ಆ್ಯಪ್ನಗರ

ದೊಡ್ಡಕಾಟೂರಿನಲ್ಲಿ ಬೋನಿಗೆ ಬಿದ್ದ ಚಿರತೆ

ಜಯಪುರ ಹೋಬಳಿ ದೊಡ್ಡಕಾಟೂರು ಗ್ರಾಮದ ಮಹೇಶ್‌ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿನಲ್ಲಿ ಸುಮಾರು ಮೂರುವರೆ ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.

Vijaya Karnataka 17 Jul 2018, 5:00 am
ಮೈಸೂರು : ಜಯಪುರ ಹೋಬಳಿ ದೊಡ್ಡಕಾಟೂರು ಗ್ರಾಮದ ಮಹೇಶ್‌ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿನಲ್ಲಿ ಸುಮಾರು ಮೂರುವರೆ ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.
Vijaya Karnataka Web the leopard that fell to the bolt in bigcatur
ದೊಡ್ಡಕಾಟೂರಿನಲ್ಲಿ ಬೋನಿಗೆ ಬಿದ್ದ ಚಿರತೆ


ದೊಡ್ಡಕಾಟೂರು ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಂಡು ಜಾನುವಾರುಗಳ ಮೇಲೆ ದಾಳಿ ಮಾಡಿತ್ತು. ಕಳೆದ ತಿಂಗಳು ಮಹೇಶ್‌ ಎಂಬುವವರ ಜಮೀನಿನ ಬಳಿ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತಂಕಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು.

ಆರ್‌ಎಫ್‌ಒ ದೇವರಾಜು ಅವರು ಪರಿಶೀಲನೆ ನಡೆಸಿ ಚಿರತೆ ಸೆರೆಗೆ ಬೋನ್‌ ಇಡುವಂತೆ ಸೂಚಿಸಿದ್ದರು. ಅದರಂತೆ ಜೂ. 19ರಂದು ಮಹೇಶ್‌ ಅವರ ಜಮೀನಿನ ಬಳಿ ಬೋನ್‌ ಇಟ್ಟಿದ್ದರು.

ಮುಂಜಾನೆ 6ರ ಸಮಯದಲ್ಲಿ ಚಿರತೆ ಬೋನಿಗೆ ಬಿದಿದ್ದೆ. ಚಿರತೆ ಶಬ್ಧ ಕೇಳಿದ ಮಹೇಶ್‌, ಬೋನ್‌ ಬಳಿ ಬಂದು ನೋಡಿದಾಗ ಚಿರತೆ ಸೆರೆಯಾಗಿರುವುದು ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಆರ್‌ಎಫ್‌ಒ ದೇವರಾಜು ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಾರ‍ಯಚರಣೆಯಲ್ಲಿ ಡಿಆರ್‌ಎಫ್‌ಒ ವಿನೋದ್‌ಕುಮಾರ್‌, ರಾಜೇಗೌಡ, ತ್ಯಾಗರಾಜ್‌, ವಾಚರ್‌ ಕುನ್ನಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ