ಆ್ಯಪ್ನಗರ

ಅಂಬಾವಿಲಾಸ ಅರಮನೆಯ ಚಾವಣಿಯ ಕುಸಿತ: ಆತಂಕ

ಮೈಸೂರು ನಗರದ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಚಾವಣಿಯ ಅಂಚು ಕುಸಿದಿದೆ.

Vijaya Karnataka 26 Sep 2019, 5:00 am
ಮೈಸೂರು: ಮೈಸೂರು ನಗರದ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಚಾವಣಿಯ ಅಂಚು ಕುಸಿದಿದೆ.
Vijaya Karnataka Web the collapse of the ceiling of ambawilasa palace anxiety
ಅಂಬಾವಿಲಾಸ ಅರಮನೆಯ ಚಾವಣಿಯ ಕುಸಿತ: ಆತಂಕ


ದಸರಾ ಮಹೋತ್ಸವ ಸಂಭ್ರಮಾಚರಣೆ ಮನೆ ಮಾಡುವ ಮುನ್ನವೇ ಅರಮನೆಯ ಸೆಸ್ಕ್‌ ಕಚೇರಿಯ ಹಿಂಬದಿ ಇರುವ ಶೌಚಾಲಯದ ಮೇಲಂತಸ್ತಿನ ಚಾವಣಿ ಕುಸಿದಿದ್ದು , ಸಾರ್ವಜನಿಕರಲ್ಲಿಆತಂಕ ಮೂಡಿಸಿದೆ.

ಚಾವಣಿ ಕುಸಿದುದ್ದರಿಂದ ಕೆಳಕ್ಕೆ ಸುಣ್ಣದ ಗಾರೆ ಬಿದ್ದಿದ್ದು, ಅರಮನೆಯ ಸಿಬ್ಬಂದಿ ಗಾರೆ ಮತ್ತು ಮಣ್ಣನ್ನು ತೆರವುಗೊಳಿಸಿದರು.

ಭಾನುವಾರ ಸುರಿದ ಮಳೆಯಿಂದಾಗಿ ಅರಮನೆಯ ಎಡಭಾಗದ ಚಾವಣಿಯಲ್ಲಿತ್ರಿಕೋನಾಕಾರದ ವಿನ್ಯಾಸ ಹೊಂದಿರುವಲ್ಲಿಒಂದು ಅಂಚು ಕುಸಿದಿದೆ.

ಕೆಲವು ತಿಂಗಳಿಂದ ಮಳೆ ಸುರಿಯುತ್ತಲೇ ಇರುವುದರಿಂದ ಕಟ್ಟಡ ಶೀತಗೊಂಡಿರುತ್ತದೆ. ಈಗ ದುರಸ್ತಿಗೆಂದು ಮೇಲೆ ಹತ್ತಿದರೆ, ಅಥವಾ ಏನಾದರೂ ಕಾಮಗಾರಿ ನಡೆಸಲು ಮುಂದಾದರೆ ಇನ್ನೂ ಹೆಚ್ಚಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಅದ್ದರಿಂದ ತಜ್ಞರೊಂದಿಗೆ ಚರ್ಚಿಸಿ ಅಗತ್ಯ ರೂಪುರೇಷೆ ರಚಿಸಿ ಕ್ರಮಕೈಗೊಳ್ಳಬೇಕು ಎಂದು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ತಿಳಿಸಿದರು.

ರಾಜವಂಶಸ್ಥರು ವಾಸ ಇರುವ ಭಾಗವೂ ಸೇರಿದಂತೆ ಅರಮನೆ ಮಂಡಳಿಗೆ ಸೇರಿದ ಭಾಗದಲ್ಲಿಪ್ರತಿವರ್ಷದ ಮಳೆಗಾಲದಲ್ಲೂಸಣ್ಣಪುಟ್ಟ ಸಮಸ್ಯೆಗಳು ಉಂಟಾಗುತ್ತಲೇ ಇರುತ್ತದೆ. ಅಂತಹ ಸಂದರ್ಭದಲ್ಲಿಇಬ್ಬರೂ ಸೇರಿ ಅಗತ್ಯ ಕ್ರಮಕೈಗೊಳ್ಳುತ್ತಲೇ ಇದ್ದೇವೆ ಎಂದರು.

ಗುಮ್ಮಟಗಳು, ಕಮಾನುಗಳು, ಗೋಪುರಗಳಿಂದ ಕೂಡಿರುವ, ಇಂಡೋ ಸಾರ್ಸೆನಿಕ್‌ ಶೈಲಿಯಲ್ಲಿರುವ ಈ ಅಂಬಾವಿಲಾಸ ಅರಮನೆಯನ್ನು ಬಹು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಅಲ್ಲದೆ ಚಾವಣಿಯ ಮೇಲ್ಭಾಗದಲ್ಲಿಏರಿಳಿತದ ಮಾದರಿಯಲ್ಲಿನಿರ್ಮಿಸಲಾಗಿದೆ. ನೀರು ಸರಾಗವಾಗಿ ಹರಿದು ಹೋಗಲು ದೋಣಿಗಳನ್ನು ಅಳವಡಿಸಲಾಗಿದೆ. ಆದ್ದರಿಂದ ಮಳೆ ನೀರು ಸೋರಲು ಸಾಧ್ಯವೆ ಇಲ್ಲ. ಧಾರಾಕಾರ ಮಳೆ ಬಂದ ಸಂದರ್ಭದಲ್ಲಿದೋಣಿಯೂ ತುಂಬಿ ಹರಿದಾಗ ಹೆಚ್ಚುವರಿ ನೀರು ಕಂಬಗಳ ಬಳಿ ಹೊರ ಹೋಗುವಂತೆ ವಿನ್ಯಾಸ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ