ಆ್ಯಪ್ನಗರ

ಜೆಡಿಎಸ್‌ ಕಾರ್ಯಕರ್ತ ಎಂದ ತಹಸೀಲ್ದಾರ್‌ ಎತ್ತಂಗಡಿ

ತಾನು ಜೆಡಿಎಸ್‌ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ಮೈಸೂರು ತಹಸೀಲ್ದಾರ್‌ ರೇಣುಕುಮಾರ್‌ ಅವರನ್ನು ಎತ್ತಂಗಡಿ ಮಾಡಲಾಗಿದೆ.

Vijaya Karnataka 4 Apr 2019, 5:00 am
ಮೈಸೂರು: ತಾನು ಜೆಡಿಎಸ್‌ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ ಮೈಸೂರು ತಹಸೀಲ್ದಾರ್‌ ರೇಣುಕುಮಾರ್‌ ಅವರನ್ನು ಎತ್ತಂಗಡಿ ಮಾಡಲಾಗಿದೆ.
Vijaya Karnataka Web tahasildar elevated for anouns as jds activist
ಜೆಡಿಎಸ್‌ ಕಾರ್ಯಕರ್ತ ಎಂದ ತಹಸೀಲ್ದಾರ್‌ ಎತ್ತಂಗಡಿ


ಕೆಲ ತಿಂಗಳುಗಳ ಹಿಂದೆ ಮೈಸೂರಿನಲ್ಲಿ ತಹಸೀಲ್ದಾರರಾಗಿದ್ದ ರಮೇಶ್‌ ಬಾಬು ಹಾಗೂ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ತಹಸೀಲ್ದಾರರಾಗಿದ್ದ ರೇಣು ಕುಮಾರ್‌ ಅವರ ನಡುವೆ ನಡೆದ ಮೊಬೈಲ್‌ ಸಂಭಾಷಣೆ ಬಹಿಂಗಗೊಂಡು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು. ವರ್ಗವಾಗಿದ್ದರೂ ರಮೇಶ್‌ ಬಾಬು ಅಧಿಕಾರ ಹಸ್ತಾಂತರಿಸದ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಮಾತುಕತೆಯಾಗಿತ್ತು. ಈ ಸಂದರ್ಭ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರ ಹೆಸರು ಪ್ರಸ್ತಾಪವಾಗಿದ್ದವು. ''ತಾನು ಹೆಸರಿಗೆ ಮಾತ್ರ ತಹಸೀಲ್ದಾರನಾಗಿರುತ್ತೇನೆ, ನಿಮಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಿ,'' ಎಂದು ರೇಣುಕುಮಾರ್‌ ಹೇಳಿದ್ದರು. ರೇಣುಕುಮಾರ್‌ ನಮ್ಮ ಕಾರ್ಯಕರ್ತ ಎಂದು ರೇವಣ್ಣ ಅವರು ದೇವೇಗೌಡರಿಗೆ ಹೇಳಿದ್ದಾರೆ ಎಂದು ಸ್ವತಃ ರೇಣುಕುಮಾರ್‌ ಮಾತನಾಡಿರುವುದು ವೈರಲ್‌ ಆಗಿತ್ತು.

ತಹಸೀಲ್ದಾರರಿಬ್ಬರು ಬಹಿರಂಗವಾಗಿ ಜಾತಿ, ಪಕ್ಷದ ಕುರಿತು ಮಾತನಾಡಿ, ಕಾರ್ಯಕರ್ತ ಎಂದು ಹೇಳಿಕೊಂಡ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿ ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಆರ್‌ಟಿಐ ಕಾರ್ಯಕರ್ತರು ಜಿಲ್ಲಾಧಿಕಾರಿ ಹಾಗೂ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಅವರಿಗೆ ದೂರು ನೀಡಿದ್ದರು.

ಈ ಹಿಂದೆ ರಮೇಶ್‌ ಕುಮಾರ್‌ ಅವರನ್ನು ತುಮಕೂರು ಜಿಲ್ಲೆ ಮಧುಗಿರಿಗೆ ವರ್ಗಾಯಿಸಲಾಗಿತ್ತು. ಇದೀಗ ಮೈಸೂರಿನಲ್ಲಿದ್ದ ರೇಣು ಕುಮಾರ್‌ ಅವರನ್ನು ವರ್ಗಾಹಿಸಲಾಗಿದ್ದು, ಸ್ಥಳ ತೋರಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ