ಆ್ಯಪ್ನಗರ

ಕೋರ್ಟ್‌ ತೀರ್ಪು ಮುನ್ನ ದಿನ ಆತ್ಮಹತ್ಯೆ

ನ್ಯಾಯಾಲಯದಿಂದ ತೀರ್ಪು ಹೊರ ಬೀಳುವ ಮುನ್ನ ದಿನ ತಾಲೂಕಿನ ಬದನವಾಳು ಗ್ರಾಮದಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು...

Vijaya Karnataka 20 Feb 2018, 5:00 am

ನಂಜನಗೂಡು: ನ್ಯಾಯಾಲಯದಿಂದ ತೀರ್ಪು ಹೊರ ಬೀಳುವ ಮುನ್ನ ದಿನ ತಾಲೂಕಿನ ಬದನವಾಳು ಗ್ರಾಮದಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು.

ಗ್ರಾಮದ ಮಹದೇವಪ್ಪ (65) ಮೃತರು. ಅವರಿಗೆ ಪತ್ನಿ ಸೇರಿದಂತೆ ಇಬ್ಬರು ಪುತ್ರರು ಇದ್ದಾರೆ. ಭಾನುವಾರ ರಾತ್ರಿ ವಿಷ ಸೇವಿಸಿದ ಮಹದೇವಪ್ಪ ಅವರನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಅಸುನೀಗಿದ್ದಾರೆ.

ಪ್ರಕರಣದ ವಿವರ: ಮಹದೇವಪ್ಪ ಅವರ ಮಗ ಚಂದ್ರು ಎಂಬಾತ ಆರು ವರ್ಷಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಕೈದಿಯಾಗಿ ಸೆರೆವಾಸ ಅನುಭವಿಸುತ್ತಿದ್ದನು. ಒಂದು ವರ್ಷದ ಹಿಂದೆ ತಂದೆ ಮಹದೇವಪ್ಪ ಪೆರೋಲ್‌ ಜಾಮೀನಿನ ಮೇಲೆ ತಮ್ಮ ಮಗನನ್ನು ಕರೆತಂದಿದ್ದರು. ಆದರೆ ರಜೆ ಅವಧಿ ಮುಗಿದ ಬಳಿಕ ಜೈಲಿಗೆ ತೆರಳದೆ ಮಗ ಚಂದ್ರು ಕಣ್ಮರೆಯಾಗಿದ್ದ. ಇದರಿಂದ ಪೊಲೀಸರು ಜಾಮೀನುದಾರರಾಗಿದ್ದ ತಂದೆ ಮಹದೇವಪ್ಪ ವಿರುದ್ಧ ಪ್ರಕರಣ ದಾಖಲು ಮಾಡಿ, ತಪ್ಪಿಸಿಕೊಂಡಿದ್ದ ಆರೋಪಿ ಚಂದ್ರುನನ್ನು ವಶಕ್ಕೆ ಪಡೆದು ಜೈಲಿಗೂ ಅಟ್ಟಿದ್ದರು. ಮಹದೇವಪ್ಪ ಮೇಲಿನ ಪ್ರಕರಣ ವಿಚಾರಣೆ ಹಂತ ಪೂರ್ಣಗೊಂಡು ಫೆಬ್ರವರಿ 19ರ ಸೋಮವಾರ ನ್ಯಾಯಾಲಯದ ತೀರ್ಪು ಪ್ರಕಟಣೆಗೆ ದಿನ ನಿಗದಿಯಾಗಿತ್ತು. ಹೀಗಾಗಿ ನ್ಯಾಯಾಲಯದಿಂದ ತನಗೆ ಶಿಕ್ಷೆ ಪ್ರಕಟವಾಗಲಿದೆ ಎಂಬ ಆತಂಕದಲ್ಲಿ ಭಾನುವಾರ ರಾತ್ರಿ ವಿಷ ಸೇವಿಸಿ ಮಹದೇವಪ್ಪ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಮೃತಪಟ್ಟರು.

ದೊಡ್ಡಕವಲಂದೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಂತರಿಸಲಾಗಿದೆ.

Vijaya Karnataka Web the day before the courts verdict is a suicide
ಕೋರ್ಟ್‌ ತೀರ್ಪು ಮುನ್ನ ದಿನ ಆತ್ಮಹತ್ಯೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ