ಆ್ಯಪ್ನಗರ

ಶ್ರೀ ಪ್ರಜ್ಞಾರಾಜೇಂದ್ರ ತೀರ್ಥ ಸ್ವಾಮೀಜಿ ನಿಧನ

ಶ್ರೀಗಳು ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಮೈಸೂರು ತಾಲೂಕು ಇಲವಾಲ ಹೋಬಳಿಯ ಸಾಗರ ಕಟ್ಟೆ ಮಠದ ಶಾಖೆಯ ಶ್ರೀ ಪ್ರಜ್ಞಾರಾಜೇಂದ್ರ ತೀರ್ಥ ಸ್ವಾಮೀಜಿ (89) ಮಂಗಳವಾರ ಮೈಸೂರಿನ ಕೃಷ್ಣಮೂರ್ತಿಪುರಂನ ಸಾಗರಕಟ್ಟೆ ಮಠದ ಶಾಖೆಯಲ್ಲಿ ದೈವಾಧಿಧೀನರಾದರು.

Vijaya Karnataka 11 Sep 2019, 5:00 am
ಮೈಸೂರು: ಶ್ರೀಗಳು ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಮೈಸೂರು ತಾಲೂಕು ಇಲವಾಲ ಹೋಬಳಿಯ ಸಾಗರ ಕಟ್ಟೆ ಮಠದ ಶಾಖೆಯ ಶ್ರೀ ಪ್ರಜ್ಞಾರಾಜೇಂದ್ರ ತೀರ್ಥ ಸ್ವಾಮೀಜಿ (89) ಮಂಗಳವಾರ ಮೈಸೂರಿನ ಕೃಷ್ಣಮೂರ್ತಿಪುರಂನ ಸಾಗರಕಟ್ಟೆ ಮಠದ ಶಾಖೆಯಲ್ಲಿ ದೈವಾಧಿಧೀನರಾದರು.
Vijaya Karnataka Web the death of sri prajnarajendra theertha swamiji
ಶ್ರೀ ಪ್ರಜ್ಞಾರಾಜೇಂದ್ರ ತೀರ್ಥ ಸ್ವಾಮೀಜಿ ನಿಧನ


ಸಂಪ್ರದಾಯ, ಆಚಾರ- ವಿಚಾರಗಳನ್ನು ನಿಷ್ಟೆಯಿಂದ ಪಾಲನೆ ಮಾಡುವುದನ್ನು ಕಂಡು 1968ರಲ್ಲಿ ಪ್ರದ್ಯುಮ್ನ ತೀರ್ಥರು ಇವರಿಗೆ ದೀಕ್ಷೆ ನೀಡಿದ್ದರು. ಮಾಧ್ವ ಸಂಪ್ರದಾಯದ ಪ್ರಕಾರ ಸ್ವಾಮೀಜಿಯಾಗಿ ದೀಕ್ಷೆ ಪಡೆದ ಸಂದರ್ಭದಲ್ಲಿ ಇವರು ಕುಟುಂಬವನ್ನು ತೊರೆದಿದ್ದರು. ಇಲವಾಲ ಬಳಿಯ ಸಾಗರಕಟ್ಟೆ ಮಠದ ಶಾಖೆಯಲ್ಲಿ ಸ್ವಾಮೀಜಿ ಅವರ ಬೃಂದಾವನ ಕಾರ್ಯಕ್ರಮ ಮಂಗಳವಾರ ಆರಂಭವಾಗಿದ್ದು, ಬುಧವಾರ ನಾನಾ ಸಂಪ್ರದಾಯ, ಧಾರ್ಮಿಕ ಆಚರಣೆಗಳೊಂದಿಗೆ ಪೂರ್ಣಗೊಳ್ಳಲಿದೆ ಎಂದು ಸಾಗರ ಕಟ್ಟೆ ಮಠದ ಮುಖ್ಯಸ್ಥರಾದ ಸುಬ್ರಹ್ಮಣ್ಯತೀರ್ಥ ಅವರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ