ಆ್ಯಪ್ನಗರ

ಗೋಹತ್ಯೆ ನಿಷೇಧ, ರಾಮಮಂದಿರ ನಿರ್ಮಾಣ ಆಗಲೇಬೇಕು: ಪೇಜಾವರ ಶ್ರೀ

ಈ ಬಾರಿ ಕೇಂದ್ರದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬಂದಿದ್ದು, ಬಹುಸಂಖ್ಯಾತರ ಆಶಯದಂತೆ ಗೋಹತ್ಯೆ ನಿಷೇಧ ಮತ್ತು ರಾಮಮಂದಿರ ನಿರ್ಮಾಣ ಆಗಲೇಬೇಕೆಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

Vijaya Karnataka 26 May 2019, 5:00 am
ಹುಣಸೂರು: ಈ ಬಾರಿ ಕೇಂದ್ರದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಬಂದಿದ್ದು, ಬಹುಸಂಖ್ಯಾತರ ಆಶಯದಂತೆ ಗೋಹತ್ಯೆ ನಿಷೇಧ ಮತ್ತು ರಾಮಮಂದಿರ ನಿರ್ಮಾಣ ಆಗಲೇಬೇಕೆಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
Vijaya Karnataka Web the ban on cow slaughter ram mandir must be built pajavar sri
ಗೋಹತ್ಯೆ ನಿಷೇಧ, ರಾಮಮಂದಿರ ನಿರ್ಮಾಣ ಆಗಲೇಬೇಕು: ಪೇಜಾವರ ಶ್ರೀ


ಉಡುಪಿಯಿಂದ ಮೈಸೂರಿಗೆ ತೆರಳುವ ಮಾರ್ಗಮಧ್ಯದಲ್ಲಿ ಹುಣಸೂರಿನ ರಾಘವೇಂದ್ರಸ್ವಾಮಿ ಮಠದಲ್ಲಿ ವಿಶ್ರಾಂತಿಗಾಗಿ ಆಗಮಿಸಿದ್ದ ವೇಳೆ ವಿಜಯಕರ್ನಾಟಕದೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಅವರು, ''ಬಿಜೆಪಿ ಎಂದರೆ ಹಿಂದೂಗಳ ಪಕ್ಷ ವೆಂದೇ ಪ್ರತಿಪಕ್ಷ ದವರು ಬಿಂಬಿಸುತ್ತಲೇ ಬಂದಿದ್ದರು. ಈ ಬಾರಿ ಎಲ್ಲ ಜನರು ಒಂದಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈಗಂತೂ ರಾಮಮಂದಿರ ನಿರ್ಮಾಣ ಹಾಗೂ ಗೋಹತ್ಯೆ ನಿಷೇಧಕ್ಕೆ ಶಿವಸೇನೆ ಸಹಮತ ವ್ಯಕ್ತಪಡಿಸಿರುವುದರಿಂದ ಯಾವುದೇ ಅಡೆತಡೆ ಇರುವುದಿಲ್ಲ. ಹೀಗಾಗಿ ಈ ಎರಡೂ ಮಹತ್ಕಾರ್ಯಗಳನ್ನು ಮೋದಿ ನೇತೃತ್ವದ ಸರಕಾರ ಸಾಕಾರಗೊಳಿಸಬೇಕೆಂದು,'' ಒತ್ತಾಯಿಸಿದರು. ''ಅಲ್ಲದೆ, ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಮತ್ತು ದೇಶದ ರಕ್ಷ ಣೆಗೆ ಬದ್ಧರಾಗಿರಬೇಕೆಂದು,'' ಆಶಿಸಿದರು.

''ಬಹುಸಂಖ್ಯಾತರರಿರುವ ಹಿಂದೂ ರಾಷ್ಟ್ರದಲ್ಲಿ ಅನ್ಯಧರ್ಮೀಯರ ಮನವೊಲಿಸುವ ಮೂಲಕ ಗೋಹತ್ಯೆ ನಿಷೇಧಕ್ಕೆ ಕಠಿಣ ಕಾನೂನು ಅಗತ್ಯವಿದ್ದು, ಈ ಬಗ್ಗೆ ಪ್ರಧಾನಿ ದೃಢ ನಿಲುವು ತಳೆಯಬೇಕು ಹಾಗೂ ಮೋದಿ ಅವರು ನೀಡಿರುವ ಭರವಸೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಲ ಪಕ್ವವಾಗಿದ್ದು, ಅನ್ಯಧರ್ಮೀಯರ ಮನವೊಲಿಸುವ ಮೂಲಕ ರಾಮಜನ್ಮಭೂಮಿಯಲ್ಲಿ ಮಂದಿರ ಮರು ನಿರ್ಮಾಣ ಆಗಬೇಕಿದೆ,''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ