ್ಳಲಿದೆ. ಹಳಿ ದ್ವಿಗುಣ ಮತ್ತು ವಿದ್ಯುದೀಕರಣ ಸೇರಿದಂತೆ ಹಲವು ಸುಧಾರಣೆಗಳ ಪರಿಣಾಮ ರೈಲುಗಳ ವೇಗ ಹೆಚ್ಚಳಗೊಂಡಿದೆ ಎಂದು ನೈಋತ್ಯ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯ ತಿಳಿಸಿದರು.

ಜುಲೈ 1ರಿಂದ ಜಾರಿಗೆ ಬರಲಿರುವ ನೂತನ ವೇಳಾಪಟ್ಟಿ www.irctc.co.in ಮತ್ತು and www.indianrail.gov.in ಜಾಲತಾಣಗಳಲ್ಲಿ ಲಭ್ಯವಿದೆ ಎಂದು ನೈಋತ್ಯ ರೈಲ್ವೇ ಶುಕ್ರವಾರ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ